ಸುಧಾರಿತ ಬೇಸಾಯ ಕೃಷಿ ತರಬೇತಿ

0
24

ಕಲಬುರಗಿ: ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ, ಪ್ರಾದೇಶಿಕ ಕೇಂದ್ರ ಮತ್ತು ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರ, ಇವರ ಸಂಯುಕ್ತಆಶ್ರಯದಲ್ಲಿರೈತರಆದಾಯ ವೃದ್ದಿಸಲು ಸುಧಾರಿತ ಬೇಸಾಯ ಕ್ರಮಗಳು ಮತ್ತು ಬೆಳೆಗಳ ರೋಗ ನಿರ್ವಹಣೆಯ ಬಗ್ಗೆ ತರಬೇತಿಕಾರ್ಯಕ್ರಮವನ್ನು ಅಪಜಲಪೂರ ತಾಲೂಕಿನ ಗೊಬ್ಬರ ಬಿ ಗ್ರಾಮದಲ್ಲಿ ನಡೆಸಲಾಯಿತು.

ಡಾ. ಸಿ.ವಿ.ರಾಮನ್ ಪ್ರಶಸ್ತಿ ಪುರಸ್ಕøತರಾದ ಡಾ. ಎಂ.ಎಸ್. ಜೋಗದಾ ಇವರುಕಾರ್ಯಕ್ರಮವನ್ನುಉದ್ಘಾಟನೆ ಮಾಡಿರೈತರು ಕೃಷಿ ವಿಜ್ಞಾನ ಕೇಂದ್ರದೊಂದಿಗೆ ನಿರಂತರ ಸಂಪರ್ಕಹೊಂದಿ ಪರಿಸರ ಸ್ನೇಹಿ ಕೃಷಿ ವಿಧಾನಗಳನ್ನು ಅನುಸರಿಸಲು ಸಲಹೆ ನೀಡಿದರು. ಅತನೂರ ರೈತ ಸಂಪರ್ಕಕೇಂದ್ರದ ಕೃಷಿ ಅದಿಕಾರಿಗಳಾದ ಶ್ರೀ ಸೈಫನ್ ಸಾಭ್‍ರವರು ಕೃಷಿ ಇಲಾಖೆಯ ಸೌಲಭ್ಯಕುರಿತು ಮಾಹಿತಿ ನೀಡಿದರು.

Contact Your\'s Advertisement; 9902492681

ಬೇಸಾಯತಜ್ಞರಾದಡಾ.ಯುಸುಫ್‍ಅಲಿ ನಿಂಬರಗಿ, ಕೃಷಿ ಯಂತ್ರೋಪಕರಣಗಳನ್ನು ಬಳಸಿದ್ದಲ್ಲಿ ಕೃಷಿಯಲ್ಲಿ ಕೂಲಿ ಆಳುಗಳ ವೆಚ್ಚವನ್ನು ಕಡಿಮೆ ಮಾಡಬಹುದುಜೊತೆಗೆಕಳೆಮುಕ್ತ ಹೊಲ ನಿರ್ವಹಣೆ, ತೊಗರಿಯೊಂದಿಗೆ ಮಿಶ್ರ ಬೆಳೆಗಳು, ಹತ್ತಿ ಕೃಷಿ ಮಾಹಿತಿರೈತರು ಕೃಷಿ ಸಮಸ್ಯೆಗಳಿಗೆ ಪರಿಹಾರವನ್ನು ತಜ್ಞರಿಂದ ಪಡೆಯಬಹುದಾಗಿದೆ ಎಂದರು.

ಸಸ್ಯರೋಗ ತಜ್ಞರಾದ ಡಾ.ಜಹೀರ್ ಅಹೆಮದರವರು ಸಸ್ಯ ರೋಗಗಳ ನಿರ್ವಹಣೆ, ಪರಿಸರ ಸ್ನೇಹಿ ಕೃಷಿ, ಮಣ್ಣಿನ ಆರೋಗ್ಯ ಕುರಿತು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ತಾಂತ್ರಿಕ ಸಹಾಯಕರಾದ ಅನೀಲಕುಮಾರ ಭಸ್ಮೆ ಸ್ವಾಗತಿಸಿದರು, ಯೋಗ ಶಿಕ್ಷಕಿ ಪ್ರಭಾವತಿ ಮೇತ್ರಿ, ಕಾಳಗಿ ಸರಕಾರಿ ಶಾಲಾ ಶಿಕ್ಷಕರಾದ ಪ್ರಭಾಕರ್, ಪ್ರಗತಿಪರರೈತರಾದ ಪ್ರಭು ಲಿಂಗದಳ್ಳಿ ಹಾಗೂ ಗೊಬ್ಬರ(ಬಿ) ಅಫಜಲಪೂರ, ಭಾಗದ ರೈತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here