ಜಿ.ಪಂ. ಸಿ.ಇ.ಓ. ಡೋಣಗಾಂವ ಗ್ರಾಮ ಪಂಚಾಯಿತಿಗೆ ಭೇಟಿ

0
18

ಕಲಬುರಗಿ; ಕಲಬುರಗಿ ಜಿಲ್ಲಾ ಪಂಚಾಯತಿ ನೂತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಭನ್ವರ್ ಸಿಂಗ್ ಮೀನಾ ಅವರು ಬುಧವಾರ ಚಿತ್ತಾಪೂರ ತಾಲೂಕಿನ ಡೋಣಗಾಂವ ಗ್ರಾಮ ಪಂಚಾಯತಿಗೆ ಭೇಟಿ ನೀಡಿದರು.

ಈ ಗ್ರಾಮ ಪಂಚಾಯತಿಗೆ ಸ್ವಂತ ಕಟ್ಟಡ ಇಲ್ಲದಿರುವುದು ಕಂಡುಬಂದಿದ್ದು, ಅದೇ ರೀತಿ ಕೂಡಲೇ ಬಾಪೂಜಿ ಸೇವಾ ಕೇಂದ್ರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪಂಚಾಯತ್‍ಗೆ ಪ್ರಸ್ತಾವನೆ ಸಲ್ಲಿಸಬೇಕೆಂದು ಪಂಚಾಯತ್ ಅಭಿವೃಧಿ ಅಧಿಕಾರಿಗಳಿಗೆ ಸೂಚಿಸಿದಲ್ಲದೇ ಸ್ಥಳದಲ್ಲಿದ್ದ ಗ್ರಾಮಸ್ಥರ ಜೊತೆ ಚರ್ಚಿಸಿ ಕುಡಿಯುವ ನೀರಿನ ಮಾಹಿತಿ ನೀಡಲಾಯಿತು. ಪಂಚಾಯತಿ ವ್ಯಾಪ್ತಿಯ ರಾಜೋಳ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆಯಿರುವುದರಿಂದ ಟ್ಯಾಂಕರ್ ಮೂಲಕ ಶುದ್ಧ ಕುಡಿಯುವ ನೀರು ಸರಬರಾಜು ಮಾಡುತ್ತಿರುವುದು ಕುರಿತು ಪರಿಶೀಲನೆ ನಡೆಸಿದರು.

Contact Your\'s Advertisement; 9902492681

ಗ್ರಾಮದಲ್ಲಿರುವ ಜಲಮೂಲ ವೀಕ್ಷಣೆ ಮಾಡಿ ಸದರಿ ನೀರಿನ ಮಾದರಿಯನ್ನು ಜಿಲ್ಲಾ ಪ್ರಯೋಗಾಲಯಕ್ಕೆ ತಪಾಸಣೆ ಮಾಡಲು ಕಳುಹಿಸಲಾಯಿತು. ಕುಡಿಯುವ ನೀರಿನ ಸಮಸ್ಯೆ ನಿವಾರಣೆಗಾಗಿ ಕೂಡಲೇ ಅಂತರ್ಜಲ ತಜ್ಞರನ್ನು ಕರೆಸಿ ಜಲಮೂಲ ಪರೀಕ್ಷಿಸಿ ಬೋರವೆಲ್ ಕೊರೆಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ನಂತರ ಜಿ.ಪಂ. ಸಿ.ಇ.ಓ. ಅವರು ಚಿತ್ತಾಪೂರ ತಾಲೂಕು ಪಂಚಾಯತ್ ಕಾರ್ಯಾಲಯಕ್ಕೆ ಭೇಟಿ ನೀಡಿ ವೀಕ್ಷಣೆ ಮಾಡಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಜೊತೆ ಚರ್ಚಿಸಿದರು. ಕಾರ್ಯನಿರ್ವಾಹಕ ಅಧಿಕಾರಿಗಳ ಕೋಣೆಯಲ್ಲಿ ಶೌಚಾಲಯ ದುರಸ್ತಿ ಇರುವುದು ಕಂಡುಬಂದ ಪ್ರಯುಕ್ತ ಕೂಡಲೇ ದುರಸ್ತಿ ಮಾಡಬೇಕೆಂದು ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚಿಸಿದರು.

ಸದ್ಯ ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವ ಗ್ರಾಮಗಳ ಮಾಹಿತಿ ಹಾಗೂ ಮುಂಬರುವ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗುವ ಗ್ರಾಮಗಳ ಮಾಹಿತಿ ಪಡೆದರು. ತಾಲೂಕಿನಲ್ಲಿರುವ ಎಲ್ಲಾ ಜಲಮೂಲಗಳ ಮಾದರಿಗಳನ್ನು ಕಡ್ಡಾಯವಾಗಿ ಪರೀಕ್ಷಿಸಿ ಕುಡಿಯಲು ಯೋಗ್ಯವಾಗಿದೆಯೇ ಎಂಬುದನ್ನು ಖಚಿತ ಪಡಿಸಿಕೊಂಡ ನಂತರ ಸರಬರಾಜು ಮಾಡಬೇಕೆಂದರು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here