ಚಿಂಚೋಳಿ: ಮನುಷ್ಯನನ್ನು ಸರ್ವನಾಶ ಮಾಡುವ ಕೆಟ್ಟ ಚಟಗಳಲ್ಲಿ ಮದ್ಯಪಾನ-ದೂಮಪಾನ ಅತ್ಯಂತ ಅಪಾಯಕಾರಿಯಾಗಿದೆಯೆಂದು ಸಾಮಾಜಿಕ ಚಿಂತಕ ಹೋರಾಟಗಾರ ಮಾರುತಿ ಗಂಜಗಿರಿ ರವರು ತಾಲೂಕಿನ ದೇಗಲ್ಮಡಿ ಗ್ರಾಮದಲ್ಲಿ ಧರ್ಮಸ್ಥಳ ಸಂಸ್ಥೆಯವರು ಸರ್ಕಾರಿ ಪ್ರೌಡ ಶಾಲೆಯಲ್ಲಿ ಹಮ್ಮಿಕೊಂಡ ಮದ್ಯಪಾನ ದುಷ್ಪರಿಣಾದ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು.
ಒಮ್ಮೆ ಕುಡಿತದ ಚಟಕ್ಕೆ ಬಿಯಾದರೆ ಅದರಿಂದ ಹೋರಬರುವುದು ಬಲು ಕಷ್ಟ ಕುಡಿತದ ಚಟಕ್ಕೆ ಬಲಿಯಾದ ವ್ಯಕ್ತಿಯನ್ನೆ ಅಲ್ಲದೆ ಅವನನ್ನು ಅವಲಂಬಿಸಿದ ಹೆಂಡತಿ ಮಕ್ಕಳನ್ನು ನಿರ್ಗತಿಕರನ್ನಾಗಿ ಮಾಡುವುದಲ್ಲದೆ ಮನೆ ಹೊಲಗಳನ್ನು ಒಡವೆ ವಸ್ತುಗಳನ್ನು ಮಾರುವಂತೆ ಮಾಡುತ್ತದೆ ಅಲ್ಲದೆ ಕುಡಿದ ಅಮಲಿನಲ್ಲಿ ಮಡದಿ ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಳ್ಳುವಂತೆ ಪ್ರೇರೆಪಿಸುತ್ತದೆ.
ಸಮಾಜ ಘಾತುಕ ಕೆಲಸ ಮಾಡಲು ಕೊಂಡೊಯ್ಯುತ್ತದೆ ವಿಶೇಷವಾಗಿ ಇತ್ತಿಚಿನ ದಿನಗಳಲ್ಲಿ ಸಮಾಜ ಬದಲಾವಣೆ ಮಾಡುವ ಶಕ್ತಿ ಹೊಂದಿರುವಂತ ಯುವ ಜನತೆ ಹೆಚ್ಚು ಹೆಚ್ಚು ಮದ್ಯವ್ಯಸನಕ್ಕೆ ಅವಲಂಬನೆಯಾಗುತ್ತಿರುವುದರಿಂದ ಮನೆಯಲ್ಲಿ ಸಮಾಜದಲ್ಲಿ ಶಾಂತಿಗೆ ನೆಮ್ಮದಿಗೆ ಭಂಗವಾಗುತ್ತಿದೆ ಇದರಿಂದ ಹೊರ ಬರಬೇಕಾದರೆ ಸಂತರ ಶರಣರ ಮಾಹತ್ಮರ ವಿಚಾರಗಳು ಅರಿಯುವುದರಿಂದ ಮಾತ್ರ ಸಾದ್ಯ ಎಂದು ತಿಳಿಸಿದರು.
ತಮ್ಮ ಮನೆಯಲ್ಲಿ ಯಾರಾದರು ಕುಡಿತದ ಚಟಕ್ಕೆ ಬಲಿಯಾದರೆ ತಾವುಗಳು ಅವರಿಗೆ ಕೈ ಮುಗಿದು ಕಾಲಿಗೆ ಬಿದ್ದು ನಾವು ಕುಡಿಯುವುದನದನನ್ನು ಬಿಡುತ್ತೇವೆ ಎನ್ನುವವರೆಗೆ ಪ್ರತಿ ನಿತ್ಯ ಹೀಗೆ ಮಾಡಬೇಕೆಂದು ಸುದಿರ್ಘವಾಗಿ ಉಪನ್ಯಾಸ ನೀಡಿದರು.
ಮುಖ್ಯ ಅತಿಥಿಗಳಾಗಿ ಹಿರಿಯ ಶಿಕ್ಷಕರಾದ ಮಲ್ಲಿಕಾರ್ಜುನ ಕನ್ಯಾಕುಮಾರಿ ಪ್ರಭಾವತಿ ರಘುಜಿ ಮಾತನಾಡಿದರು. ಸಂಸ್ಥೆಯ ಸಂಯೋಜಕರಾದ ರೇಣುಕಾರವರು ನೀರೊಪಿಸಿದರೆ ಆಂಜನೇಯ ರವರು ವಂದಿಸಿದರು.