ಸುರಪುರ: ಪಂಚಾಯತಿ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ

0
19

ಸುರಪುರ:ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ಬಸವರಾಜ ಸಜ್ಜನ್ ರವರ ಅಧ್ಯಕ್ಷತೆಯಲ್ಲಿ ತಾ.ಪಂ ಸಭಾಂಗಣದಲ್ಲಿ ನರೇಗಾ,ಪ್ರಧಾನ ಮಂತ್ರಿ ಅವಾಸ್ ಯೋಜನೆ, ಸ್ಟಾಪ್ ರಿಜಿಸ್ಟರೇಷನ, ಹಾಗೂ ಹಲವು ವಿಷಯಗಳ ಕುರಿತು ಪ್ರಗತಿ ಪರಿಶೀಲನ ಸಭೆ ಜರುಗಿತು.

ಈ ಸಭೆಗೆ ವಿಶೇಷವಾಗಿ ತಹಶೀಲ್ದಾರ್ ತಿಸುಬ್ಬಣ್ಣ ಜಮಖಂಡಿ ರವರು ಭಾಗವಹಿಸಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಮನೆಹಾನಿಯಾಗಿದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ವಿಲೇಜ್ ಅಕೌಂಟೆಂಟ್, ಜಂಟಿಯಾಗಿ ವರದಿ ಸಲ್ಲಿಸಲು ತಿಳಿಸಿದರು,

Contact Your\'s Advertisement; 9902492681

ಇ.ಓ ಬಸವರಾಜ ಸಜ್ಜನ್ ಮಾತನಾಡಿ ನರೇಗಾದಲ್ಲಿ ಕಾಮಗಾರಿಗುಚ್ಛ ಹಾಗೂ ಕ್ರಿಯಾಯೋಜನೆ ಇರಲೇಬೇಕು, ಅನುಷ್ಠಾನ ಮಾಡಿದ ಅಭಿವೃದ್ಧಿ ಕಾಮಗಾರಿ ಸ್ಥಳಕ್ಕೆ ಸಂಬಂಧಿಸಿದ ತಾಂತ್ರಿಕ ಸಹಾಯಕರು ಭೇಟಿ ನೀಡಿ, ಪರಿಶೀಲನೆ ಮಾಡಬೇಕು. ಕಾಮಗಾರಿ ಮಾಹಿತಿ ಹೊಂದಿದ ನಾಮಫಲಕ ಕಾಮಗಾರಿ ಸ್ಥಳದಲ್ಲಿರಬೇಕು. ಅನುಷ್ಠಾನ ಮಾಡಿದ ಕಾಮಗಾರಿಗೆ ಸಂಬಂಧಿಸಿದ 21ಅಂಶಗಳನ್ನು ಒಳಗೊಂಡ ಕಡತ ಸಿದ್ಧಪಡಿಸಿ, ಕಾಮಗಾರಿ ಪೂರ್ಣಗೊಳಿಸಿ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಹಾಯಕ ನಿರ್ದೇಶಕರಾದ ರವಿಚಂದ್ರ ರಡ್ಡಿ, ತಾಲೂಕ ಕಾರ್ಯಕ್ರಮ ವ್ಯವಸ್ಥಾಪಕರು ತಾಪಂ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ನರೇಗಾ ಯೋಜನೆಯ ತಾಂತ್ರಿಕ ಸಂಯೋಜಕರಾದ ಶಿವಯೋಗಿ ಹಿರೇಮಠ, ವಿವಿಧ ಇಲಾಖೆ ಅಧಿಕಾರಿಗಳು, ತಾಲೂಕ ಕಾರ್ಯಕ್ರಮ ವ್ಯವಸ್ಥಾಪಕರು (ಸಾಮಾಜಿಕ ಪರಿಶೋಧನೆ), ತಾಲೂಕ ಪಂಚಾಯತ್ ಸಿಬ್ಬಂದಿ ವರ್ಗದವರು ಹಾಗೂ ತಾಂತ್ರಿಕ ಸಹಾಯಕರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here