ಪ್ರಜಾಪ್ರಭುತ್ವದಲ್ಲಿ ಶಾಸಕರು ಪ್ರಾಣವಾಯು ಇದ್ದಂತೆ

0
30

ಜೇವರ್ಗಿ: ಜಗದ್ಗುರು ತೋಂಟದಾರ್ಯ ವಿದ್ಯಾಪೀಠ, ಸಮೂಹ ಶಿಕ್ಷಣ ಸಂಸ್ಥೆಗಳು ವತಿಯಿಂದ ನೂತನವಾಗಿ ಆಯ್ಕೆಯಾದ ಶಾಸಕರಾದ ಅಲ್ಲಮಪ್ರಭು ಪಾಟೀಲ ಮತ್ತು ಡಾ. ಅಜಯಸಿಂಗ್ ಅವರಿಗೆ ಸಂಮಾನಿಸಲಾಯಿತು.

ಪೂಜ್ಯ ಶ್ರೀ ಕೋರಣೆÉೀಶ್ವರ ಮಹಾಸ್ವಾಮಿಗಳು ಕಾರ್ಯಕ್ರಮದ ಅದ್ಯಕ್ಷತೆ ವಹಿಸಿಕೊಂಡಿದ್ದರು. ಪ್ರಜಾಪ್ರಭುತ್ವದಲ್ಲಿ ಶಾಸಕರು ಪ್ರಾಣವಾಯು ಇದ್ದಂತೆ ಎಂದು ಹೇಳಿದರು.

Contact Your\'s Advertisement; 9902492681

ಪ್ರಾಸ್ಥಾವಿಕವಾಗಿ ಶಿವನಗೌಡ ಪಾಟೀಲ ಹಂಗರಗಿ ಮಾತನಾಡುತ್ತಾ ಈ ಸಂಸ್ಥೆಯ ಬೆಳವಣಿಗೆಗೆ ಎಲ್ಲಾ ರೀತಿಯಿಂದಲೂ ಸಹಕರಿಸಿದ ಮಹನಿಯರನ್ನು ಸ್ಮರಿಸಿದರು ಶಾಸಕರೀರ್ವರು ಈ ಸಂಸ್ಥೆ ಈ ಬಾಗದ ವಿದ್ಯಾರ್ಥಿಗಳಿಗೆ ಕಾಮಧೇನು ಕಲ್ಪವೃಕ್ಷವಾಗಿದೆ. ಸಂಸ್ಥೆಯ ಬೆಳವಣಿಗೆಗಾಗಿ ನಾವು ಎಲ್ಲಾ ರೀತಿಯಿಂದಲು ಸಹಕಾರ ನೀಡುವದಾಗಿ ಹೇಳಿದರು.

ಈ ಕಾರ್ಯಕ್ರಮದಲ್ಲಿ ನಾಗಣ್ಣಗೌಡ ಜೈನಾಪುರ, ಅಪ್ಪಣ್ಣಗೌಡ ಹರವಾಳ, ಗೌಡಪ್ಪಾಗೌಡ ಪಾಟೀಲ್, ರಾಜಶೇಖರ ಸೀರಿ, ರಾಯಪ್ಪಾ ಬಾರಿಗಿಡದ, ಅಮರನಾಥ ಪಾಟೀ¯ ಕುಳಗೇರಿ,ಶಮಸೊದ್ದಿನ ಗುಂಡಗುರ್ತಿ,ಸಲಿಮ್ ಕಣ್ಣಿ, ನ್ಯಾಯವಾದಿ ಸಿದ್ದು ಯಂಕಚಿ, ಪ್ರಾಚಾರ್ಯರಾದ ಡಾ.ಸತೀಶಕುಮಾರ ಪಾಟೀಲ, ಕಂಟೆಪ್ಪಾ ಮಾಸ್ಡರ ಹರವಾಳ, ಶರಣಬಸವ ಕಲ್ಲಾ, ಸ್ಥಳೀಯ ಆಡಳಿತ ಮಂಡಳಿ ಪದಾದಿಕಾರಿಗಳು ಮತ್ತು ಸದಸ್ಯರು ಜ.ತೊ.ವಿ.ಸಮೂಹ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು, ಸಿಬ್ಬಂದಿವರ್ಗ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.

ಪ್ರ-ಶಿಕ್ಷಣಾರ್ಥಿಯಾದ ಸಾವಿತ್ರಿ ಪ್ರಾರ್ಥನೆ ಗೈದರು ಶಿಕ್ಷಕಿ ಸುನಂದಾ ಕಲ್ಲಾ ಸ್ವಾಗತಿಸಿದರು, ಉಪನ್ಯಾಸಕರಾದ ಎಸ್ ಬಿ ಮಮದಾಪೂರ ನಿರೂಪಿಸಿ, ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here