28 ರಂದು ಕಸಾಪದಿಂದ ವಚನ ಪಿತಾಮಹ ಡಾ. ಫ.ಗು.ಹಳಕಟ್ಟಿ ಕುರಿತು ವಿಚಾರಗೋಷ್ಠಿ

0
150

ಕಲಬುರಗಿ: ಬಡತನವನ್ನು ಅಪ್ಪಿ ನೋವುಗಳನ್ನು ನುಂಗಿ ಕನ್ನಡ ಮತ್ತು ವಚನ ಸಾಹಿತ್ಯಕ್ಕಾಗಿ ಹಗಲಿರುಳು ದುಡಿದ ವಚನ ಪಿತಾಮಹ ಡಾ. ಫ.ಗು.ಹಳಕಟ್ಟಿ ಅವರ ಬದುಕು ಮತ್ತು ಸಾಧನೆಯ ಕುರಿತು `ಹಳಕಟ್ಟಿ ಹೊಸಸೃಷ್ಠಿ’ ಎಂಬ ಮಹಾಘೋಷವಾಕ್ಯದೊಂದಿಗೆ ವಿಚಾರಗೋಷ್ಠಿಯೊಂದನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಜೂನ್ 28 ರ ಬೆಳಗ್ಗೆ 10.30 ಕ್ಕೆ ನಗರದ ಸೇಡಂ ರಸ್ತೆಯಲ್ಲಿರುವ ವಿದ್ಯಾನಗರ ಕಾಲೋನಿಯಲ್ಲಿನ ಆರ್ಯನ್ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಗಣದಲ್ಲಿ ಏರ್ಪಡಿಸಲಾಗಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ತಿಳಿಸಿದ್ದಾರೆ.

ನಮಗೆ ಹನ್ನೇರಡನೆಯ ಶತಮಾನದ ಬಸವಾದಿ ಶರಣರ ವಚನಗಳು ಸುಲಭವಾಗಿ ಸಿಗುತ್ತಿವೆ ಅಂದರೆ ಅದಕ್ಕೆ ಫಕೀರಪ್ಪ ಗುರುಬಸಪ್ಪ ಹಳಕಟ್ಟಿ ಅವರೇ ಮೂಲ ಕಾರಣ. ಅವರು ಸಾಕಷ್ಟು ಸಂಶೋಧನೆ ನಡೆಸಿ ವಚನಗಳನ್ನು ಸಂರಕ್ಷಿಸಿ ಸಮಾಜಕ್ಕೆ ಕೊಡುಗೆಯಾಗಿ ನೀಡಿರುವ ಪರಿ ಇಂದಿನ ಹೊಸ ಪೀಳಿಗೆಗೆ ಮುಟ್ಟಿಸುವ ಪ್ರಯತ್ನ ಈ ಕಾರ್ಯಕ್ರಮದ್ದಾಗಿದೆ.

Contact Your\'s Advertisement; 9902492681

ನಿವೃತ್ತ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಶಂಕರ ಬಿದರಿ ಅವರು ಕಾರ್ಯಕ್ರಮದ ಉದ್ಘಾಟಿಸಲಿದ್ದು, ಗುಲಬರ್ಗ ವಿವಿ ಕುಲಪತಿ ಪ್ರೊ. ದಯಾನಂದ ಅಗಸರ, ಶರಣ ಚಿಂತಕಿ ಜಯಶ್ರೀ ಚಟ್ನಳ್ಳಿ, ಪತ್ರಕರ್ತ ಹಣಮಂತರಾವ ಭೈರಾಮಡಗಿ, ಕಾಲೇಜಿನ ಪ್ರಿನ್ಸಿಪಾಲ್ ಡಾ. ಗೋಲಪ್ಪ ರಾಜಾಪೂರ, ಜಿಲ್ಲಾ ಕಸಾಪ ಪ್ರತಿನಿಧಿ ವಿನೋದ ಜೇನವೇರಿ, ಶಿವರಾಜ ಎಸ್ ಅಂಡಗಿ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here