ನವದೆಹಲಿ: ಕರ್ನಾಟಕ ಬಿಜೆಪಿ ರಾಜ್ಯಧ್ಯಕ್ಷ ಸ್ಥಾನಕ್ಕೆ ಸಂಸದ ನಳಿನ್ ಕುಮಾರ ಕಟೀಲ್ ಅವರು ನೇಮಕ ಮಾಡಿ ಬಿಜೆಪಿ ಕೇಂದ್ರ ಕಾರ್ಯದರ್ಶಿ ಅರುಣ್ ಸಿಂಗ್ ಅವರು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಹಿಂದೆ ರಾಜ್ಯಧ್ಯಕ್ಷರಾಗಿದ್ದು, ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ನೇಮಕ ಹಿನ್ನೆಲೇಯಲ್ಲಿ ರಾಜ್ಯದ ಬಿಜೆಪಿ ರಾಜ್ಯಧ್ಯಕ್ಷ ಸ್ಥಾನ ತೆರವುಗೊಂಡಿತ್ತು. ರಾಜ್ಯ ಬಿಜೆಪಿ ಸಾರಥಿ ಯಾರಾಗಬಹುದೆಂಬ ಕುತುಹಲ ರಾಜ್ಯದ ಬಿಜೆಪಿ ಪಕ್ಷದ ನಾಯಕರಲ್ಲಿ ಇತ್ತು. ಬಿಜೆಪಿ ಹೈಕಮಾಂಡ್ ನಳಿನ್ ಕುಮಾರ ಕಟೀಲ್ ಗೆ ರಾಜ್ಯಧ್ಯಕ್ಷ ಸ್ಥಾನ ಹೆಗಲಿಗೆ ಹಾಕಿದೆ.
ಅರವಿಂದ ಲಿಂಬಾವಳಿ ನೇಮಕ ಆಗಬಹುದೆಂಬ ಲೆಕ್ಕಾಚಾರ ಹುಸಿ. ಪಕ್ಷದ ಮೇಲೆ ನಿಯಂತ್ರಣ ಸಾಧಿಸಬೇಕೆಂಬ ಬಿಎಸ್ವೈ ಯತ್ನಕ್ಕೆ ಹಿನ್ನಡೆ ಯಾಗಿದೆ ಎಂದು ಹೇಳಲಾಗುತ್ತಿದೆ.