ಪ್ರಾಮಾಣಿಕ ಸೇವೆಯೇ ಇತರರಿಗೆ ಮಾರ್ಗದರ್ಶನ: ಜಗದೇವಪ್ಪ ಬಿ

0
36

ಕಲಬುರಗಿ: ಪ್ರಾಮಾಣಿಕ ಸೇವೆಯು ಮುಂಬುರುವ ಪೀಳಿಗೆಗೆ ಉತ್ತಮ ಮಾರ್ಗದರ್ಶನವಾಗುತ್ತದೆ ಎಂದು ಕಲಬುರಗಿ ಜಿಲ್ಲಾ ಪಂಚಾಯತ ಯೋಜನಾ ನಿರ್ದೇಶಕರಾದ ಜಗದೇವಪ್ಪ ಬಿ. ರವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ನಗರದಲ್ಲಿರುವ ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ರಾಜ್ ಸಂಸ್ಥೆಯ ಪ್ರಾದೇಶಿಕ ಕಚೇರಿಯಲ್ಲಿ ಜರುಗಿದ ಉಪ ನಿರ್ದೇಶಕರ ಬಿಳ್ಕೋಡುಗೆ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು ಸೇವಾ ಅವಧಿಯಲ್ಲಿ ನಾವು ಮಾಡುವ ಸೇವೆ ಉತ್ತಮವಾಗಿದ್ದರೆ ನಮ್ಮನ್ನು ಎಲ್ಲರೂ ಮೆಚ್ಚುತ್ತಾರೆ ಆದ್ದರಿಂದ ಸೇವಾ ಅವಧಿಯಲ್ಲಿ ಮಾದರಿಯಾಗಿ ಸೇವೆ ಸಲ್ಲಿಸಬೇಕೆಂದರು.

Contact Your\'s Advertisement; 9902492681

ಕಾರ್ಯಕ್ರವನ್ನುದ್ದೇಶಿಸಿ, ಸೇಡಂ ತಾಲೂಕು ಪಂಚಾಯತ ಕಾರ್ಯನಿವಾಹಕ ಅಧಿಕಾರಿಗಳಾದ ಶಂಕರ ರಾಠೋಡ, ಜೇವರ್ಗಿ ತಾಲೂಕು ಪಂಚಾಯತ ಕಾರ್ಯನಿವಾಹಕ ಅಧಿಕಾರಿಗಳಾದ ಅಬ್ದುಲ್ ನಬಿ, ಆಳಂದ ತಾಲೂಕು ಪಂಚಾಯತ ಕಾರ್ಯನಿವಾಹಕ ಅಧಿಕಾರಿಗಳಾದ ವಿಲಾಸ ಕುಮಾರ, ಚಿತ್ತಾಪೂರು ತಾಲೂಕು ಪಂಚಾಯತ ಕಾರ್ಯನಿವಾಹಕ ಅಧಿಕಾರಿಗಳಾದ ಕುಮಾರಿ ನೀಲಗಂಗಾ ರವರು ಕಾರ್ಯಕ್ರಮದಲ್ಲಿ ಸಾರ್ವಜನಿಕರಿಗೆ ಉತ್ತಮ ಸೇವೆ ಮತ್ತು ಅಧಿಕಾರಿಗಳೊಂದಿಗೆ ಉತ್ತಮ ಒಡನಾಟದಿಂದರೆ ಅವರ ಸೇವಾ ಸೇವಾ ಅವಧಿ ಉತ್ತಮವಾಗಿರುತ್ತದೆ ಎಂದರು.

ಕಾರ್ಯಕ್ರಮದ ವೇದಿಕೆ ಮೇಲೆ ರಾಯಚೂರು ಜಿಲ್ಲಾ ಪಂಚಾಯತ ಮುಖ್ಯ ಯೋಜನಾಧಿಕಾರಿಗಳಾದ ಗುರುನಾಥ, ಹಾಗೂ ಶ್ರೀಮತಿ ಜಗದೇವಿ ಶೆಟಗಾರ ರವರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ರಾಜ್ ಸಂಸ್ಥೆಯ ಪ್ರಾದೇಶಿಕ ತರಬೇತಿ ಕೇಂದ್ರದ ಉಪನಿರ್ದೇಶಕರಾದ ಗುರುನಾಥ ಶೆಟಗಾರ ರವರು ಸನ್ಮಾನ ಸ್ವೀಕರಿಸಿ ಮಾತನಾಡುತ್ತ, ತಮ್ಮ 40 ವರ್ಷಗಳ ಸುಧೀರ್ಘ ಸೇವೆ ಮಾಡುವಿಕೆಗೆ ನಮ್ಮ ಸಿಬ್ಬಂಧಿಗಳ ಸಹಕಾರ ಮುಖ್ಯವಾಗಿದೆ ಎಂದರು. ಒಂದು ಕಾರ್ಯ ಅಚ್ಚು ಕಟ್ಟಗಾಬೇಕಾದರೆ ಎಲ್ಲ ಸಿಬ್ಬಂಧಿಗಳ ಹಾಗೂ ಅಧಿಕಾರಿಗಳ ಸಹಕಾರ ಅತ್ಯಗತ್ಯವೆಂದರು. ಕಾರ್ಯಕ್ರಮದಲ್ಲಿ ಶ್ರೀಕಾಂತ, ರವಿಕುಮಾರ, ರಾಜಕುಮಾರ ಮಾಲಿಂಗ, ಶಾರದ ರವರು ತಮ್ಮ ಅನಿಸಿಕೆ ವ್ಯಕಪಡಿಸಿದರು.

ತರಬೇತಿ ಕೇಂದ್ರದ ಬೋಧಕರಾದ ಡಾ.ರಾಜು ಕಂಬಳಿಮಠ ರವರು ನಿರೂಪಿಸಿದರು, ಬೋಧಕರಾದ ಶಿವಪುತ್ರಪ್ಪ ಗೊಬ್ಬರು ಸ್ವಾಗತಿಸಿದರು, ಪುಷ್ಪಾ ಬೆಳಮಗಿ ರವರು ಪ್ರಾರ್ಥಿಸಿದರು, ತರಬೇತಿ ವ್ಯವಸ್ಥಾಪಕರಾದ ಪ್ರಶಾಂತ ಅಂಗಡಿ ವಂದಿಸಿದರು, ಕಾರ್ಯಕ್ರಮದಲ್ಲಿ ಸಂಗಮೇಶ ಶೆಟಗಾರ, ಅನಿಲ್ ಬೇವಿನಮರದ, ಅರ್ಚನಾ ಪಾಟೀಲ್, ಅಶ್ವೀನಿ ಪೂಜಾರಿ, ಶಾಂತಪ್ಪ, ಪ್ರಶಾಂತ, ಶಿವರಾಜ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here