ಕಲಬುರಗಿ: ಮಾಜಿ ಮಹಾಪೌರರು ಹಾಗೂ ಕಾಂಗ್ರೆಸ್ ಪಕ್ಷದ ನಾಯಕ ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾ ಸಮಾಜದ ಜಿಲ್ಲಾದ್ಯಕ್ಷರಾದ ಶರಣು ಮೋದಿ ಅವರಿಗೆ ರಾಜ್ಯದ ಯಾವುದಾದರೂ ನಿಗಮ ಮಂಡಳಿಗೆ ಅಧ್ಯಕ್ಷರನ್ನಾಗಿ ನೇಮಕ ಮಾಡಬೇಕು ಎಂದು ಕಾಂಗ್ರೆಸ್ ಯುವ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಓಂಕಾರ ವಠಾರ(ಕೆರಿಬೋಸಗಾ) ಅವರು ಕಾಂಗ್ರೆಸ್ ಪಕ್ಷದ ವರಿಷ್ಠರಲ್ಲಿ ಮನವಿ ಮಾಡಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು, ಶರಣು ಮೋದಿ ಅವರು ಕಾಂಗ್ರೆಸ್ ಪಕ್ಷದಲ್ಲಿ ಸುಮಾರು 25 ವರ್ಷಗಳಿಂದ ಸಕ್ರಿಯ ಕಾರ್ಯಕರ್ತರಾಗಿ,ಹಾಗೂ ಪಕ್ಷದ ನಿಷ್ಠಾವಂತ ನಾಯಕನಾಗಿ ಹಲವಾರು ರೀತಿಯ ಪಕ್ಷಕ್ಕಾಗಿ ತಮ್ಮದೇ ಕೊಡುಗೆ ನೀಡಿ ಕೊಡುಗೆ ನೀಡಿದ್ದಾರೆ. ಮತ್ತು ಪಕ್ಷದ ಅಭ್ಯರ್ಥಿಗಳ ಗೆಲುವಿಗಾಗಿ ಹಗಲಿಳಿರುಳು ಸೇವೆ ಸಲ್ಲಿಸಿದ್ದಾರೆ.ಅವರು ಮಹಾನಗರ ಪಾಲಿಕೆಯ ಮಹಾಪೌರರಾದ ನಂತರ ಪಕ್ಷದಲ್ಲಿ ಯಾವುದೇ ಉನ್ನತ ಸ್ಥಾನವನ್ನು ತೆಗೆದುಕೊಂಡಿಲ್ಲ.ಹೀಗಾಗಿ ಅವರಿಗೆ ರಾಜ್ಯದ ಯಾವುದಾದರೂ ನಿಗಮ ಮಂಡಳಿಗೆ ಅಧ್ಯಕ್ಷರನ್ನಾಗಿ ನೇಮಕ ಮಾಡಬೇಕೆಂದು ಅವರು ಕಾಂಗ್ರೆಸ್ ಪಕ್ಷದ ವರಿಷ್ಠರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಅನೀಲ ಪಟ್ಟಣಕರ್,ರಮೇಶ ಸನಗುಂದ, ಶಾಂತಕುಮಾರ ಸಾವಳಗಿ,ನಿಸ್ಸಾರ ಅಹಮದ ಖಾನ,ರಾಜು ಹೊಸಮನಿ,ರಾಮಚಂದ್ರ ಬಬಲಾದ, ಇಸ್ಮಾಯಿಲ್ ಬೀಮಳ್ಳಿ,ಸಂಜು ಪಟ್ಟಣ,ಕಲ್ಯಾಣಿ ಜಾಫರಬಾದ,ಸಂತೋಷ ಸೈಯದ ಚಿಂಚೋಳಿ,ಪ್ರಕಾಶ ಕಣ್ಣಿ,ಅಸ್ಲಂ ಸಿಂದಗಿ ಸೇರಿದಂತೆ ಇತರರು ಒತ್ತಾಯಿಸಿದ್ದಾರೆ.