ಸೇವಾ ಮನೋಭಾವನೆ ಬೆಳೆಸಿಕೊಳ್ಳಿ: ಪಾಟೀಲ

0
18

ಆಳಂದ:ಸೇವಾದಳದ ಮೂಲಕ ರಾಷ್ಟ್ರೀಯ ಮನೋಭಾವನೆ,ಮಾನವೀಯ ಮೌಲ್ಯಗಳು ಬೆಳೆಸಿಕೊಳ್ಳಿ ಎಂದು ಸೇವಾದಳ ಜಿಲ್ಲಾ ಸಮಿತಿ ಸದಸ್ಯ ಗುರುಶರಣ ಪಾಟೀಲ ಕೊರಳ್ಳಿ ಕರೆ ನೀಡಿದರು.

ಭಾರತ ಸೇವಾದಳ ತಾಲ್ಲೂಕು ಘಟಕ, ಶಿಕ್ಷಣ ಇಲಾಖೆ ಸಹಯೋಗದಲ್ಲಿ ಪಟ್ಟಣದ ತೋಂಟದಾರ್ಯ ಅನುಭವ ಮಂಟಪದಲ್ಲಿ ಮಂಗಳವಾರ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಕರ ಒಂದು ದಿನದ ಪುನಃಶ್ಚೇತನ ಕಾರ್ಯಾಗಾರ ಉದ್ಘಾಟಿನೆ ಅವರು ಮಾತನಾಡಿದರು.

Contact Your\'s Advertisement; 9902492681

ಕ್ಷೇತ್ರ ಶೀಕ್ಷಣಾಧಿಕಾರಿ ಸೋಮಶೇಖರ್ ಹಂಚನಾಳ ಮಾತನಾಡಿ,ಶಿಬಿರದಲ್ಲಿ ಶಿಕ್ಷಕರು ತರಬೇತಿ ಪಡೆದುಕೊಂಡು,ಶಾಲೆಯಲ್ಲಿ ಮಕ್ಕಳಿಗೆ ಕಲಿಸಿ ಎಂದು ಸೂಚಿಸಿದರು.

ತೋಂಟದಾರ್ಯ ಅನುಭವ ಮಂಟಪದ ಸಂಚಾಲಕರಾದ ಕೋರಣೇಶ್ವರ ಸ್ವಾಮೀಜಿ ಸಾನ್ನಿಧ್ಯವಹಿಸಿ ಮಾತನಾಡಿದ ಅವರು,ಪ್ರಾಮಾಣಿಕ ಸೇವೆ ಇತ್ತಿಚಿಗೆ ಕಡಿಮೆ ಆಗುತ್ತಿದ್ದು,ದೇಶ ಕಟ್ಟುವ ಕೆಲಸ ಶಿಕ್ಷಕರ ಮೇಲಿದೆ,ಶಿಕ್ಷಕರ ಕಾರ್ಯಕ್ಕೆ ಯಾವಾಗಲು ಮಠ ಸಹಕರಿಸುತ್ತದೆ ಎಂದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷ ನರಸಪ್ಪ ಬಿರಾದಾರ,ಅನುಧಾನಿತ ಶಾಲಾ ಸಹ ಶಿಕ್ಷಕ ಸಂಘದ ತಾಲೂಕು ಅಧ್ಯಕ್ಷ ಮಲ್ಲಿನಾಥ ಮುನ್ನೋಳಿ, ಸೇವಾದಳ ತಾಲ್ಲೂಕಾಧ್ಯಕ್ಷ ಸೂರ್ಯಕಾಂತ ತಟ್ಟಿ ಮಾತನಾಡಿದರು.

ರಾಷ್ಟ್ರೀಯ ಚಿನ್ಹೆಗಳು, ಸೇವಾದಳದ ಕುರಿತು ರಾಜ್ಯ ಸಂಪನ್ಮೂಲ ಶಿಕ್ಷಕ ಜಯಪ್ರಕಾಶ ಕಟ್ಟಿಮನಿ ಪ್ರ‍ಾತ್ಯಕ್ಷೀಕೆ ನೀಡಿದರು.ಸಮಿತಿಯ ಚಂದ್ರಶೇಖರ್ ಜಮಾದಾರ ಸೇವಾದಳದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.

ಸರ್ಕಾರಿ ಪದವಿ ಕಾಲೇಜಿನ ಪ್ರಾಂಶು ಪಾಲ ಡಾ.ರವೀಂದ್ರ ಕಂಟೇಕೂರ ಉಪನ್ಯಾಸ ನೀಡಿದರು. ದೈಹಿಕ ಶಿಕ್ಷಕರಾದ ದತ್ತಪ್ಪ ಬಡಿಗೇರ ಸೇರಿದಂತೆ ತಾಲ್ಲೂಕಿನ ವಿವಿಧ ಶಾಲೆಯ ದೈಹಿಕ ಶಿಕ್ಷಕರು ಪಾಲ್ಗೊಂಡಿದ್ದರು. ಭಾರತ ಸೇವಾದಳದ ಅಧಿನಾಯಕ ಶರಣಬಸಪ್ಪ ವಡಗಾಂವ ಕಾರ್ಯಕ್ರಮ ನಿರೂಪಿಸಿ,ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here