ಕಲಬುರಗಿ: ಇಂದು ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಗಿಡ ಮರಗಳನ್ನು ಕಡಿಯುವುದು, ಕಾರ್ಖಾನೆಗಳು ಬಿಡುವ ಅಶುದ್ದ ಗಾಳಿ ಮತ್ತಿತರ ಕಾರಣದಿಂದಾಗಿ ಇಂದು ಪರಿಸರ ಮಾಲಿನ್ಯ ವಾಗುತ್ತಿದೆ, ಇದು ಮನು ಕುಲಕ್ಕೆ ಅಪಾಯಕಾರಿ ಬೆಳವಣಿಗೆಯಾಗಿದೆ, ಆದ್ದರಿಂದ ನಾವೆಲ್ಲರೂ ಸೇರಿ ಪರಿಸರ ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಮಹಾಗಾಂವ ಕ್ರಾಸ್ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಶರಣಪದಪ ಮಾಳಗಿ ಹೇಳಿದರು.
ಕಮಲಾಪುರ ತಾಲೂಕಿನ ಮಹಾಗಾಂವ ಕ್ರಾಸ್ ನಲ್ಲಿರುವ ಶ್ರೀ ಮಹಾಂತೇಶ್ವರ ಪ್ರೌಢಶಾಲೆಯಲ್ಲಿ ಕ. ಸಾ. ಪ. ಮಹಾಗಾಂವ ವಲಯ ಘಟಕ ವತಿಯಿಂದ ಪರಿಸರ ಸಂರಕ್ಷಣೆ ಜಾಗೃತಿ ಸಪ್ತಾಹ ಹಾಗೂ ವಿಶೇಷ ಉಪನ್ಯಾಸ ವನ್ನು ಉದ್ದೇಶಿಸಿ ಮಾತನಾಡಿದ ಅವರು ನಮ್ಮ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸ್ವಚ್ಚತೆ ಕಾಪಾಡಬೇಕು, ಹೆಚ್ಚೆಚ್ಚು ಗಿಡಮರಗಳನ್ನು ಬೆಳೆಸಬೇಕು, ಶುದ್ದ ಪರಿಸರವಿದ್ದರೆ ಮಾತ್ರ ಉತ್ತಮ ಆರೋಗ್ಯ ಹೊಂದಲು ಸಾಧ್ಯವಾಗಿದೆ ಎಂದರು.
ಬಿಜೆಪಿ ಮುಖಂಡ ಮಲ್ಲಿಕಾರ್ಜುನ ಮರತೂರಕರ ಮಾತನಾಡಿ ಗಿಡಮರಗಳನ್ನು ಮಕ್ಕಳಂತೆ ಜೋಪಾನ ಮಾಡಿ ಬೆಳೆಸಿದರೆ ನಮಗೆ ಮತ್ತು ನಮ್ಮ ಮುಂದಿನ ಪೀಳಿಗೆಗೆ ಉತ್ತಮ ಆರೋಗ್ಯ ಹೊಂದಲು ಸಾಧ್ಯವಾಗುತ್ತದೆ ಎಂದರು.
ಕಮಲಾಪುರ ಕಸಾಪ ತಾಲೂಕು ಅಧ್ಯಕ್ಷ ಸುರೇಶ ಲೇಂಗಟಿ , ಮಾಜಿ ಭೂ ನ್ಯಾಯ ಮಂಡಳಿ ಸದಸ್ಯ ಮಜರ ಅಲಿ ದರ್ಜಿ , ಮಹಾಗಾಂವ ಕಸಾಪ ವಲಯ ಅಧ್ಯಕ್ಷ ಅಂಬಾರಾಯ ಮಡ್ಡೆ, ದಲಿತ ಮುಖಂಡ ಮಹೇಶ ಪಲ್ಲಾ ಮಾತನಾಡಿದರು.
ಶಿವಯೋಗಿ ಕಳ್ಳಿಮಠ, ನಾಗರಾಜ ಕಳ್ಳಿಮಠ ,ಮುಖ್ಯ ಗುರು ರೇವಣಸಿದ್ದಪ್ಪ ನಿಂಬಾಜಿ, ಅಜರ ಪಟೇಲ, ಪೂಜಾ ಶಿವಯೋಗಿ, ನಾಗರಾಜ ಕಳ್ಳಿಮಠ,ರಾಜಕುಮಾರ ಬೆಳ್ಳೂರ್ಗೆ ನಿರೂಪಿಸಿದರು, ಮುರುಘರಾಜ ಹಿರೆಮಠ ಸ್ವಾಗತಿಸಿದರು, ಸಂತೋಷ ಪಾಟೀಲ ವಂದಿಸಿದರು.