ಶಹಾಬಾದ : ನಗರದ ಆದಿಶಕ್ತಿ ಶ್ರೀ ಜಗದಂಬಾ ಮಂದಿರದಲ್ಲಿ 38ನೇ ವರ್ಷದ ದೇವಿ ಮೂರ್ತಿ ಪ್ರತಿಷ್ಠಾನ ದಿನದ ಅಂಗವಾಗಿ ಶ್ರೀಮದ್ ಭಗವತ ಕಥಾ ಸಪ್ತಾಹ ಸಮಾರೋಪ ಹಾಗೂ ಪಲ್ಲಕ್ಕಿ ದೇವಿ ಪಲ್ಲಕ್ಕಿ ಮೆರವಣಿಗೆಯು ಅದ್ದೂರಿಯಿಂದ ಜರುಗಿತು.
ಜಗದಂಬಾ ಮಂದಿರದಿಂದ ನಡೆದ ಮೆರವಣಿಗೆಯು ನಗರದ ಪ್ರಮುಖ ಬೀದಿಗಳಲ್ಲಿ ನೂರಾರು ಜನರ ಮಧ್ಯೆ ನಡೆಯಿತು. ಶ್ರದ್ಧಾ ಭಕ್ತಿಯಿಂದ ಮಹಿಳೆಯರು ತಲೆ ಮೇಲೆ ಕುಂಭ ಹೊತ್ತು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ಮೆರವಣಿಗೆಯುದ್ದಕ್ಕೂ ಭಜನೆ, ಯುವಕರ ನರ್ತನ, ಮಹಿಳೆಯರ ಗಾಯನ, ಮೆರವಣಿಗೆಗೆ ಕಳೆ ಕಟ್ಟಿದವು. ದೇವಿಗೆ ಜಯಕಾರದ ಘೋಷಣೆ ಮೊಳಗಿದವು.ಆದಿಶಕ್ತಿ ಜಗದಂಬಾ ದೇವಿ ಮಂದಿರದಲ್ಲಿ ಕಲಬುರಗಿ ಗ್ರಾಮೀಣ ಮತಕ್ಷೇತ್ರ ದ ಸಮಾಜ ಸೇವಕಿ ಶ್ರೀಮತಿ ಜಯಶ್ರೀ ಮತ್ತಿಮಡು ರವರಿಂದ ದೇವಿಯ ಮಹಾಮಂಗಳಾರತಿ ಜರುಗಿತು. ವಿಶೇಷ ಪೂಜೆ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಭಕ್ತರಿಗೆ ಮಹಾ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
ಪಲ್ಲಕ್ಕಿ ಉತ್ಸವದಲ್ಲಿ ದೇವಸ್ಥಾನ ಸಮಿತಿಯ ಅಧ್ಯಕ್ಷ ದತ್ತಾತ್ರೇಯ ಝಿಂಗಾಡೆ, ಡಾ.ಅಶೋಕ ಜಿಂಗಾಡೆ, ವೆಂಕಟೇಶ ತಿರುಮಲ, ರಮೇಶ ಅμÉ್ಟೀಕರ, ಅನಿಲ ಹಿಬಾರೆ, ಸುನೀಲ್ ಭಗತ್, ದಶರಥ ತಾಂದಳೆ,ರಮೇಶ ಮಹೇಂದ್ರಕರ್, ರಘು ಮಹೇಂದ್ರಕರ, ಸಚಿನ ಹಂಚಾಟೆ, ರಾಹುಲ್ ಕಮಿತಕರ್, ಜಗದಂಬಾ ದೇವಸ್ಥಾನದ ಮಹಿಳಾ ಸಂಘದ ಪದಾಧಿಕಾರಿಗಳು, ವಿವಿಧ ಸಮಾಜದ ಮಹಿಳೆಯರು, ದೇವಸ್ಥಾನ ಸಮಿತಿ ಸದಸ್ಯರು, ನಗರದ ಗಣ್ಯರು ಹಾಗೂ ಭಕ್ತರು ಪಾಲ್ಗೊಂಡಿದ್ದರು.