ವಿದ್ಯಾರ್ಥಿಗಳಿಗೆ ಶಿಕ್ಷಣದ ಜತೆಗೆ ಶಿಸ್ತು ಕಲಿಸಿ; ಮೆಂಗನ್

0
24

ಶಹಾಬಾದ: ಮಗುವಿನ ಸರ್ವೋತೋಮುಖ ಅಭಿವೃದ್ದಿಗೆ ಕೇವಲ ಅಕ್ಷರ ಕಲಿಕೆಯಿಂದ ಸಾಧ್ಯವಿಲ್ಲ. ಅದರ ಜತೆಗೆ ಶಿಸ್ತು ಅತ್ಯಗತ್ಯವಾಗಿದೆ. ಹೀಗಾಗಿ ಶಿಕ್ಷಣದ ಜತೆಗೆ ವಿದ್ಯಾರ್ಥಿಗಳಲ್ಲಿ ಶಿಸ್ತು ಬೆಳೆಸಬೇಕು ಎಂದು ಸಾಮಾಜಿಕ ಹೋರಾಟಗಾರ ಸುರೇಶ ಮೆಂಗನ್ ಹೇಳಿದರು.

ಅವರು ಶುಕ್ರವಾರ ನಗರದ ಸೆಂಟ್ ಥಾಮಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾಲಾ ವಿದ್ಯಾರ್ಥಿ ನಾಯಕರ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

Contact Your\'s Advertisement; 9902492681

ಶಾಲೆಯ ಆವರಣದೊಳಗೆ ಪ್ರವೇಶ ಮಾಡಿದ ಸಮಯದಲ್ಲಿ ವಿದ್ಯಾರ್ಥಿಗಳಲ್ಲಿ ಕಂಡು ಬಂದ ಶಿಸ್ತನ್ನು ನೋಡಿ ಅತೀವ ಸಂತೋಷ ತಂದಿದೆ. ಶಿಸ್ತು ಮನುಷ್ಯನ ಜೀವನ ರೂಪಿಸುತ್ತದೆ. ಶಿಸ್ತುಬದ್ದ ವ್ಯಕ್ತಿಯು ಜೀವನದಲ್ಲಿ ಯಶಸ್ಸು ಗಳಿಸಬಲ್ಲ . ವಿದ್ಯಾರ್ಥಿಗಳು ಎಷ್ಟೇ ಎತ್ತರಕ್ಕೆ ಬೆಳೆದರೂ ಜೀವನದಲ್ಲಿ ಶಿಸ್ತು, ಸಂಯಮದಿಂದ ಕಲಿತು ಹೆತ್ತವರಿಗೆ , ಕಲಿಸಿದವರ ಹೆಸರನ್ನು ತರುವಲ್ಲಿ ಎಂದಿಗೂ ಮರೆಯಬಾರದು ಎಂದು ಹೇಳಿದರು.

ಅಲ್ಲದೇ ಇಂದಿನ ಆಧುನಿಕ ಶೈಕ್ಷಣಿಕ ವ್ಯವಸ್ಥೆಯಲ್ಲಿ ಮಗುವಿನ ಶೈಕ್ಷಣಿಕ ಪ್ರಗತಿಗೆ ಕೇವಲ ಶಿಕ್ಷಕರು ಮಾತ್ರ ಶ್ರಮ ವಹಿಸಿದರೆ ಸಾಲದು. ಶಿಕ್ಷಕರ ಜೊತೆಗೆ ಪಾಲಕರು ಸಹ ಕೈಜೋಡಿಸಿದಾಗ ಮಾತ್ರ ಮಗು ಕಲಿಕೆಯಲ್ಲಿ ಮುಂದೆ ಬರಲು ಸಾಧ್ಯವಾಗುತ್ತದೆ. ಮಗುವಿನ ಶೈಕ್ಷಣಿಕ ಪ್ರಗತಿಗೆ ಸಂಬಂಧಿಸಿದಂತೆ ಪೆÇೀಷಕರು ನಿರಂತರವಾಗಿ ಶಿಕ್ಷಕರೊಂದಿಗೆ ಸಂಪರ್ಕದಲ್ಲಿದ್ದು ಅಗತ್ಯ ಸಲಹೆ ಸೂಚನೆಗಳನ್ನು ನೀಡಬೇಕು ಎಂದು ಪೆÇೀಷಕರಿಗೆ ತಿಳಿಸಿದರು.

ಪತ್ರಕರ್ತ ಸಂಘದ ತಾಲೂಕಾಧ್ಯಕ್ಷ ರಘುವೀರಸಿಂಗ ಠಾಕೂರ ಮಾತನಾಡಿ, ಕ್ರಿಶ್ಚಿಯನ್ ಸಂಸ್ಥೆಗಳಲ್ಲಿ ಕಂಡು ಬರುವ ಶಿಸ್ತು ಇನ್ನುಳಿದ ಸಂಸ್ಥೆಗಳಲ್ಲಿ ಅಷ್ಟೊಂದು ಕಂಡು ಬರುವುದಿಲ್ಲ. ಇಲ್ಲಿ ಒಳ್ಳೆಯ ಶಿಕ್ಷಣದ ಜತೆಗೆ ಶಿಸ್ತು ಕೂಡ ಮಕ್ಕಳಲ್ಲಿ ಅಂತರ್ಗತವಾಗುತ್ತದೆ. ಇಲ್ಲಿನ ಸಂಸ್ಥೆಯ ಫಾದರ್ ಹಾಗೂ ಸಿಸ್ಟರ್ ತಮ್ಮ ಜೀವನವನ್ನೇ ಸಮಾಜಕ್ಕೆ ಮುಡುಪಾಗಿಟ್ಟಿದ್ದಾರೆ.ಅವರ ಸೇವೆಯ ಪ್ರತಿಫಲವೇ ಮಕ್ಕಳು ಉತ್ತಮ ನಾಗರಿಕರಾಗಬೇನ್ನುವುದು.ಅದು ಸಾಕಾರವಾಗಲಿ ಎಂದರು.

ಎಸ್.ಜಿ.ವರ್ಮಾ ಪ್ರೌಢಶಾಲೆಯ ಮುಖ್ಯಗುರು ಮಲ್ಲಿನಾಥ.ಜಿ.ಪಾಟೀಲ ಮಾತನಾಡಿ, ವಿದ್ಯೆ ಒಂದಿದ್ದರೇ ಸಾಕು ಪ್ರಪಂಚದ ಎಲ್ಲಿಯೂ ಕೂಡ ನೆಮ್ಮದಿಯ ಬದುಕನ್ನು ಸಾಧಿಸಬಹುದು. ವಿದ್ಯಾರ್ಥಿಗಳು, ವಿದ್ಯೆ ಸಂಪನ್ನರಾಗಿ. ವಿದ್ಯೆ ಎನ್ನುವ ಅಮೂಲ್ಯವಾದ ಶಾಶ್ವತ ಸಂಪತ್ತು ನಮ್ಮೊಂದಿಗೆ ಇದ್ದಾಗ, ಎಲ್ಲ ಸಂಪತ್ತಿನ ಸರಿಯಾದ ಬಳಕೆಗೆ ಮಾರ್ಗದರ್ಶನ ದೊರಕುತ್ತದೆ ಎಂದರು.

ಶಾಲೆಯ ಫಾದರ್ ಸ್ಟಿವನ್ ಪ್ರಕಾಶ ವೇಗಸ್ , ಮುಖ್ಯ ಗುರುಮಾತೆ ಸಿಸ್ಟರ್ ಅನಸ್ಥಾಷಿಯಾ, ಸಿಸ್ಟರ್ ಮರಿಯಾ, ಸಿಸ್ಟರ್ ಲಲಿತಾ, ಶಿಕ್ಷಕ ಸಾಯಿಬಣ್ಣ , ಇಮ್ಯಾನುವೆಲ್, ಪ್ರೀಯಾ, ಶಿಲ್ಪಾ, ರಶ್ಮಿ, ರೂಪಾ, ಮಾಲತಿ ಇತರರು ಇದ್ದರು.

ಇದೇ ಸಂದರ್ಭದಲ್ಲಿ ವಿದ್ಯಾರ್ಥಿ ನಾಯಕ ಪದಗ್ರಹಣ ಮಾಡಲಾಯಿತು ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆದವು. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕ ಹಾಗೂ ಸಿಬ್ಬಂದಿ ವರ್ಗದವರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here