ಸುರಪುರ: ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರಕ್ಕೆ ಯತ್ನಸಿದವನನ್ನು ಬಂಧಿಸುವಂತೆ ದೂರು ನೀಡಿದರು ಇದುವರೆಗೂ ಬಂಧಿಸದಿರುವುದು ಬೇಸರದ ಸಂಗತಿಯಾಗಿದೆ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಕ್ರಾಂತಿಕಾರಿ ಬಣ) ಜಿಲ್ಲಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ ಬೇಸರ ವ್ಯಕ್ತಪಡಿಸಿದರು.
ನಗರದ ಪೊಲೀಸ್ ಠಾಣೆ ಮುಂದೆ ಸಮಿತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿ,ಹುಣಸಗಿ ತಾಲ್ಲೂಕಿನ ಕೊಡೇಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಹೊಂಬಳಕಲ್ ಗ್ರಾಮದ ಕುರುಬ ಸಮುದಾಯದ ಅಪ್ರಾಪ್ತ ಯುವತಿಯನ್ನು ಅದೇ ಗ್ರಾಮದ ನಂದಪ್ಪ ಸೋಮನಾಳ ಎಂಬುವವನು ಅಪಹರಣ ಮಾಡಿದ್ದಾನೆಂದು ಆರೋಪಿಸಿ ದೂರು ದಾಖಲಿಸಲಾಗಿದೆ.ಅದೆರೀತಿಯಾಗಿ ಹುಣಸಗಿ ತಾಲ್ಲೂಕಿನ ಮಂಜಲಾಪುರಹಳ್ಳಿ ಗ್ರಾಮದ ದಲಿತ ಸಮುದಾಯದ ೧೪ ವರ್ಷದ ಯುವತಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಪರಮಣ್ಣ ಸಾಲವಾಡಗಿ ಎಂಬ ಈ ಇಬ್ಬರು ಕಾಮುಕರನ್ನು ಬಂಧಿಸುವಂತೆ ದೂರು ಸಲ್ಲಿಸಿದ್ದರು ಇದುವರೆಗೆ ಬಂಧಿಸದಿರುವುದನ್ನು ಖಂಡಿಸುವುದಾಗಿ ತಿಳಿಸಿದರು.
ಕೂಡಲೆ ಈ ಇಬ್ಬರು ಆರೋಪಿಗಳನ್ನು ಬಂಧಿಸಬೇಕು ಮತ್ತು ಈ ಎರಡೂ ಪ್ರಕರಣಗಳನ್ನು ತೀವ್ರಗತಿ ಸರ್ಕಾರದಿಂದ ಬಾಲ ನ್ಯಾಯ ಮಂಡಳಿಯಿಂದ ಸಂತ್ರಸ್ತರಿಗೆ ಪರಿಹಾರ ಕೊಡಿಸಬೇಕು ಎಂದು ಒತ್ತಾಯಿಸುತ್ತೆವೆ.ಒಂದು ವೇಳೆ ಈ ನಮ್ಮ ಮನವಿಗೆ ಸ್ಪಂಧಿಸದಿದ್ದಲ್ಲಿ ಸಪ್ಟೆಂಬರ್ ೪ ರಂದು ಹುಣಸಗಿಯ ಡಾ.ಬಾಬಾ ಸಾಹೇಬ ಅಂಬೇಡ್ಕರ ವೃತ್ತದಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿ,ನಂತರ ಯಾದಗಿರಿ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಬರೆದ ಮನವಿಯನ್ನು ಡಿವಾಯ್‌ಎಸ್‌ಪಿ ಶಿವನಗೌಡ ಪಾಟೀಲ ಮೂಲಕ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಕೆಎಸ್‌ಡಿಎಸ್‌ಎಸ್ ಜಿಲ್ಲಾ ಸಂಘಟನಾ ಸಂಚಾಲಕ ಅಜೀಜ್ ಸಾಬ್ ಐಕೂರ,ಸಮಿತಿ ಕಲಾ ಮಂಡಳಿ ಜಿಲ್ಲಾ ಸಂಚಾಲಕ ಜಟ್ಟೆಪ್ಪ ನಾಗರಾಳ,ವಿದ್ಯಾರ್ಥಿ ಘಟಕದ ಜಿಲ್ಲಾ ಸಂಚಾಲಕ ಡಾ: ಮಲ್ಲಿಕಾರ್ಜುನ ಆಶನಾಳ, ಬುದ್ಧಿವಂತ ನಾಗರಾಳ,ತಾಲ್ಲೂಕು ಸಂಚಾಲಕ ತಿಪ್ಪಣ್ಣ ಶೆಳ್ಳಿಗಿ,ಮಾನಪ್ಪ ಶೆಳ್ಳಿಗಿ,ಮರಿಲಿಂಗಪ್ಪ ಹುಣಸಿಹೊಳೆ,ಖಾಜಾ ಹುಸೇನ ಗುಡಗುಂಟಿ, ಮಲ್ಲಿಕಾರ್ಜುನ ಮಳ್ಳಳ್ಳಿ,ರಮೇಶ ಹುಂಡೇಕಲ್,ಶರಣಪ್ಪ ಕುರಕುಂದಿ,ಭೀಮಣ್ಣ ಹುಣಸಗಿ, ಚಂದ್ರಶೇಖರ ಬಲಶೆಟ್ಟಿಹಾಳ,ಮುತ್ತುರಾಜ ಹುಲಿಕೇರಿ,ಗುರಪ್ಪ ಮಾಳನೂರ,ಸಾಬಣ್ಣ ಸದಬ,ಭೀಮಣ್ಣ ಕ್ಯಾತನಾಳ, ಮರಿಲಿಂಗಪ್ಪ ಹುಣಸಗಿ,ಶರಣಪ್ಪ ಉಳ್ಳೆಸುಗೂರ,ಮಾನಪ್ಪ ಬಿಜಾಸಪುರ,ಬಸವರಾಜ ಕಲ್ಲದೇವನಹಳ್ಳಿ,ಬಸಪ್ಪ ಅಗತೀರ್ಥ,ಯಲ್ಲಾಲಿಂಗ ಗುಂಡಲಗೇರಿ ಸೇರಿದಂತೆ ಅನೇಕರಿದ್ದರು.