ವಿವಾದಾತ್ಮಕ ಬಲಪಂಥೀಯರಿಂದ ನೂತನ ಶಾಸಕರಿಗೆ ಮೋಟಿವೇಶನ್ ಭಾಷಣಕ್ಕೆ ಸಿಪಿಐ(ಎಂ) ತಕರಾರು

0
18

ಕಲಬುರಗಿ: ಮೊದಲಬಾರಿ ವಿಧಾನ ಸಭೆಗೆ ಪ್ರವೇಶಿಸಿದ ಶಾಸಕರಿಗೆ ತರಬೇತಿ ಕಾರ್ಯಕ್ರಮ ನಡೆಸುವ ಬಗ್ಗೆ ನೂತನ ವಿಧಾನ ಸಭೆಯ ಸಭಾಧ್ಯಕ್ಷರಾದ ಯು.ಟಿ.ಖಾದರ್ ತೀರ್ಮಾನಿಸಿದ್ದು, ಮೊದಲಬಾರಿ ವಿಧಾನ ಸಭೆಗೆ ಪ್ರವೇಶಿಸಿದ ಶಾಸಕರಿಗೆ ವಿವಾದಾತ್ಮಕ ಬಲಪಂಥೀಯರಿಂದ ಮೋಟಿವೇಶನ್ ಭಾಷಣ ಮಾಡಿಸುತ್ತಿರುವುದು ಖಂಡನೀಯವಾಗಿದೆ ಎಂದು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ) ಕಲಬುರಗಿ ಜಿಲ್ಲಾ ಸಮಿತಿಯ ಕಾರ್ಯದರ್ಶಿ ಕೆ ನೀಲಾ ತಕರಾರು ವ್ಯಕ್ತಪಡಿಸಿದ್ದಾರೆ.

ಮೊದಲ ಬಾರಿ  ಆಯ್ಕೆಯಾದ ಶಾಸಕರಿಗೆ ತರಬೇತಿ ನೀಡುವ ಸಂದರ್ಭದಲ್ಲಿ  ಡಾ. ರವಿಶಂಕರ್ ಗುರೂಜಿ, ಡಾ. ವೀರೇಂದ್ರ ಹೆಗಡೆ, ಡಾ.ಗುರುರಾಜ್ ಕರ್ಜಗಿ, ಬ್ರಹ್ಮಕುಮಾರಿ ಆಶಾದೀದಿ, ಮೊಹಮದ್ ಕುಂಇ ಮುಂತಾದ ವಿವಾದಾತ್ಮಕ ವ್ಯಕ್ತಿಗಳಿಂದ  ಭಾಷಣ ಮಾಡಿಸಲು ಕ್ರಮ ವಹಿಸಿದ ತಮ್ಮ ನಡಾವಳಿ ಆಶ್ಚರ್ಯಕರವಾಗಿದೆ. ಇದು ಅನಗತ್ಯವಾಗಿತ್ತು. ಸಾರ್ವಜನಿಕರ ನಡುವೆ ಇದು ತಪ್ಪು ಸಂದೇಶ ರವಾನಿಸಿದೆ ಎಂದು ತಿಳಿಸಿದ್ದಾರೆ.

Contact Your\'s Advertisement; 9902492681

ರಾಜಕೀಯದಿಂದ ಧರ್ಮವನ್ನು ಪ್ರತ್ಯೇಕಿಸುವುದೇ ಜಾತ್ಯಾತೀತತೆ ಅಥವಾ ಧರ್ಮ ನಿರಪೇಕ್ಷತೆಯೆಂದು  ದೇಶದ ಜಾತ್ಯತೀತ ಸ್ವರೂಪದ ಕುರಿತಂತೆ ಸಂವಿಧಾನ ಹೇಳುತ್ತಿರುವಾಗ, ವಿವಾದಾತ್ಮಕ ಇಂತಹ ವ್ಯಕ್ತಿಗಳನ್ನು ನವ ಶಾಸಕರ ತರಬೇತಿಯಲ್ಲಿ ಭಾಗಿಯಾಗಲು ಕರೆದಿರುವುದು ದೇಶದ ಜಾತ್ಯತೀತ ಸ್ವರೂಪಕ್ಕೆ ಧಕ್ಕೆಯೆಂದು ಸಿಪಿಐ(ಎಂ) ಭಾವಿಸುತ್ತದ್ದು, ಇವರು ಮಾಡುವ ಮೋಟಿವೇಶನಲ್ ಭಾಷಣ ದೇಶದ  ಜಾತ್ಯತೀತ ಸ್ವರೂಪಕ್ಕೆ ಪೂರಕವಾಗಿರುತ್ತದೆಯೇ ? ಈ ಕುರಿತು ರಾಜ್ಯದ ಜನತೆಗೆ ವಿಧಾನ ಸಭಾದ್ಯಕ್ಷರು ಸ್ಪಷ್ಠೀಕರಣ ನೀಡಬೇಕೆಂದು ಆಗ್ರಹಿಸಿದ್ದಾರೆ.

ನವ ಶಾಸಕರು ದೇಶದ ಸಂವಿಧಾನ ಮತ್ತು ಅದರ ಆಶಯವಾದ ದೇಶದ ಒಕ್ಕೂಟ ಹಾಗೂ ಜಾತ್ಯತೀತ ಸ್ವರೂಪವನ್ನು ಅರ್ಥೈಸಿಕೊಳ್ಳಲು ಇವರ ಭಾಗವಹಿಸುವಿಕೆ ಯಾವ ರೀತಿಯಲ್ಲಿ ನೆರವಾಗುತ್ತದೆ ಎಂದು ತಾವು ಭಾವಿಸಿದ್ದೀರಿ?. ಈ ಕೆಲ ಅನಗತ್ಯ ವಿವಾದಾತ್ಮಕ ವ್ಯಕ್ತಿಗಳ ಭಾಗವಹಿಸುವಿಕೆಯನ್ನು ಕೈ ಬಿಡುವಂತೆ ಪತ್ರಿಕಾ ಪ್ರಕಟಣೆ ಮೂಲಕ ಒತ್ತಾಯಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here