ಪರೀಕ್ಷೆಯನ್ನು ಹಬ್ಬದಂತೆ ಆಚರಿಸಿ

0
32

ಜೇವರ್ಗಿ: ವಿದ್ಯೆ ಸಾಧಕನ ಸ್ವತ್ತು. ಶ್ರದ್ಧೆ, ಪ್ರಾಮಾಣಿಕತೆ ಹಾಗೂ ಸಮಯಪಾಲನೆಯ ಮಹತ್ವಅರಿತು ವಿದ್ಯಾಭ್ಯಾಸ ಮಾಡಿದರೆ ಪರೀಕ್ಷೆಗಳನ್ನು ಸುಲಭವಾಗಿಎದುರಿಸಬಹುದು.ಪರೀಕ್ಷೆಗೆ ಪೂರ್ವತಯಾರಿಗೆ ಮುನ್ನ ಭಯವನ್ನುತೊರೆಯಬೇಕು.ಆತ್ಮ ವಿಶ್ವಾಸವನ್ನು ರೂಢಿಸಿಕೊಳ್ಳಬೇಕು.ಆಗ ಮಾತ್ರಪರೀಕ್ಷೆ ಹಬ್ಬವಾಗುತ್ತದೆಎಂದುಉಪನ್ಯಾಸಕ, ಲೇಖಕ ದೇವಿಂದ್ರಪ್ಪ ವಿಶ್ವಕರ್ಮ ಹೇಳಿದರು.

ನಗರದ ಬಸವೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಬಿ.ಇಡಿ ಪ್ರಥಮ ಮತ್ತುತೃತೀಯ ಸೆಮೆಸ್ಟರ್‍ನ ಪರೀಕ್ಷೆಗಳ ಕುರಿತುಪ್ರಶಿಕ್ಷಣಾರ್ಥಿಗಳಿಗೆ ವಿಶೇಷ ಉಪನ್ಯಾಸ ನೀಡಿದಅವರುಮೊಬೈಲ್ ಬಳಕೆ ಕಡಿಮೆ ಮಾಡಿ,ಅಭ್ಯಾಸ ಹಾಗೂ ಗುರಿಯೆಡೆಗೆ ಹೆಚ್ಚಿನ ಗಮನ ನೀಡಿದರೆಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಾಗಲಿದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

Contact Your\'s Advertisement; 9902492681

ನಿಮ್ಮಓದು ನಿಮ್ಮನ್ನುಉನ್ನತ ಸ್ಥಾನಕ್ಕೆ ಒಯ್ಯುತ್ತದೆ.ಸರ್ಕಾರ ಕಲಿಕೆಗೆ ಎಲ್ಲ ಸೌಲಭ್ಯ ಒದಗಿಸಿದೆ. ಶಿಕ್ಷಣಕ್ಕಾಗಿ ಹಲವಾರುಯೋಜನೆ ಜಾರಿಗೊಳಿಸಿದ್ದು ಎಲ್ಲವನ್ನೂ ಪಡೆದುಕೊಳ್ಳಬೇಕು.ಮನುಷ್ಯನನ್ನು ಸುಸಂಸ್ಕøತ, ಜವಾಬ್ದಾರಿಯುತ, ಸ್ವಾಭಿಮಾನಿ ಹಾಗೂ ಸ್ವಾವಲಂಬಿಯಾಗಿ ಮಾಡುವುದೇ ಶಿಕ್ಷಣದ ಉದ್ದೇಶಆಗಿದೆ.ಗುರಿತಲುಪುವುದಕ್ಕಾಗಿ ಕೀಳರಿಮೆಯನ್ನು ತೊರೆಯಬೇಕು. ಆತ್ಮ ವಿಶ್ವಾಸ ಬೆಳೆಸಿಕೊಳ್ಳಬೇಕು.ಯಾವುದೇ ಆಕರ್ಷಣೆಗಳಿಗೆ ಒಳಗಾಗದೇ ಕಠಿಣಅಧ್ಯಯನದಕಡೆಗೆಗಮನಹರಿಸಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿಆದರ್ಶ ಪ್ರಶಿಕ್ಷಣಾರ್ಥಿಗಳಾದ ಆಶಾ ಎಮ್, ರಾಜೇಶ್ವರಿ, ಲಕ್ಷ್ಮೀ, ಬಸಮ್ಮಾ, ದಾನೇಶ್ವರಿ, ಮೋನಿಕಾ, ಶರಣಗೌಡ, ರಮೇಶ, ವೀರೇಶ, ಸತ್ತರಸಾಬ ಸೇರಿಎಲ್ಲಾ ಪ್ರಶಿಕ್ಷಣಾರ್ಥಿಗಳಿಗೂ ಪರೀಕ್ಷೆಗೆ ಶುಭಕೋರಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here