ಜನರ ನಿರೀಕ್ಷೆಗೆ ತಕ್ಕಂತೆ ರಾಜ್ಯದ ಬಜೆಟ್ ಮಂಡನೆ: ಅಜಮಲ್ ಗೋಲಾ

0
18

ಕಲಬುರಗಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಂಡಿಸಿರುವ ಮೊದಲ ಬಜೆಟ್ ಜನರ ನಿರೀಕ್ಷೆ ಮತ್ತು ರಾಜ್ಯದ ಸರ್ವಾಂಗಿಣ ಅಭಿವೃದ್ಧಿಗೆ ಪೋರಕವಾಗಿದಲ್ಲದೇ ಎಲ್ಲರ ಓಳೆತು ಬಯಸುವ ಬಜೆಟ್ ಇದಾಗಿದೆ ಎಂದು ಕಲಬುರಗಿ ಮಹಾನಗರ ಪಾಲಿಕೆಯ ಸದಸ್ಯ ಹಾಗೂ ವಿರೋಧ ಪಕ್ಷದ ನಾಯಕರಾದ ಅಜಮಲ್ ಗೋಲಾ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ಸರಕಾರದ ಮೊದಲನೇ ಬಜೆಟ್ ನಲ್ಲಿ ಎಲ್ಲಾ ಜಿಲ್ಲೆಗಳು ಮತ್ತು ಎಲ್ಲಾ ಸಮುದಾಯಗಳಿಗೆ ನ್ಯಾಯ ಒದಗಿಸುವ ಬಜೆಟ್ ಮಂಡನೆಯಾಗಿದೆ. ಬಿಜೆಪಿ ಸರಕಾರ ಅಲ್ಪಸಂಖ್ಯಾತರಿಗಾಗಿ ಇರುವಂತಹ ಯೋಜನೆಗಳು ರದ್ದುಪಡಿಸಿ ಅನ್ಯಾಯ ಮಾಡಿತು. ಅಲ್ಪಸಂಖ್ಯಾತರ ಮಕ್ಕಳಿಗೆ ನೀಡಲಾಗುತ್ತಿದ ವಿದ್ಯಾರ್ಥಿ ವೇತನ ರದ್ದು ಪಡಿಸಿ ಶಿಕ್ಷಣದಿಂದ ವಂಚಿತರಾಗಿಸುವ ಹುನ್ನಾರ ನಡೆಸಿತು.

Contact Your\'s Advertisement; 9902492681

ಕಲಬುರಗಿ ಉತ್ತರ ಮತಕ್ಷೇತ್ರದ ಶಾಸಕಿ ಕನೀಜ್ ಫಾತೀಮಾ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಚಿವರಾದ ಬಿ.ಝಡ್ ಜಮೀರ್ ಅಹ್ಮದ್ ಹಾಗೂ ಸಚಿವ ರಹೀಮ್ ಖಾನ್ ಅವರ ಶ್ರಮದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಬಜೆಟ್ ನಲ್ಲಿ ಅಲ್ಪಸಂಖ್ಯಾತರಿಗೆ ವಿದ್ಯಾರ್ಥಿ ವೇತನ, ಸ್ವಯಂ ಉದ್ಯೋಗ ಸೇರಿದಂತೆ ವಿವಿಧ ಯೋಜನೆಗಳಿಗೆ ಹಣ ಮಿಸಲಿಟ್ಟು ನ್ಯಾಯ ಒದಗಿಸುವ ಕೆಲಸ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

ಬಿಜೆಪಿ ಸರಕಾರದಲ್ಲಿ ಕಲ್ಯಾಣ ಕರ್ನಾಟಕಕ್ಕೆ ನಿರಂತರ ಕಡೆಗಣೆ ಮಾಡಲಾಗುತ್ತಿತ್ತು, ಕಲಬುರಗಿಗೆ ಆರೋಗ್ಯ ಸೇವೆ ಉನ್ನತಿಕರಣಕ್ಕೆ ಬಜೆಟ್ ನಲ್ಲಿ ಮಿಸಲಿಡುವ ಮೂಲಕ ಕಲಬುರಗಿ ಆರೋಗ್ಯ ಕ್ಷೇತ್ರವಾಗಿ ಬೆಳೆಯಲಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here