ಕಲಬುರಗಿ: ಎಲ್ ಆಂಡ್ ಟಿ ಕಂಪನಿಯವರು ನಿರ್ಮಾಣ ಮಾಡುತ್ತಿರುವ ಓವರ್ ಹೆಡ್ ಟ್ಯಾಂಕರನಲ್ಲಿ ಇತ್ತೀಚೆಗೆ ಇಬ್ಬರು ಬಾಲಕರು ದುರ್ಮರಣ ಹೊಂದಿದ ಹಿನ್ನೆಲೆಯಲ್ಲಿ ಮಹಾ ನಗರ ಪಾಲಿಕೆ ಆಯುಕ್ತ, ಭುವನೇಶ್ವರ್ ಕುಮಾರ್ ಹಾಗೂ ಮಹಾಪೌರ ವಿಶಾಲ ದರ್ಗಿ ನೇತೃತ್ವದಲ್ಲಿ ನಗರದ ಪಾಲಿಕೆ ಕಚೇರಿಯಲ್ಲಿ ಮಂಗಳವಾರ ಸಭೆ ನಡೆಯಿತು.
ಪಾಲಿಕೆ ಆಯುಕ್ತ ಹಾಗೂ ಮಹಾಪೌರ ಸೇರಿದಂತೆ ಇತರರು ಹೇಳಿದರೂ,ಕ್ಯಾರೇ ಎನ್ನದೇ ನಿರ್ಲಕ್ಷತ ಮಾಡುತ್ತಿರುವ ಹಿನ್ನೆಲೆಯಲ್ಲಿ ಖಡಕ್ ಸೂಚನೆ ನೀಡಿದರು.
ಪಾಲಿಕೆಯ ವ್ಯಾಪ್ತಿಯಲ್ಲಿಗಿಂತ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸುರಕ್ಷಿತವಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ, ಇವರು ಸುರಕ್ಷಿತ ಕ್ರಮಗಳನ್ನು ವಹಿಸದೇ ಕೆಲಸ ಮಾಡಿದ ಪರಿಣಾಮ ಇಬ್ಬರು ಬಾಲಕರ ಸಾವಾಗಿದೆ. ಎಲ್ ಆಂಡ್ ಟಿ ಕಂಪನಿಯವರ ಮೇಲೆ ಒಂದೊಂದೇ ದೂರು ದಾಖಲಿಸಬೇಕು. ಅಂದಾಗ ಮಾತ್ರ ಇವರಿಗೆ ಬುದ್ಧಿ ಬರುತ್ತದೆ.ಈಗಾಗಲೇ ಎಲ್ ಆಂಡ್ ಟಿ,ಯ ಸಂಜಯ್ ಅವರ ಮೇಲೆ ಎಫ್ ಐ ಆರ್ ಆಗಿದೆ.ಸುರಕ್ಷಿತೆಯ ಬಗ್ಗೆ ಗಮನ ಹರಿಸಿ.ಜೊತೆಗೆ ಕುಡಿಯುವ ನೀರಿನ ಬೊರವೆಲ್ ಸಮಸ್ಯೆ ಅತೀ ಆಗಿದೆ. ಅದನ್ನು ಕೂಡಲೇ ಬಗೆಹರಿಸಲು ಸೂಚಿಸಿದರು.
ನಗರದ ಸಮಸ್ಯೆಗಳನ್ನು ಒಂದು ವಾರದಲ್ಲಿ ಬಗೆಹರಿಸಬಹುದು.ಆದರೆ ಪಾಲಿಕೆ ಅಧಿಕಾರಿಗಳ ನಿರ್ಲಕ್ಷತನ ಎದ್ದು ಕಾಣುತ್ತಿದೆ.ಇವರ ಮುಂದೆ ಅದೆಷ್ಟು ಸಭೆಗಳನ್ನು ಮಾಡಿದರೂ,ಉಪಯೋಗ ಇಲ್ಲ ಎಂದು ಮೇಯರ್ ವಿಶಾಲ ದರ್ಗಿ ಹೇಳಿದರು.
ಎಲ್ ಆಂಡ್ ಟಿ ಕಂಪನಿ ಪ್ರಾರಂಭವಾದಾಗಿನಿಂದ ಇದೇ ರೀತಿಯ ಸಮಸ್ಯೆಗಳಿವೆ. ಆದರೆ,ಇವರ ಹತ್ತಿರ ಯಾವುದೇ ಬದಲಾವಣೆ ಆಗಿಲ್ಲ. ಅಗಸ್ಟ್ 5.ರಂದು ಎಲ್ಲಾ ಸಮಸ್ಯೆಗಳಿಗೆ ಅಂತ್ಯ ಮಾಡಲಾಗುವುದು ಎಂದು ಸಭೆಯಲ್ಲಿ ಇದ್ದ ಎಲ್ ಆಂಡ್ ಟಿ ಅಧಿಕಾರಿಗಳು ಭರವಸೆ ನೀಡಿದರು. ಶನಿವಾರದೊಳಗೆ 10 ಲಕ್ಷ ಹಣದ ಚೆಕ್ (ತಲಾ ಬಾಲಕನಿಗೆ) ಸಿದ್ದಗೊಳಿಸಿ, ಜೊತೆಗೆ ಅವರ ಮನೆಯಲ್ಲಿ ಇಬ್ಬರಿಗೂ ನೌಕರಿ ಕುರಿತು ವ್ಯವಸ್ಥೆ ಮಾಡಿಸಿ ಎಂದರು.
ನಗರದ ಬಹುತೇಕ ವಾರ್ಡಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಅತಿಯಾಗಿದೆ.ಹೀಗಾಗಿ ಕುಡಿಯುವ ನೀರಿನಿ ಬೊರವೆಲ್ ಗಳನ್ನು ಸರಿಪಡಿಸಿ ಸೂಕ್ತ ವ್ಯವಸ್ಥೆ ಮಾಡಿಸಿ ಎಂದರು. ಉಪಮಹಾಪೌರ ಶಿವಾನಂದ ಪಿಸ್ತಿ, ವಿರೋಧ ಪಕ್ಷ ನಾಯಕ ಅಜುಮಲ್ ಗೋಲ್ಲಾ ಸೇರಿದಂತೆ ಅಧಿಕಾರಿಗಳು ಇದ್ದರು.