ವೈದ್ಯರು ಮಾನವೀಯತರ ಮೆರೆಯಬೇಕಾದ ಅವಶ್ಯಕತೆಯಿದೆ

0
19

ಶಹಾಬಾದ:ವೈದ್ಯರನ್ನು ಎರಡನೇ ದೇವರೆಂದು ಕಾಣುತತ್ತಿರುವ ಸಮಾಜದಲ್ಲಿ ವೈದ್ಯರು ಮಾನವೀಯತೆ ಮೆರೆಯಬೇಕಾದ ಅವಶ್ಯಕತೆ ಎಂದಿಗಿಂತಲೂ ಇಂದು ಅಗತ್ಯವಿದೆ ಎಂದು ನಗರದ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ.ಶಂಕರ ಹೇಳಿದರು.

ಅವರು ನಗರದ ಸೇಂಟ್ ಥಾಮಸ್ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾದ ವೈದ್ಯ ದಿನಾಚರಣೆ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

Contact Your\'s Advertisement; 9902492681

ಎಲ್ಲವೂ ವ್ಯಾಪಾರೀಕರಣವಾಗುತ್ತಿರುವ ಮತ್ತು ಮಾನವೀಯ ಸಂಬಂಧಗಳು ನಶಿಸಿ ಹೋಗುತ್ತಿರುವ ಈಗಿನ ಕಾಲಘಟದಲ್ಲಿ, ವೈದ್ಯ ಮತ್ತು ರೋಗಿಯ ಸಂಬಂಧವು ಮೊದಲಿನಂತೆ ಉಳಿದಿಲ್ಲ. ‘ವೈದ್ಯೋ ನಾರಾಯಣೋ ಹರಿಃ’ ಎಂಬ ಮಾತು ಈಗ ಬಹುಶಃ ಎಲ್ಲ ವೈದ್ಯರಿಗೂ ಅನ್ವಯಿಸಲಿಕ್ಕಿಲ್ಲ. ಅದೇ ರೀತಿ ಇಂದಿನ ರೋಗಿಗಳೂ ಕೂಡಾ ವೈದ್ಯರನ್ನು ಪೂರ್ತಿ ವಿಶ್ವಾಸದಿಂದ ನೋಡುವ ಸ್ಥಿತಿಯಲ್ಲಿ ಇಲ್ಲ. ಜುಲೈ ಒಂದರಂದು ಎಲ್ಲ ವೈದ್ಯರು ತಮ್ಮ ವೃತ್ತಿಜೀವನ, ಏಳು ಬೀಳುಗಳತ್ತ ದೃಷ್ಟಿ ಹರಿಸಿ. ತಪ್ಪು ಒಪ್ಪುಗಳನ್ನು ಪುನರ್ ವಿಮರ್ಶಿಸಿಕೊಂಡು, ಸಾಧನೆಯ ಮಜಲುಗಳತ್ತ ಹಿನ್ನೋಟ ಬೀರಿ, ತಮ್ಮ ತನು, ಮನವನ್ನು ತಮ್ಮ ವೃತ್ತಿಗೆ ಪುನಃ ಅರ್ಪಿಸಿಕೊಳ್ಳುವ ಸುದಿನ ಎಂದು ಹೇಳಿದರು.

ಸೇಂಟ್ ಥಾಮಸ್ ಶಾಲೆಯ ಸಿಸ್ಟರ್ ಅನಸ್ಥಾಷಿಯಾ ಮಾತನಾಡಿ,ಭಾರತದಲ್ಲಿ ವೈದ್ಯಕೀಯ ರಂಗದಲ್ಲಿ ನಿಶ್ವಾರ್ಥ ರೀತಿಯಲ್ಲಿ ಸೇವೆ ಸಲ್ಲಿಸುತ್ತಿರುವ ಪ್ರತಿಯೋಬ್ಬ ವೈದ್ಯರನ್ನು ಗೌರವಿಸುವ ಉದ್ದೇಶದಿಂದ ಪ್ರತಿವರ್ಷ ರಾಷ್ಟ್ರೀಯ ವೈದ್ಯರ ದಿನಾಚರಣೆ ಆಚರಿಸಲಾಗುತ್ತಿದೆ.

ಹಾಗಾಗಿವೈದ್ಯಕೀಯ ಭಾತೃತ್ವದ ಧಣಿವರಿಯದ ಪ್ರಯತ್ನಗಳು ಸಮರ್ಪಣೆ ಮತ್ತು ಜೀವಗಳನ್ನು ಉಳಿಸಲು ಆರೋಗ್ಯವನ್ನು ಉತ್ತೇಜಿಸಲು ಮತ್ತು ಅಗತ್ಯವಿರುವ ವ್ಯಕ್ತಿಗಳಿಗೆ ವೈದ್ಯಕಿಯ ಆರೋಗ್ಯ ಆರೈಕೆ ಮಾಡಲು ನ್ಯಾಯಯುತ ಬದ್ಧತೆಗಾಗಿ ಕೃತಜ್ಞನತೆ ಮತ್ತು ಮೆಚ್ಚುಗೆಯನ್ನು ವ್ಯಕ್ತಪಡಿಸಲು ಇದೇ ಮತತ್ವದ ವೇದಿಕೆಯಾಗಿ ಈ ದಿನಾಚರಣೆ ಸಾರ್ಥಕ ಸೇವೆ ಉದ್ದೇಶವೇ ರಾಷ್ಟ್ರೀಯ ವೈದ್ಯ ದಿನಾಚರಣೆ ಯ ಮಹತ್ವದ ಅರ್ಥವಾಗಿದೆ ಎಂದರು.

ಅತಿಥಿಗಳಾಗಿ ಡಾ.ಜಮೀಲ್ ಬೇಗ್, ನರ್ಸಗಳಾದ ಶೋಭಾ,ಪವಿತ್ರ, ಶಿಕ್ಷಕರಾದ ಶಿಲ್ಪಾ, ಪ್ರೀಯಾ,ನಂದಿನಿ, ರೂಪಾ, ನಿಲೋಫರ್ ಫಾತಿಮಾ, ಇಮ್ಯಾನುವೆಲ್, ಸಾಯಿಬಣ್ಣ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here