ಕಲಬುರಗಿ: ನಮ್ಮ ನಮ್ಮ ಜೀವನದಲ್ಲಿ ನಿಸ್ವಾರ್ಥ ದಿಂದ ನಮನ್ನು ನಗಿಸುವವರೇ ಫೊಟೂಗ್ರಾಫಿರ್ ಅದು ನಮ್ಮ ಫೊಟೂ ಛಂದ ಬರಬೇಕೆಂದು ಅವನು ಎಷ್ಟೋ ದುಖದಲ್ಲಿದರೂ ನಮ್ಮನ್ನು ನಗಿಸುತ್ತಾನೆ ಅಂತಹಾ ನಿಸ್ವಾರ್ಥ ವ್ಯಕ್ತಿಗಳಿಗೆ ಗೌರವ ಸನ್ಮಾನ ನಿಜವಾಗಿಯೂ ಅರ್ಥಪೂರ್ಣ ವಾದ್ದುದು ಹಾಗೂ ಸುಮಾರು10 ವರ್ಷಗಳಿಂದ ಈ ಗುಡಿಯಲ್ಲಿ ಸೇವೆ ಸಲ್ಲಿಸುತ್ತಾ ಬರುತ್ತಿರುವುದು ಕೂಡಾ ವಿಶೇಷ ಎಂದು ಗೊಳಾ( ಬಿ ) ಹಾಗೂ ನರೊಣ ಗ್ರಾಮದ ಪೂಜ್ಯ ಶ್ರೀ ಚನ್ನಮಲ್ಲ ಸ್ವಾಮಿಗಳು ಫೊಟೂಗ್ರಾಫಿರ್ ಗಳಿಗೆ ಸನ್ಮಾನಿಸಿ ಆರ್ಶಿವಚನ ನೀಡಿದರು.
ಸೇಡಂ ರಸ್ತೆಯ ವಿದ್ಯಾನಗರದ ಶ್ರೀ ಮಲ್ಲಿಕಾರ್ಜುನ ದೇವಾಲಯಲದಲ್ಲಿ ನಡೆದ ಪುರಾಣ ಕಾರ್ಯ ಕ್ರಮದಲ್ಲಿ “ವಿಶ್ವ ಫೊಟೂಗ್ರಾಫಿ ದಿನ” ಆಚರಿಸಲಾಯುತ್ತು. ಫೊಟೂಗ್ರಾಫರ ಗೆಳೆಯರಾದ ರಾಜಶೇಖರ ನಾಗಶೆಟ್ಟಿ ಮರಪಳ್ಳಿ ಹಾಗೂ ಶ್ರೀ ಶಿವಾನಂದ ಶಾಂತಯ್ಯ ಸಂಧಿಮಠ ಅವರಿಗೆ ಗೊಳಾ (ಬಿ) ಹಾಗೂ ನರೊಣ ಗ್ರಾಮದ ಪೂಜ್ಯ ಶ್ರೀ ಚನ್ನಮಲ್ಲ ಸ್ವಾಮಿಗಳ ಸನ್ಮಾನಸಿ ಸತ್ಕರಿಸಿದರು.
ವಿದ್ಯಾನಗರ ವೆಲಫೇರ್ ಸೊಸೈಟಿ ಅದ್ಯಕ್ಷ ಮಲ್ಲಿನಾಥ ದೇಶಮುಖ,ಕಾರ್ಯದರ್ಶಿ ಶಿವರಾಜ ಅಂಡಗಿ,ಕಲಾವಿದರಾದ ಜಗದೀಶ್ ನಗನೂರ,ಜಗದೀಶ್ ದೇಸಾಯಿ ಕಲ್ಲೂರ ಹಾಗೂ ನೂರಾರು ಭಕ್ತರು ಉಪಸ್ಥಿತರಿದ್ದರು.
ನಾವು ಮಾಡುವ ಸಾಮಾಜಿಕ ಕಾರ್ಯ ಸೆರೆಹಿಡಿಯಬೇಕು ಮುಂದೊಂದುದಿನ ಆ ಫೊಟೊ ಇನೂಬ್ಬರಿಗೆ ಮಾದರಿ ಆದಾಗ ಮಾತ್ರ ನಮ್ಮ ಶ್ರಮ ಸಾರ್ಥಕವಾಗುತ್ತದೆ ಹಾಗೆ ಆ ಫೊಟೂಗೆ ಒಂದು ಅರ್ಥ ಬರುತ್ತದೆ ಎನುತ್ತಾ ಕೊನೆಯಲ್ಲಿ ಎಲ್ಲರು ಒಬ್ಬಬ್ಬರಾಗಿ ಬಂದು ಫೊಟೂಗ್ರಾಫಿರ್ ಗಳಿಗೆ ಅಭಿನಂದನೆ ಸಲ್ಲಿಸಿದ್ದು ಒಂದು ವಿಶೇಷ ಎಂದು ಸೊಸೈಟಿ ಕಾರ್ಯದರ್ಶಿ ಶಿವರಾಜ ಅಂಡಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.