ಸುರಪುರ: ರಾಜ್ಯ ಕಂಡ ಹಿಂದುಳಿದ ವರ್ಗಗಳ ಅಭಿವೃಧ್ಧಿಯ ಹರಿಕಾರರಾಗಿದ್ದವರು ಮಾಜಿ ಮುಖ್ಯಮಂತ್ರಿ ಡಿ.ದೇವರಾಜು ಅರಸುರವರು ಎಂದು ಗ್ರೇಡ-೨ ತಹಸೀಲ್ದಾರ ಸೂಫಿಯಾ ಸುಲ್ತಾನ ಮಾತನಾಡಿದರು.
ನಗರದ ತಹಸೀಲ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜು ಅರಸುರವರ 115ನೇ ಜಯಂತಿ ಆಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ,ನಾಡಿನಲ್ಲಿಯ ದೀನ ದಲಿತ ಮತ್ತು ಹಿಂದುಳಿದ ಎಲ್ಲ ವರ್ಗಗಳ ಜನರ ಅಭಿವೃಧ್ಧಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದು ಹಿಂದುಳಿದ ವರ್ಗಗಳ ಅಭಿವೃಧ್ಧಿಯ ಹರಿಕಾರರಾಗಿ ಜನರ ಮನದಲ್ಲಿ ಸ್ಥಾನ ಪಡೆದಿದ್ದಾರೆ.ಅವರ ಹೆಸರಲ್ಲಿ ಇಂದು ಸರಕಾರ ಹಿಂದುಳಿದ ವರ್ಗಗಳ ಅಭಿವೃಧ್ಧಿ ಮಂಡಳಿ ಸ್ಥಾಪಿಸಿದೆ.ಅಲ್ಲದೆ ಡಿ.ದೇವರಾಜು ಅರಸು ಹೆಸರಲ್ಲಿ ಪ್ರಶಸ್ತಿಯನ್ನು ನೀಡುತ್ತಿದ ಎಂದು ಬಣ್ಣಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ದೇವರಾಜು ಅರಸುರವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ,ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ತಹಸೀಲ್ ಸಿರಸ್ತೆದಾರ ಪ್ರವೀಣ ಸಜ್ಜನ,ಕೊಂಡಲ ನಾಯಕ,ಸೋಮಶೇಖರ ಪತ್ತಾರ,ನರಸಿಂಗರಾವ್,ರವಿ ನಾಯಕ,ಶಿವು,ಶ್ವೇತಾ,ಮಲ್ಲಮ್ಮ ಸೇರಿದಂತೆ ಅನೇಕರಿದ್ದರು.