ಸೂಕ್ತ ಮಾರ್ಗದರ್ಶನ ನೀಡುವವನೇ ಗುರು

0
44

ಮಾದನಹಿಪ್ಪರಗಿ: ಗುರು ಎಂದರೆ ಖಾವಿ ತೊಟ್ಟ ಸ್ವಾಮಿಗಳಲ್ಲ, ಜೀವನದಲ್ಲಿ ಸರಿಯಾದ ಮಾರ್ಗದರ್ಶನ ನೀಡಿದ ಶಾಲಾ ಶಿಕ್ಷಕರಾಗಿರಬಹುದು, ಹಿರಿಯರಾಗಿರಬಹುದು ಅಥವಾ ಗೆಳೆಯನಾಗಿರಬಹುದು ಅಂತವರು ಕೂಡಾ ಗುರುಗಳು ಎಂದು ಅಭಿನವ ಶಿವಲಿಂಗ ಸ್ವಾಮಿಗಳು ಅಭಿಪ್ರಾಯಪಟ್ಟರು.

ಇಂದು ಗುರುಪೂರ್ಣಿಮೆಯ ನಿಮಿತ್ಯ ಸ್ಥಳೀಯ ಶಿವಲಿಂಗೇಶ್ವರ ವಿರಕ್ತಮಠದ ಶಾಖಾ ಮಠ ಮದಗುಣಕಿಯ ಮಠದಲ್ಲಿ ಗುರುವಂದನಾ ಸ್ವೀಕರಿಸಿ ಮಾತನಾಡುತ್ತಿದ್ದರು. ದೇವರು ನಿಮಗೆ ಕಷ್ಟಕಾಲದಲ್ಲಿ ಕೈ ಹಿಡಿತಾನೆ ಎಂಬುದು ಗೊತ್ತಿಲ್ಲ. ಆದರೆ ಗುರು ನಿಮ್ಮ ಹಿಂದೆ ಇದ್ದು ನಿಮಗೆ ಸರಿಯಾದ ಮಾರ್ಗ ತೋರುತ್ತಾನೆ. ಗರುವಿನ ಮಾತು ತಪ್ಪಿ ನಡೆದರೆ ಸಾಧನೆ ಶೂನ್ಯ. ಬದುಕಿನ ದಾರಿ ಕಂಡುಕೊಳ್ಳಲು ಪ್ರತಿಯೊಬ್ಬರಿಗೂ ಗುರು ಮುಖ್ಯವಾಗಿತ್ತಾರೆ. ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಶಿವಕುಮಾರ ಕಲಶೆಟ್ಟಿಯರು ಗುರುವಿನ ಮಹತ್ವ ಮತ್ತು ಗುರುವಿನ ಮಹಿಮೆ ಬಗ್ಗೆ ಉಪನ್ಯಾಸ, ಪ್ರವಚನಕಾರ ಸಂಗಮೇಶ ಅವರಿಂದ ಗುರುವಿನ ಸಂದೇಶ ಕುರಿತು ಪ್ರವಚನ ನೀಡಿದರು.

Contact Your\'s Advertisement; 9902492681

ಮುಂಜಾನೆ ಗ್ರಾಮದಲ್ಲಿ ಮುತ್ತೈದೆಯರಿಂದ ಕುಂಬೋತ್ಸವ ನಡೆಯಿತು. ಬಾಬುರಾವ ಪಾಟೀಲ ಮತ್ತು ಮಹಾದೇವಪ್ಪ ಬರುಡೆ ದಂಪತಿಗಳಿಂದ ಅಭಿನವ ಶಿವಲಿಂಗ ಸ್ವಾಮಿಗಳವರ ಪಾದ ಪೂಜೆ ನಡೆಯಿತು. ನಂತರ ಮದಗುಣಕಿ ಭಕ್ತರಿಂದ ಅಭೀನವ ಶ್ರೀಗಳಿಗೆ ಪುಷ್ಪವೃಷ್ಠಿ ಮಾಡಲಾಯಿತು. ಚಲಗೇರಾ, ಜಳಕಿ, ಮಾದನಹಿಪ್ಪರಗಿ, ದರ್ಗಾಶಿರೂರ, ಕೇರುರ, ಮುಂತಾದ ಗ್ರಾಮಗಳ ಭಕ್ತರು ಆಗಮಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here