ಕಲಬುರಗಿ: ಅಜಾತ ಶತ್ರು, ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿ ದಿ. ಡಾ. ಎನ್ ಧರಂಸಿಂಗ್ ಅವರ 6 ನೇ ಪುಣ್ಯಸ್ಮರಣೋತ್ಸವ ಅವರ ಹುಟ್ಟೂರು ಜೇವರ್ಗಿಯ ನೆಲೋಗಿಯಲ್ಲಿ ಪರಿವಾರದವರು ಹಾಗೂ ಅಭಿಮಾನಿಗಳು ಸೇರಿಕೊಂಡು ಜುಲೈ 27 ಗುರುವಾರ ಸರಳವಾಗಿ ಆಚರಿಸುವ ಮೂಲಕ ಮುತ್ಸದ್ದಿ ಜನನಾಯಕನ ಕೆಲಸ ಕಾರ್ಯಗಳು, ಅವು ನಡೆದು ಬಂದ ದಾರಿಯನ್ನು ಮೆಲಕು ಹಾಕಿದರು.
ನೆಲೋಗಿ ಧರಂಸಿಂಗ್ ಅವರ ಹುಟ್ಟೂರು, ಧರಂಸಿಂಗ್ ಪುತ್ರರು ಹಾಗೂ ಜೇವರ್ಗಿ ಶಾಸಕರಾದ ಡಾ. ಅಜಯ್ ಸಿಂಗ್, ಮಾಜಿ ಎಂಎಲ್ಸಿ ವಿಜಯ್ ಸಿಂಗ್, ಪುತ್ರಿ ಪ್ರಿಯದರ್ಶಿನಿ ಚಂದ್ರಾಸಿಂಗ್, ಪತ್ನಿ ಶ್ರೀಮತಿ ಪ್ರಭಾವತಿ ಧರಂಸಿಂಗ್ ಸೇರಿದಂತೆ ಕುಟುಂಬದವರು, ಅಭಿಮಾನಿಗಳೆಲ್ಲರೂ ಧರಂಸಿಂಗ್ ಅವರ ಪುಣ್ಯಸ್ಮರಣೆಯಲ್ಲಿ ಪಾಲ್ಗೊಂಡು ಅಗಲಿದ ನಾಯಕನನ್ನು ನೆನೆದರು.
ಪೂಜ್ಯ ತಂದೆಯವರು ಹಾಗೂ ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳಾದ ದಿ. ಎನ್. ಧರ್ಮಸಿಂಗ್ ರವರ 6 ನೇ ಪುಣ್ಯ ಸ್ಮರಣೆ ಅಂಗವಾಗಿ ಜೇವರ್ಗಿ ತಾಲೂಕಿನ ನೆಲೋಗಿ ಗ್ರಾಮದಲ್ಲಿ ತಂದೆಯವರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಕುಟುಂಬದ ಸದಸ್ಯರು ವಿವಿಧ ಮಠದ ಪೂಜ್ಯರು, ಪP್ಷÀದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಗ್ರಾಮಸ್ಥರು ಉಪಸ್ಥಿತರಿದ್ದರು ಎಂದು ಶಾಸಕರಾದ ಡಾ. ಅಜಯ್ ಸಿಂಗ್ ಹೇಳಿದ್ದಾರೆ.
ತಮ್ಮ ಬದುಕಿನ 81 ಸಾರ್ಥಕ ವಸಂತಗಳ ಜೊತೆಗೇ 50 ವರ್ಷಗಳ ಸುದೀರ್ಘ ರಾಜಕೀಯ ಜೀವನವನ್ನು ನಡೆಸಿದಂತಹ ಹಾಗೂ ಕಷ್ಟದಲ್ಲಿರುವವರ ಕೈ ಹಿಡಿಯುವ ಧರಂಸಿಂಗ್ ಸ್ವಭಾವವೇ ಅವರನ್ನು ಇಂದಿಗೂ ಜನಮನದಲ್ಲಿ ಉಳಿಯುವಂತೆ ಮಾಡಿದೆ.