ಕಲಬುರಗಿ; ನಗರದ ಇಎಸ್ ಐಸಿ ಆಸ್ಪತ್ರೆಯನ್ನು ಏಮ್ಸ್ ಆಗಿ ಪರಿವರ್ತಿಸಬೇಕು. ಡಾ.ಡಿ.ಎಂ.ನಂಜುಂಡಪ್ಪ ಸಮಿತಿ ವರದಿಯ ಪ್ರಕಾರ ಏಮ್ಸ್ ಆಸ್ಪತ್ರೆಯು ಕಲಬುರಗಿಯಲ್ಲಿ ಸ್ಥಾಪಿಸಬೇಕು ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ಕಲ್ಯಾಣ ಕರ್ನಾಟಕ ವಿಕಾಸ ವೇದಿಕೆ ಮುಖಂಡರು ಸಚಿವ ಡಾ.ಶರಣಪ್ರಕಾಶ ಪಾಟೀಲ್‍ಗೆ ಮನವಿ ಮಾಡಿದರು.
ದೇಶದ ಎಲ್ಲ ಇಎಸ್‍ಐಸಿ ಆಸ್ಪತ್ರೆಗಳನ್ನು ಏಮ್ಸ್ ಆಗಿ ಮೇಲ್ದರ್ಜೆಗೇರಿಸಬೇಕು ಕಲಬುರಗಿ ರೈಲ್ವೆ ವಿಭಾಗ ಆರಂಭ ಮಾಡಬೇಕು. ಬೀದರ್ – ಬಳ್ಳಾರಿ ರಾಷ್ಟ್ರೀಯ ಹೆದ್ದಾರಿಯನ್ನು ಚತುಷ್ಪಥ ಅಭಿವೃದ್ಧಿ, ಮಾಡಬೇಕು. ನಗರಕ್ಕೆ 2ನೇ ವರ್ತುಲ್ ರಸ್ತೆ ನಿರ್ಮಿಸಬೇಕು ಎಂದು ಆಗ್ರಹಿಸಿದರು.
ನಗರದಲ್ಲಿ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಗೆ ಪ್ರತ್ಯೇಕ ಮತ್ತು ಸುಸಜ್ಜಿತ ಹೊಸ ಕಟ್ಟಡ ನಿರ್ಮಿಸಬೇಕು ನಗರದಲ್ಲಿ ನಿಮ್ಹಾನ್ಸ್ ರೀತಿಯಲ್ಲಿ ಕಲಬುರಗಿ ಇನ್ಸ್ ಟ್ಯೂಟ್ ಆಫ್ ಮೆಂಟಲ್ ಹೆಲ್ತ್ ಮತ್ತು ನ್ಯೂರೊ ಸೈನ್ಸ್ ಸ್ಥಾಪಿಸಬೇಕು ನಗರದಲ್ಲಿ ಕೌಶಾಲಭಿವೃದ್ಧಿ ವಿಶ್ವವಿದ್ಯಾಲಯ ಆರಂಭಿಸಬೇಕು.
ನಗರದ ಪ್ರತಿಷ್ಠಿತ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಮೆಡಿಕಲ್ ಎಂದು ಕಾಲೇಜನ್ನು ಮಂಜೂರು ಮಾಡಬೇಕು. ಮಳಖೇಡ ಕೋಟೆಯ ಸಮಗ ಅಭಿವೃದ್ಧಿಗಾಗಿ ವಿಶೇಷ ಅನುದಾನ ನೀಡಬೇಕು. ಕಲಬುರಗಿ ಕೋಟೆಯಲ್ಲಿನ ನಿವಾಸಿಗಳನ್ನು ಸ್ಥಳಾಂತರಿಸಿ, ಕೋಟೆಯನ್ನು ಅಭಿವೃದ್ಧಿಪಡಿಸಬೇಕು. ಎಂದು ಒತ್ತಾಯಿಸಿದರು.
ರಾಜ್ಯಾಧ್ಯಕ್ಷ ಮುತ್ತಣ್ಣ ಎಸ್.ನಡಗೇರಿ, ಬಾಬು ಮದನಕರ್, ಜೈಭೀಮ ಮಾಳಗೆ, ಸೂರ್ಯಪ್ರಕಾಶ ಚಾಳಿ, ಮೋಹನ ಸಾಗರ, ಅವಿನಾಶ ಕಪನೂರ, ಪ್ರವೀಣ ಖೇಮನ, ಅರುಣ ಇನಾಂದಾರ, ದತ್ತು ಜಮಾದಾರ, ಮಡಿವಾಳಪ್ಪ ಮಲ್ಲಾಬಾದ, ಮಹೇಶ ಮಾನೆ ಇದ್ದರು.