ದಾಳಿಂಬೆ ಕೃಷಿ ವೈಜ್ಞಾನಿಕ ತರಬೇತಿ

0
95

ಕಲಬುರಗಿ; ಐಸಿಎಆರ್ ರಾಷ್ಟ್ರೀಯ ದಾಳಿಂಬೆ ಸಂಶೋಧನಾ ಕೇಂದ್ರ, ಸೋಲಾಪೂರ ಕಲಬುರಗಿ ಮತ್ತು ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರ ಇವರ ಸಂಯುಕ್ತ ಆಶ್ರಯದಲ್ಲಿ ರೈತರಿಗೆ ಎಸ್.ಸಿ.ಎಸ್.ಪಿ ಯೋಜನೆಯಲ್ಲಿ ದಾಳಿಂಬೆ ವೈಜ್ಞಾನಿಕ ಕೃಷಿ ತರಬೇತಿ ಕಾರ್ಯಕ್ರಮವನ್ನು ಕೃಷಿ ವಿಜ್ಞಾನ ಕೇಂದ್ರ, ಕಲಬುರಗಿಯಲ್ಲಿ ಆಯೋಜಿಸಲಾಗಿತ್ತು.

ಕೇಂದ್ರದ ಮುಖ್ಯಸ್ಥರಾದ ಡಾ.ರಾಜು. ಜಿ. ತೆಗ್ಗಳ್ಳಿ ರವರು ಅದ್ಯಕ್ಷತೆ ವಹಿಸಿದರು. ದಾಳಿಂಬೆ ಸಂಶೋಧನಾ ಕೇಂದ್ರದ ವಿಜ್ಞಾನಿಗಳಾದ ಡಾ.ಪಿಂಕೆ ರಾಯಗೊಂಡ್, ಡಾ.ಮಲ್ಲಿಕಾರ್ಜುನ ಹರಸೂರ್, ಡಾ.ಶಿಲ್ಪಾ ಪಿ., ಡಾ.ಚಂದ್ರಕಾಂತ, ತಾಂತ್ರಿಕ ಅಧಿಕಾರಿ ಮಹಾದೇವ ಕೆವಿಕೆಯ ವಿಜ್ಞಾನಿಯಾದ ಡಾ.ಯುಸುಫ್‍ ಅಲಿ ನಿಂಬರಿಗಿ, ಡಾ.ಜಹೀರ್ ಅಹೆಮದ್, ಡಾ. ಮಂಜುನಾಥ ಪಾಟೀಲ್ ರೈತರಿಗೆ ದಾಳಿಂಬೆ ಕೃಷಿಗೆ ಸೂಕ್ತ ಮಣ್ಣು, ಸಾವಯವ ಗೊಬ್ಬರ, ರಸ ಗೊಬ್ಬರ, ನೀರಾವರಿ ವಿಧಾನ ಮತ್ತು ಕೀಟ ರೋಗದ ಬಗ್ಗೆ ಮಾಹಿತಿ ನೀಡಲಾಯಿತು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here