ಮನೆ ಕುಸಿದು ಸಾವು, ಸಂತ್ರಸ್ತ ಕುಟುಂಬಕ್ಕೆ 5 ಲಕ್ಷ ರು ಪರಿಹಾರ

0
21

ಕಲಬುರಗಿ: ಸತತ ಸುರಿಯುತ್ತಿರುವ ಮಳೆ, ಭೀಮಾ ನದಿ ಪ್ರವಾಹಗಳಿಂದ ಎದುರಾಗಿರುವ ಸಂಕಷ್ಟ, ಸವಾಲುಗಳನ್ನು ಸಮರ್ಥವಾಗಿ ಎದುರಿಸಿ ಜನರನ್ನು ಕಾಪಾಡುವ ದಿಶೆಯಲ್ಲಿ ಜೇವರ್ಗಿ ಮತಕ್ಷೇತ್ರದಲ್ಲಿನ ಅಧಿಕಾರಿಗಳ ತಂಡ ಸದಾಕಾಲ ಸಿದ್ಧರಾಗಿರುವಂತೆ ಶಾಸಕ ಡಾ. ಅಜಯ್ ಸಿಂಗ್ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಗುರುವಾರ ಜೇವರ್ಗಿ ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ತ್ವರಿತವಾಗಿ ಹಮ್ಮಿಕೊಂಡ ತಾಲೂಕಿನ ಅಧಿಕಾರಿಗಳ ಸಭೆಯಲ್ಲಿ ಜೇವರ್ಗಿ ಶಾಸಕರಾದ ಡಾ. ಅಜಯ್ ಸಿಂಗ್ ರವರು ಭಾಗವಹಿಸಿ ಇತ್ತೀಚೆಗೆ ಮಳೆಯಿಂದಾಗಿ ತಾಲೂಕಿನಲ್ಲಿ ಆಗಿರುವ ಸಮಸ್ಯೆ ಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿದರು. ಅಧಿಕಾರಿಗಳ ಸಭೆ ನಡೆಸಿದ ಶಾಸಕರು ಮಳೆಯಿಂದ ಆಗಿರುವ ಹಾನಿ, ಭೀಮಾ ನದಿ ನೀರಿನ ಮಟ್ಟ ಇತ್ಯಾದಿ ಸಂಗತಿಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತ ಪಡೆದರು.

Contact Your\'s Advertisement; 9902492681

ಮಳೆ ಒಡ್ಡಿರುವ ಪ್ರಕೃತಿ ವಿಕೋಪದ ಸಂಕಷ್ಟಕ್ಕೆ ಪರಿಹಾರ ಸೂಚಿಸಬೇಕಾಗದೆ. ಜೊತೆಗೇ ಭೀಮಾ ನದಿ ಪ್ರವಾಹದಿಂದ ಆಗಬಹುದಾದ ಪ್ರವಾಹದ ಮುನ್ನೆಚ್ಚರಿಕೆ ಕ್ರಮಗಳನ್ನು ಈಗಿನಿಂದಲೇ ಕೈಗೆತ್ತಿಕೊಳ್ಳಬೇಕು, ತಾಲೂಕು ಆಡಳಿತದ ಎಲಾ ಸಿಬ್ಬಂದಿಗಳು ಕೇಂದ್ರಸ್ಥಾನ ಬಿಡಬಾರದು ಎಂದು ಶಾಸಕ ಡಾ. ಅಜಯ್ ಸಂಗ್ ಅಧಿಕಾರಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಮುಂಜಾಗ್ರತ ಕ್ರಮವಾಗಿ ಕುಡಿಯುವ ನೀರು ಕಲುಷಿತ ವಾಗದಂತೆ ಎಚ್ಚರ ವಹಿಸಬೇಕೆಂದು ಹೇಳಿದರು. ತೀವ್ರ ಮಳೆಯಿಂದ ಹಾನಿಗೊಳಗಾದ ಗ್ರಾಮಗಳಲ್ಲಿ ಅಗತ್ಯವಿದ್ದರೆ ಹೆಚ್ಚು ಗಂಜಿ ಕೇಂದ್ರಗಳನ್ನು ತೆಗೆದು ನಿರಾಶ್ವತರಿಗೆ ಮೂಲ ಸೌಲಭ್ಯಗಳನ್ನು ಒದಗಿಸಬೇಕೆಂದು ಆದೇಶ ನೀಡಿದರು ಅಗತ್ಯವಿದ್ದರೆ ಹೆಚ್ಚು ಗಂಜಿ ಕೇಂದ್ರಗಳನ್ನು ತೆಗೆದು ನಿರಾಶ್ರಿತರಿಗೆ ಸೂಕ್ತ ಸೌಲಭ ಒದಗಿಸಬೇಕೆಂದು ತಿಳಿಸಿದರು

ನಿರಂತರ ಮಳೆ ಸುರಿಯುತ್ತಿರೋದರಿಂದ ಜನ- ಜಾನುವಾರು ಸುರಕ್ಷತೆ ಮುಖ. ಈ ದಿಶೆಯಲ್ಲಿ ಜಾಗೃತಿ ಮೂಡಿಸಬೇಕಾದ ಅಗತ್ಯವಿದೆ. ನದಿ ಪಾತ್ರದಲ್ಲಿ ಯಾರೂ ಜಾನುವಾರು ಜೊತೆಗೇ ಹೋಗಬಾರದು. ನದಿ ತೀರದಲ್ಲಿ ಯಾವಾಗ ಬೇಕಾದರೂ ನೀರು ಹೆಚ್ಚಳವಾಗುವ ಸಾಧ್ಯತೆ ಇರೋದರಿಂದ ಜನಲ್ಲಿ ಈ ಕುರಿತಂತೆ ಎಚ್ಚರಿಕೆ ನೀಡಬೇಕು. ಎಲ್ಲಾ ನದಿ ತೀರದ ಹಳ್ಳಿಗಳಲ್ಲಿ ಡಂಗುರ ಸಾರುವ ಕೆಲಸವಾಗಬೇಕು ಎಂದು ಶಾಸಕರು ಸೂಚಿಸಿದರು.

ತಾಲೂಕಿನ ಮಳೆ, ನೆರೆ ಯಾವುದರಂದಲಾದರೂ ಜೀವಹಾನ, ಪ್ರಾಣಿಗಳ ಬಲಿಯಾದಲ್ಲಿ ತಕ್ಷಣ ಸ್ಥಳಭೇಟಿ, ಪಂಚನಾಮೆ ಎಲ್ಲಾ ಮಾಡ ಒಂದವರಿಗೆ ಸೂಕ್ತ ಪರಿಹಾರ ದೊರಕುವಂತೆ ಕ್ರಮಗಳು ಜರುಗಬೇಕು. ಭೀಮಾನದಿ ಪ್ರವಾಹ ಬಂದಲ್ಲಿ ಗಂಜಿಕೇಂದ್ರ ತೆರೆಯಲು ಅಗತ್ಯ ಸಿದ್ಧತೆ ಮಾಡಿಟ್ಟುಕೊಳ್ಳಬೇಕು. ಈಗಾಗಲೇ ಜೇವರ್ಗಿ ಕ್ಷೇತ್ರದಲ್ಲಿ ಮಳೆಯಿಂದ 55 ಮನೆಗಳಿಗೆ ಹಾನಿಯಾಗಿದೆ. ಮನೆ ಕುಸಿತು ಓರ್ವ ಮಹಿಳೆಯ ಸಾವಾಗಿದೆ ಎಂಬ ಮಾಹಿತಿ ಸಭೆಯಲ್ಲಿ ಅಧಿಕಾರಿಗಳು ವಿವರಿಸಿದರು.

ಬಿರಾಳ ಬಿ ಗ್ರಾಮದಲ್ಲಿ ಮನೆ ಕುಸಿದು ಸಾವನ್ನಪ್ಪಿರುವ ಬಸಮ್ಮ ಇವರ ನೊಂದ ಕುಟುಂಬಕ್ಕೆ ಈಗಾಗಲೇ 5 ಲಕ್ಷ ರು ಪರಿಹಾರ ಈಡಲಾಗಿದೆ. ಈಗಾಗಲೇ ನೇಮಕವಾಗಿರುವ ನೋಡಲ್ ಅಧಿಕಾರಿಗಳು ತಮ್ಮ ನಿಯೋಜಿತ ಸ್ಥಳದಲ್ಲಿದ್ದು ನೆರೆ, ಮಳೆ ಸಕಷ್ಟಗಳಿಂದ ಜನ- ಜಾನುವಾರು ಕಾಪಾಡುವ ಕೆಲಸಕ್ಕೆ ಆದ್ಯತೆ ನೀಡಬೇಕು ಎಂದು ಶಾಸಕರಾದ ಡಾ. ಅಜಯ್ ಸಿಂಗ್ ಸಭೆಯಲ್ಲಿ ಸೂಚಿಸಿದರು. ಪ್ರಕೃತಿ ವಿಕೋಪ ಪರಿಹಾರ ಸಮೀತಿಯ ತಾಲೂಕು ಅಧ್ಯಕ್ಷgರೂ ಆಗಿರುವ ತಹಶೀಲ್ದಾರ್‍ರರು ಹಾಗೂ ತಾಲೂಕಿನ ಅಧಿಕಾರಿಗಳು ಸಭೆಯಲ್ಲಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here