ಕಲಬುರಗಿ: ಮರಳು ಮಾಫಿಯಾ ಮಟ್ಟ ಹಾಕಲು ಒತ್ತಾಯಿಸಿ ಪ್ರತಿಭಟನೆ

0
24

ಕಲಬುರಗಿ: ಜಿಲ್ಲೆಯಲ್ಲಿ ಕೆಲವು ವರ್ಷಗಳಿಂದ ಅಕ್ರಮ ಮರಳು ಸಾಗಾಣಿಕೆಯ ಮರಳು ಮಾಫಿಯಾ ದಿನದಿಂದ ದಿನಕ್ಕೆ ಬಲಿಷ್ಠ ಗೋಳ್ಳುತ್ತಿದೆ ಇದೊಂದು ಭಾರಿ ದೊಡ್ಡ ಮಟ್ಟದ ಕಳ್ಳ ಧಂದೆಯಾಗಿ ಮುಂದುವರೆದಿದೆ. ಇದರಲ್ಲಿ ಜಿಲ್ಲೆಯ ಮತ್ತು ಹೋರಗಿನ ಪ್ರಭಾವಿ ರಾಜಕಾರಣಿಗಳು ಮತ್ತು ಅಧಿಕಾರಿಗಳ ವರ್ಗ ಶಾಮೀಲಾಗಿರುವುದು ಅನುಮಾನವಿದೆ. ಸೂಕ್ತ ತನಿಖೆ ನಡೆಸಿ ತಪಿತಸ್ಥರನ್ನು ಬಂಧಿಸಬೇಕೆಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಅಧ್ಯಕ್ಷರಾದ ಶರಣಬಸಪ್ಪ ಮಮಶೇಟ್ಟಿ ಆಗ್ರಹಿಸಿದ್ದಾರೆ.

ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಅವರು ಇತೀಚಿಗೆ ಆಕ್ರಮ ಮರಳು ಮಾಫಿಯಾ ತಡೆಯಲು ಹೋದ ಜೇವರ್ಗಿ ತಾಲೂಕಿನ ನೆಲೋಗಿ ಪೋಲಿಸ್ ಠಾಣೆ ಮುಖ್ಯ ಪೇದೆ ಮಯೂರ ರಾಠೋಡ ಬಲಿಯಾಗಿದ್ದಾರೆ. ಹೀಗೆ ಜಿಲ್ಲೆಯ ಪೋಲಿಸ್ ಮತ್ತು ಆಡಳಿತಕ್ಕೆ ಸೆಡ್ಡು ಹೊಡೆಯುವ ಮಟ್ಟಿಗೆ ಈ ಮರಳು ಮಾಫಿಯಾಗಳು ಬಲಿಷ್ಠ ವಾಗಿ ಬೆಳೆದು ನಿಂತಿದ್ದಾರೆ. ಇದರ ಹಿಂದೆ ರಾಜಕಾರಣಿಗಳು ಮತ್ತು ಅಧಿಕಾರ ವರ್ಗದ ಕೈವಾಡ ಇದೆ ಎಂದು ಅನುಮಾನ ಕಾಡುತ್ತಿದೆ ಎಂದರು.

Contact Your\'s Advertisement; 9902492681

ಈ ಹಿಂದೆ ಯಡಿಯೂರಪ್ಪ ಮುಖ್ಯಮಂತ್ರಿ ಯಾಗಿದ್ದಾಗ ಬಳ್ಳಾರಿ ಜಿಲ್ಲೆಯಲ್ಲಿ ನಡೆದ ಕಬ್ಬಿಣದ ಅದಿರಿನ ಭಯಾನಕ ಭಯಂಕರ ಅಕ್ರಮ ದಂಧೆಗೆ ಮೀರಿದ ಕಾನೂನು ಬಾಹಿರವಾಗಿ ರಾಜ್ಯದ ಗಣಿ ಲೂಟಿಗಿಂತ ಮೀರಿದ ಅಕ್ರಮ ಮರಳು ದಂಧೆ ನಡೆದಿದ್ದು ಇದರಲ್ಲಿ ನೂರಾರು ಕೋಟಿ ರೂಪಾಯಿ ಅಕ್ರಮ ವ್ಯವಹಾರ ಇದೆ ಎಂದು ಆರೋಪಿಸಿದ್ದಾರೆ.

ಈ ಹಿಂದೆಯೂ ಕೂಡಾ ಪೋಲಿಸರ ಮೇಲೆ ಮತ್ತು ಅಧಿಕಾರಿಗಳ ಮೇಲೆ ಕೋಲೆ ಯತ್ನ ಕೂಡ ಮಾಫಿಯಾ ಮಾಡಿದೆ. ಭದ್ರಾ ನದಿಯಲ್ಲಿ ಮರಳು ಸಾಗಾಣಿಕೆ ತಡೆಯಲು ಹೋದ ಜಿಲ್ಲಾಧಿಕಾರಿ ಕೊಲೆಯತ್ನ ನಡೆದಿದೆ• ಅಫಜಲಪುರ ತಹಸಿಲ್ದಾರರು ಮೇಲೆ ಟಿಪ್ಪರ್ ಹಾಯಿಸಿ ಕೊಲೆಗೆ ಯತ್ನ ನಡೆದಿತ್ತು.

ಈಗ ಕರ್ತವ್ಯ ನಿರತ ಪೋಲಿಸ್ ಹೆಡ್ ಕಾನಿಷ್ಟೆಬಲ್ ಹತ್ಯೆ ಯಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ನಾಗರಿಕ ಬಂಧುಗಳು ಮತ್ತು ಕಾನೂನು ಸುವ್ಯವಸ್ಥೆಗೆ ಸವಾಲಾಗಿರುವ ಈ ಮರಳು ಮಾಫಿಯಾ ಪೈಶಾಚಿತ ಕೃತ್ಯಗಳನ್ನು ಮಟ್ಟ ಹಾಕಲು ಇದರಲ್ಲಿ ಶಾಮೀಲಾದ ಮುಖಂಡರ ಮತ್ತು ಅಧಿಕಾರ ವರ್ಗವನ್ನು ಹದ್ ಬಸ್ತಿನಲ್ಲಿ ತರಲು ಮೃವೃ ಮಟ್ಟ ಕಠಿಣ ಕ್ರಮ ಜರುಗಿಸಬೇಕು ಮತ್ತು ಜೇವರ್ಗಿ ಘಟನೆಯಲ್ಲಿ ಶಾಮೀಲಾದ ರಾಜಕಾರಣಿಗಳು ಮತ್ತು ಇತರ ಹಿಂಬಾಲಕರನ್ನು ಗುರುತಿಸಿ ಬಂಧಿಸಿ ಜೈಲಿಗೆ ಹಾಕಬೇಕೆಂದು ಆಗ್ರಹಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here