ಬೆಂಗಳೂರು; ಹೈ ಕೋರ್ಟ್ ನಲ್ಲಿ ಆಗಸ್ಟ್ 15 ರಂದು ಕಾಶ್ಮೀರದ ಕಾರ್ಗಿಲ್ ನಲ್ಲಿ ಸಲಾಮ್ ಸೋಲ್ಜರ್ಸ್ ಶೀರ್ಷಿಕೆಯಡಿಯಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯದ ಕೇಂದ್ರ ಸರ್ಕಾರಿ ವಕೀಲರಾದ ಮೋಹನ್ ಕುಮಾರ್ ದಾನಪ್ಪನವರು ಹಮ್ಮಿಕೊಂಡಿರುವ ಜಾಗೃತಿ ಮ್ಯಾರಥಾನ್ ಓಟದ ಭಿತ್ತಿಪತ್ರವನ್ನ ಬಿಡುಗಡೆಗೊಳಿಸಿ ಶುಭ ಹಾರೈಸಿದರು.
ನಂತರ ಮಾತನಾಡಿದ ಹೈ ಕೋರ್ಟ್ ನ ಹಿರಿಯ ವಕೀಲರು ಹಾಗೂ ಮಾಜಿ ಹೆಚ್ಚುವರಿ ಅಡ್ವೋಕೇಟ್ ಜನರಲ್ ರಾದ ಎಂ. ಅರುಣ್ ಶ್ಯಾಮ್ ರವರು ಯುವ ಸಮೂಹ ಸಾಮಾಜಿಕ ಜಾಲತಾಣದಲ್ಲಿ ಸಮಯವ್ಯರ್ಥ ಮಾಡುವುದನ್ನ ಖಂಡಿಸಿ ಸೇನೆ ಸೇರುವಂತೆ ಜಾಗೃತಿ ಮೂಡಿಸುತ್ತಿರುವ ಕಾರ್ಯ ಶ್ಲಾಘನೀಯ, ಯಶಸ್ವಿ ಸಿಗಲೆಂದು ಹಾರೈಸಿದರು.
ಮೋಹನ್ ಕುಮಾರ್ ರ ಕ್ರೀಯಾಶೀಲ ವ್ಯಕ್ತಿಯಾಗಿದ್ದು ಈ ಹಿಂದೆ ಹಲವಾರು ಜಾಗೃತಿ ಮ್ಯಾರಥಾನ್ ಮಾಡಿ ಹಲವಾರು ದಾಖಲೆಗಳನ್ನ ಮಾಡಿರುತ್ತಾರೆ ಮಾಡಿದ್ದು ಪ್ರಸ್ತುತ ಕಾರ್ಗಿಲ್ ನಲ್ಲಿ ಹಮ್ಮಿಕೊಂಡಿರುವ ಕಾರ್ಯವು ಕೇಂದ್ರ ಸರ್ಕಾರಕ್ಕೆ ಸಂತಸ ಪಡುವ ಸಂಗತಿಯಾಗಿದೆ ಎಂದು ಹೈ ಕೋರ್ಟ್ ನ ಡೆಪ್ಯುಟಿ ಸಾಲಿಸಿಟರ್ ಜನರಲ್ ಆಫ್ ಇಂಡಿಯಾರವರಾದ ಹೆಚ್ ಶಾಂತಿ ಭೂಷಣ್ ರವರು ತಿಳಿಸಿದರು.