ನಮ್ಮನಡಿಗೆಮಸಣದಕಡೆಗಲ್ಲಕಲ್ಯಾಣದಕಡೆಗೆ

0
171

ಪಂಚಮಸಾಲಿ ಪೀಠದ ಪೂಜ್ಯ ಶ್ರೀ. ಜಯಮೃತ್ಯುಂಜಯ ಸ್ವಾಮೀಜಿಗಳ ಮೇಲೆ ವೈದಿಕರು ಮಾತಿನ ಹಲ್ಲೆ ನಡೆಸುತ್ತಿದ್ದಾರೆ. ಕೈಲಾಗದ ವ್ಯಕ್ತಿ ಮೈ ಎಲ್ಲಾ ಪರಚಿಕೊಂಡ ಎನ್ನುವಂತೆ ಇವರ ವರ್ತನೆ ಇವೆ. ಜಯ ಮೃತ್ಯುಂಜಯ ಅವರು ಕ್ಷಮೆ ಕೇಳದಿದ್ದರೆ ಏನೇನೋ ಕಡಿದು ಕಟ್ಟಿ ಹಾಕುತ್ತೇವೆ ಎಂಬ ಬೆದರಿಕೆಯ ಮಾತುಗಳನ್ನೂ ಇವರು ಬರೆದಿದ್ದಾರೆ. ಹೀಗೆ ಬೆದರಿಕೆ ಹಾಕಿದ ಪಾಖಂಡಿಗಳ ಬರಹಕ್ಕೆ ಮೂಲ‌ ಕಾರಣ ಯಾರು ? ಎಂದು ತಿಳಿಸುವ ತಾಕತ್ತು ಸಹಿತ ಇಲ್ಲ.

ಪುರೋಹಿತ ಪಳಿಯುಳಿಕೆಗಳು ಒಂದು ಸತ್ಯವನ್ನು ಅರ್ಥ ಮಾಡಿಕೊಳ್ಳಬೇಕು. “ಮುಲ್ಲಾ ಪಾದ್ರಿ ಪೂಜಾರಿ ಪುರೋಹಿತ ಮಾನವನ ಆತ್ಮ ಶಕ್ತಿಯನ್ನು ಹಾಳು ಮಾಡುವ ಶನಿಗಳು” ಎಂಬ ಓಶೋನ ಮಾತು ಸತ್ಯಸ್ಯ ಸತ್ಯ. ಈ ಶನಿ ಸಂತಾನಿಗಳು ನಮ್ಮ ರಾಷ್ಟ್ರದಲ್ಲಿ ಉಂಟು ಮಾಡಿದ ಮಾನಸಿಕ ಭಯೋತ್ಪಾದನೆಗೆ ಮಿತಿ ಮೆರೆಯೇ ಇಲ್ಲ. ಈ ಪರಾವಲಂಬಿಕೆಗಳ ಬಂಡವಾಳವೆಂದರೆ ಜನರ ಅಜ್ಞಾನ. ಜನ‌ ಸಾಮಾನ್ಯರ ಮುಗ್ದ ನಂಬಿಕೆಗಳ ಮೇಲೆ ಸವಾರಿ ಮಾಡಿ ಅವರನ್ನು ಬಲಹೀನರನ್ನಾಗಿ ಮಾಡುತ್ತದೆ. ಮಂತ್ರ, ಮಾಟ,ಶಕ್ತಿ, ಪೂಜೆ, ಅರ್ಚನೆ,ದೇವರು, ಆತ್ಮ ಎಂಬ ಪದಪುಂಜಗಳನ್ನು ಬಳಸಿ ಜನರನ್ನು ಭ್ರಮೆಯಲ್ಲಿ ಬದುಕುವಂತೆ ನೋಡಿಕೊಳ್ಳುತ್ತವೆ.

Contact Your\'s Advertisement; 9902492681

ವೇದ ಶಾಸ್ತ್ರ ಆಗಮ ಪುರಾಣಗಳೆಲ್ಲವು
ಕೊಟ್ಟಣವ ಕುಟ್ಟಿದ ನುಚ್ಚು ತೌಡು ಕಾಣಿಭೋ.
ಇವ ಕುಟ್ಟಲೇಕೆ ಕುಸುಕಲೇಕೆ ?
ಅತ್ತಲಿತ್ತ ಹರಿವ ಮನದ ಶಿರವನರಿದಡೆ
ಬಚ್ಚಬರಿಯ ಬಯಲು
ಚೆನ್ನಮಲ್ಲಿಕಾರ್ಜುನಾ.

ವೇದ ಶಾಸ್ತ್ರ ಪುರಾಣಗಳನ್ನು ನಮಗೆ ಅಪೌರುಷಯಗಳು ಎಂದು ನಂಬಿಸಿಕೊಂಡು ಬಂದರು. ಸ್ವತಃ ದೇವರೆ ಇದನ್ನು ಬರೆದನೆಂದು ಬಣ್ಣಿಸಿದರು.‌ ಜನವೂ ಸಹ ಇದನ್ನು ನಂಬಿ‌‌ಬಿಟ್ಟಿದೆ. ಆದರೆ ಇವುಗಳನ್ನು ಬರೆದವರು ಯಾರು ? ಎಂಬ ಸ್ಪಷ್ಟತೆ ಬಸವಾದಿ ಶರಣರಿಗೆ ಇತ್ತು. ವೇದವೆಂಬುದು ಓದಿನ ಮಾತು ಎಂದು ಸಾರಿದರು. ಶಾಸ್ತ್ರ ಸಂತೆಯ ಸುದ್ದಿ ಎಂದರು. ಕೊಟ್ಟಣವ ಕುಟ್ಟುವ ನುಚ್ಚು ತೌಡು ಎಂದು ವಾಸ್ತವ ಸಂಗತಿ ಬಿಚ್ಚಿಟ್ಟರು.

ಇದಕ್ಕಿಂತ ಪೂರ್ವದಲ್ಲಿ ಬುದ್ದನೂ ವೈದಿಕರ ಕ್ರೂರತನದ ಕುರಿತು ಮಾತನಾಡಿದ. ಚಾರ್ವಾಕರೂ ಈ ಕುತಂತ್ರಿಗಳ ಅನಾಚಾರ ಬಟಾಬಯಲು ಮಾಡಿದರು. ಸ್ವಾಮಿ ವಿವೇಕಾನಂದ ಹಿರಿದ ಕತ್ತಿಯಾಗಿ ಅವರ ಮೇಲೆ ಮುಗಿಬಿದ್ದರು. ಸ್ವಾತಂತ್ರ್ಯ ಸೇನಾನಿ, ಹೋರಾಟಗಾರ ಭಗತಸಿಂಗ್ ನಾನೇಕೆ ನಾಸ್ತಿಕನಾದೆ ? ಎಂಬ ಗ್ರಂಥದ ಮೂಲಕ ಬೆತ್ತಲೆಗೊಳಿಸಿದರು. ಪೆರಿಯಾರ ರಾಮಸ್ವಾಮಿ ಪುರೋಹಿತರ ಬುಡಕ್ಕೆ ಬೆಂಕಿ ಇಟ್ಟರು. ಡಾ.ಬಿ.ಆರ್.ಅಂಬೇಡ್ಕರ್ ಮೌಢ್ಯಗಳು, ಇಲ್ಲದ ದೇವರುಗಳು ನಮ್ಮ ದೇಶದಲ್ಲಿನ ಅನಾಚಾರ ಮೌಢ್ಯ ಜಾತಿ ವ್ಯವಸ್ಥೆಯ ಬೆಳವಣಿಗೆಯ ಬೇರುಗಳು ಎಂಬುದನ್ನು ಬಟಾಬಯಲುಗೊಳಿಸಿದರು. ಪುಲೆ ದಂಪತಿಗಳು, ಸಾಹು ಮಹಾರಾಜ, ಕೆರಳದ ನಂಗಲಿ ಪುರೋಹಿತರ ಕ್ರೌರ್ಯಗಳನ್ನು ಎದುರಿಸ ಬಗೆಯನ್ನು ಇತಿಹಾಸ ನಮಗೆ ಬಿಚ್ಚಿ ಹೇಳುತ್ತದೆ.

ನಮ್ಮ ರಾಷ್ಟ್ರದ ಹೆಮ್ಮೆಯ ಕವಿ ಕುವೆಂಪು ಪುಂಡ ಪುರೋಹಿತರ ಜಂಘಾಬಲವೆ ಅಡಗುವಂತೆ ತಮ್ಮ ಕವಿತೆಗಳ, ಬರಹಗಳ ಮೂಲಕ ದಾಖಲಿಸಿದರು. ಆದರೆ ಈ ಪರಾವಲಂಬಿಗಳಿಗೆ ಮುಖವೆಂಬುದೆ ಇಲ್ಲ.‌ ನಾಚಿಕೆಗೇಡಿ ಜನ. ಧೂರ್ತರು, ಮುಖವಾಡಗಳನ್ನು ಇಟ್ಟುಕೊಂಡು ಬದುಕುವ ಅಧಮರು ದಲಾಲಿಗಳು ಎಂದು ಇತಿಹಾಸದ ಪುಟದಲ್ಲಿ ದಾಖಲೆಯಾಗಿದೆ.

ಇವರೆಲ್ಲರ ಒಟ್ಟಾಶಯಗಳನ್ನು ಸರಿಯಾಗಿ ಗ್ರಹಿಸಿದ ಕೂಡಲಸಂಗಮ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮಿ ಹೇಳಿದರೆ ಇವರಿಗೆ ಅಂಡಿನಲ್ಲಿ ಬ್ಯಾಡಗಿ ಮೆಣಸಿನಕಾಯಿ ಇಟ್ಟಂತೆ ಆಗಿದೆ.

ಇಟ್ಟಿಯ ಹಣ್ಣ ನರಿ ತಿಂದು ಸೃಷ್ಟಿ ತಿರುಗಿತ್ತೆಂಬಂತೆ ಮಟ್ಟಿಯನಿಟ್ಟ ದ್ವಿಜರ ಮಾತದೇಕೆ
ಹಗಲುಗಾಣದ ಗೂಗೆ ಇರುಳಾಯಿತ್ತೆಂದಡೆ,
ಜಗಕ್ಕೆ ಇರುಳಪ್ಪುದೆ ಮರುಳೆ
ಹೋಮದ ನೆವದಲ್ಲಿ ಹೋತನು ಕೊಂದು ತಿಂಬ ಅನಾಮಿಕರೊಡನಾಡಿ ಗೆಲಿವುದೇನು ಕೂಡಲಸಂಗಮದೇವಾ.

ತಾನು ತಿಂದುದೇ ಇಟ್ಟೆಯ ಹಣ್ಣು. ಹಾಗಾಗಿ ಅದಕ್ಕೆ ತಲೆ ಗಿರ್ ಎಂದು ಸುತ್ತಿದಂತೆ ಆಗುತ್ತದೆ. ತನ್ನ ತಲೆಯನ್ನು ಸರಿಯಾಗಿ ರಿಪೇರಿ ಮಾಡಿಕೊಳ್ಳಲಾಗದೆ ಸೃಷ್ಟಿಯೇ ತಿರುಗಿದೆ ಎಂದು ಬೊಬ್ಬೆ ಹೊಡೆಯುತ್ತಿದೆ. ತಾನು ಹಗಲನ್ನೆ ನೋಡಿಲ್ಲ, ಕತ್ತಲಾಯಿತು ಎಂದು ಭ್ರಮಿಸುವ ಗೂಬೆಯ ತರಹ ಇವರ ವರ್ತನೆಗಳಿವೆ ಎಂದು ಬಸವಣ್ಣನವರು ಇವರ ಅಸಲಿ ವರ್ತನೆಯನ್ನು ದಾಖಲಿಸಿದ್ದಾರೆ.

ದೇವರ , ಧರ್ಮದ ಹೆಸರಿನ ಮೇಲೆ ವ್ಯವಹಾರ ನಡೆಸುವ ಇವರಿಗೆ ನಿಜಕ್ಕೂ ದೇವರು ಬೇಕಾಗಿಲ್ಲ. ಧರ್ಮವೂ ಬೇಕಾಗಿಲ್ಲ. ಈ ಎರಡೂ ಪದಗಳು ವ್ಯಾಪಾರದ ಸರಕು ಮಾತ್ರ.‌ ದೇವರೆಂಬುದು ಆಯಾ‌ ವ್ಯಕ್ತಿಗಳ ಖಾಸಗಿ ವ್ಯವಹಾರ. ಇಲ್ಲಿ ಮಧ್ಯವರ್ತಿಗೆ ಅವಕಾಶ ಇಲ್ಲ. ದೇವರೊಡನೆ ನಾನು ಕೂಡುವುದು, ನನ್ನೊಂದಿಗೆ ದೇವರು ಒಡನಾಡುವುದು ಅಂದರೆ ನಾನೂ ದೇವರಾಗುವುದೆಂದೇ ಅರ್ಥ. ಇಲ್ಲಿ ಈ ಪುರೋಹಿತ ಕಿಸಾಮತಿ ಏನಿದೆ ?

ತನ್ನಾಶ್ರಯದ ರತಿಸುಖವನು,
ತಾನುಂಬ ಊಟವನು
ಬೇರೆ ಮತ್ತೊಬ್ಬರ ಕೈಯಲ್ಲಿ ಮಾಡಿಸಬಹುದೆ
ತನ್ನ ಲಿಂಗಕ್ಕೆ ಮಾಡುವ ನಿತ್ಯನೇಮವ
ತಾ ಮಾಡಬೇಕಲ್ಲದೆ ಬೇರೆ
ಮತ್ತೊಬ್ಬರ ಕೈಯಲ್ಲಿ ಮಾಡಿಸಬಹುದೆ
ಕೆಮ್ಮನೆ ಉಪಚಾರಕ್ಕೆ ಮಾಡುವರಲ್ಲದೆ ನಿಮ್ಮನೆತ್ತಬಲ್ಲರು, ಕೂಡಲಸಂಗಮದೇವಾ.

ಜಯಮೃತ್ಯುಂಜಯ ಸ್ವಾಮೀಜಿ ಹೇಳಿರುವುದು ಹೊಸದೇನೂ ಅಲ್ಲ. ಶರಣರ, ದಾರ್ಶನಿಕರ,ದಾಸರ, ಹೋರಾಟಗಾರರ ಮಾತುಗಳನ್ನು ಓದಿ ತಿಳಿದು ಜನತೆಗೆ ತಿಳಿಸಿದ ನಿಜ ಜಂಗಮ.‌ ಇವರು ಯಾವ ತಪ್ಪು ಮಾಡಿಲ್ಲ. ಕ್ಷಮೆ ಕೇಳಿ ತಮ್ಮ ಮೋಸದ, ವಂಚನೆಯ ಬದುಕನ್ನು ತಿದ್ದಿಕೊಳ್ಳಬೇಕಾದವರು ದಲಾಲಿಗಳೆ ಹೊರತು ಸ್ವಾಮೀಜಿ ಅಲ್ಲ. ಸುಖಾ ಸುಮ್ಮನೆ ಉರಕೊಳ್ಳುವವರು ಸರಿಯಾಗಿ ಇತಿಹಾಸದ ಪುಟಗಳನ್ನು ಓದಬೇಕು. ಚರಿತ್ರೆ ಅರಿಯದ ಕಾಕೋಳಿಗಳು ನವಿಲಿನಂತೆ ಕುಣಿಯಬಾರದು.

ನಮ್ಮೆಲ್ಲರ ನಡಿಗೆ ಕಲ್ಯಾಣದ ಕಡೆಗೆ ಆಗಬೇಕೆ ಹೊರತು, ಮಸಣದ ಕಡೆಗೆ ಆಗಬಾರದು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here