ರಂಗಂಪೇಟೆ: ಡಾ. ಬಿ.ಆರ್ ಅಂಬೇಡ್ಕರ್ ಪದವಿ ಕಾಲೇಜ್ ಸಸಿ ನೆಡುವ ಕಾರ್ಯಕ್ರಮ

0
22

ಸುರಪುರ: ನಗರದ ರಂಗಂಪೇಟೆಯ ಡಾ:ಬಾಬಾ ಸಾಹೇಬ ಅಂಬೇಡ್ಕರ್ ಪದವಿ ಮಹಾವಿದ್ಯಾಲಯದಲ್ಲಿ ಸಸಿ ನೆಡುವ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಶೈಕ್ಷಣಿಕ ವಾರ್ಷಿ ವಿಶೇಷ ಶಿಬಿರ ಕಾರ್ಯಕ್ರಮ ನಡೆಸಲಾಯಿತು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮೈಲಾರಲಿಂಗೇಶ್ವರ ಸ್ನಾತಕ್ಕೋತ್ತರ ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲ ಮಲ್ಲಿಕಾರ್ಜುನ ಕುಲಕರ್ಣಿ ಮಾತನಾಡಿ,ಪ್ರತಿಯೊಬ್ಬರು ಪರಿಸರದ ಬಗ್ಗೆ ಕಾಳಜಿ ವಹಿಸಬೇಕು,ಪರಿಸರ ದಿಂದಲೇ ಮನುಷ್ಯನರ ಉಳಿವಿಗೆ ಕಾರಣ.ಆದ್ದರಿಂದ ಎಲ್ಲರೂ ಪರಿಸರ ರಕ್ಷಣೆಗೆ ಆದ್ಯತೆ ನೀಡಬೇಕು ಎಂದರು.ಅಲ್ಲದೆ ರಾಷ್ಟ್ರೀಯ ಸೇವಾ ಯೋಜನೆ ಎನ್ನುವುದು ಒಂದು ಉತ್ತಮವಾದ ಯೋಜನೆಯಾಗಿದ್ದು ಇದರ ಮೂಲಕ ವಿದ್ಯಾರ್ಥಿಗಳಲ್ಲಿ ಸಮಾಜ ಸೇವಾ ಮನೋಭಾವ ಬೆಳೆಸುವ ಜೊತೆಗೆ ಪರಿಸರ ಸ್ವಚ್ಛತೆ ಮತ್ತು ಪರಿಸರ ಸಂರಕ್ಷಣೆಯೂ ಸಾಧ್ಯವಿದೆ.ಆದ್ದರಿಂದ ನಮ್ಮ ಡಾ:ಬಾಬಾ ಸಾಹೇಬ ಅಂಬೇಡ್ಕರ್ ವಿದ್ಯಾವರ್ಧಕ ಸಂಘದ ಎಲ್ಲಾ ಸಂಸ್ಥೆಗಳು ಪರಿಸರ ರಕ್ಷಣೆಗೆ ತುಂಬಾ ಪ್ರಾಮುಖ್ಯತೆ ನೀಡುತ್ತಿದೆ,ಅದಕ್ಕೆ ಇಂದು ಸಸಿ ನೆಡುವ ಕಾರ್ಯಕ್ರಮವೂ ಅದರ ಒಂದು ಭಾಗವಾಗಿದೆ ಎಂದರು.

Contact Your\'s Advertisement; 9902492681

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ನಾಗಣ್ಣ ಪೂಜಾರಿ,ಉಪನ್ಯಾಸಕರಾದ ಡಾ:ಉಮಾದೇವಿ,ಡಾ:ಈಶ್ವರ ತಳವಾರ,ಚಂದ್ರಶೇಖರ ಡೊಲೆ,ಬಿ.ಎನ್.ದೊಡ್ಡಮನಿ, ಗ್ರಂಥಪಾಲಕ ಬಸವರಾಜ ಮಾಲಿ ಪಾಟೀಲ್ ಸೇರಿದಂತೆ ಕಾಲೇಜಿನ ಎಲ್ಲಾ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here