ವಾಡಿ: ಶಿಕ್ಷಣ ಎಂಬುದು ಮಕ್ಕಳ ಬಾಳಿನ ಬೆಳಕಾಗಿದ್ದು, ಶಿಕ್ಷಕರೇ ಅಕ್ಷರ ಕ್ರಾಂತಿಯ ರೂವಾರಿಗಳಾಗಿದ್ದಾರೆ ಎಂದು ಪಟ್ಟಣದ ಶ್ರೀಶೈಲ ಮಲ್ಲಿಕಾರ್ಜುನ ವಿದ್ಯಾವರ್ಧಕ ಸಂಸ್ಥೆಯ ಅಧ್ಯಕ್ಷ ಭೀಮಶಾ ಜಿರೊಳ್ಳಿ ಹೇಳಿದರು.
ರವಿವಾರ ಪಟ್ಟಣದ ಶ್ರೀಶೈಲ ಮಲ್ಲಿಕಾರ್ಜುನ ವಿದ್ಯಾವರ್ಧಕ ಸಂಸ್ಥೆಯಲ್ಲಿ ಏರ್ಪಡಿಸಲಾಗಿದ್ದ ಸಂಸ್ಥೆಯ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿ ಅವರು ಅವರು ಮಾತನಾಡಿದರು. ವೀರಶೈವ ಲಿಂಗಾಯತ ಸಮಾಜದ ಆದೀನದಲ್ಲಿ ನಡೆಯುತ್ತಿರುವ ಶಿಕ್ಷಣ ಸಂಸ್ಥೆಗೆ ಮೂರು ದಶಕಗಳು ಪೂರ್ಣಗೊಂಡಿವೆ. ಸಾವಿರಾರು ವಿದ್ಯಾರ್ಥಿಗಳು ವಿದ್ಯಾ ಜ್ಞಾನ ಪಡೆದು ಸರ್ಕಾರದ ವಿವಿಧ ಹುದ್ದೆಗಳಲ್ಲಿದ್ದಾರೆ ಎಂಬುದೇ ಹೆಮ್ಮೆಯ ಸಂಗತಿ. ಸಂಸ್ಥೆಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಮತ್ತಷ್ಟು ಗುಣಮಟ್ಟಕ್ಕೆ ಎತ್ತರಿಸುವ ಗುರಿ ಹೊಂದಲಾಗಿದ್ದು, ವಿಜ್ಞಾನ ವಸ್ತು ಪ್ರದರ್ಶನ, ಮನೋಸಾಮಾಥ್ರ್ಯ ಸ್ಪರ್ಧೆ, ಚಿತ್ರಕಲೆ, ಕ್ರೀಡೆ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳ ಮೂಲಕ ಮಕ್ಕಳ ಪ್ರತಿಭೆಯನ್ನು ಪ್ರೋತ್ಸಾಹಿಸಲು ಹೊಸ ಯೋಜನೆಗಳನ್ನು ರೂಪಿಸಲಾಗುತ್ತಿದೆ. ಅನಾಥ ಮಕ್ಕಳಿಗೆ ಹತ್ತನೇ ತರಗತಿವರೆಗೆ ಉಚಿತವಾಗಿ ಶಿಕ್ಷಣ ನೀಡಲಾಗುತ್ತಿದೆ ಎಂದರು.
ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಶರಣಗೌಡ ಪಾಟೀಲ, ಕಾರ್ಯದರ್ಶಿ ಬಸವರಾಜ ಕೀರಣಗಿ, ದೇವಸ್ಥಾನ ಸಮಿತಿ ಅಧ್ಯಕ್ಷ ಶಾಂತಪ್ಪ ಶೆಳ್ಳಗಿ, ಲಿಂಗಾಯತ ಸಮಾಜದ ಯುವ ಘಟಕದ ಅಧ್ಯಕ್ಷ ಮಹಾಲಿಂಗ ಶೆಳ್ಳಗಿ, ಮುಖಂಡರಾದ ಸದಾಶಿವ ಕಟ್ಟಿಮನಿ, ಸಿದ್ದಣ್ಣ ಕಲಶೆಟ್ಟಿ, ಪರುತಪ್ಪ ಕರದಳ್ಳಿ, ಗುರುಮೂರ್ತಿ ಸ್ವಾಮಿ, ಮಲ್ಲಣ್ಣಗೌಡ ಗೌಡಪ್ಪನೋರ, ವಿಶ್ವನಾಥ ಪಡಶೆಟ್ಟಿ, ಕಾಶೀನಾಥ ಬಿ.ಶೆಟಗಾರ, ಶ್ರೀಶೈಲ ಜಿರೊಳ್ಳಿ, ಅಜಯ ಪ್ಯಾಟಿ, ವಿಶ್ವರಾಧ್ಯ ಸಜ್ಜನ್ ಪಾಲ್ಗೊಂಡಿದ್ದರು.
ಪದಾಧಿಕಾರಿಗಳು: ಶ್ರೀಶೈಲ ಮಲ್ಲಿಕಾರ್ಜುನ ವಿದ್ಯಾವರ್ಧಕ ಸಂಸ್ಥೆಗೆ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಗಿದ್ದು, ವೀರಶೈವ ಸಮಾಜದ ಹಿರಿಯ ಮುಖಂಡ ಭೀಮಶಾ ಜಿರೊಳ್ಳಿ (ಅಧ್ಯಕ್ಷ), ಅಣ್ಣಾರಾವ ಪಸಾರೆ (ಉಪಾಧ್ಯಕ್ಷ), ಸಿದ್ಧಲಿಂಗಯ್ಯಸ್ವಾಮಿ ಮಠಪತಿ (ಕಾರ್ಯದರ್ಶಿ), ಚಂದ್ರಶೇಖರ ಪ್ಯಾಟಿ (ಸಹ ಕಾರ್ಯದರ್ಶಿ), ಸಿದ್ದಲಿಂಗ ಶಿವರಾಯ ಶೆಳ್ಳಗಿ (ಖಜಾಂಚಿ), ಅರುಣಕುಮಾರ ಪಾಟೀಲ ಸಿ.ಬಣಮಗಿ (ಸಂಚಾಲಕ).