‘ಬೇಂದ್ರೆ ಶ್ರಾವಣ’ ವಿಶೇಷ ಕಾರ್ಯಕ್ರಮ, ನಾಳೆ

0
68

ಸೇಡಂ: ಮಾನವನನ್ನು ಮಹಾದೇವನನ್ನಾಗಿಸುವ ಆಶಯದಲ್ಲಿ ಶಿವಶರರಣರು ವಚನ ಮಾಧ್ಯಮದ ಮೂಲಕ, ಹರಿದಾಸರು ಕೀರ್ತನೆಗಳ ಮೂಲಕ ಅರಿವು ಮೂಡಿಸಿದರೆ, ಕವಿ-ಲೇಖಕರು ಸಾಹಿತ್ಯದ ಕಥೆ, ಕವನ, ಕೃತಿಗಳ ಮೂಲಕ ಅರಿವು ನೀಡಿರುತ್ತಾರೆ. ಇಂಥ ಅರಿವು ಮತ್ತೇ ಮತ್ತೇ ನೆರವಾಗಲಿ ಎಂಬ ಸದಾಶಯದಿಂದ ಶ್ರಾವಣವು ಸಾಹಿತಿಗಳ ಶಬ್ದ ಶ್ರವಣದಿಂದ ಆಚರಿಸುವ ವಿಚಾರ ಮಂಡಿಸುವ ನಿಟ್ಟಿನಲ್ಲಿ ವಿಶ್ವಜ್ಯೋತಿ ಪ್ರತಿಷ್ಠಾನದ ವತಿಯಿಂದ ನಾಳೆ (ಆ.೨೩) ಶುಕ್ರವಾರದಂದು ಬೆಳಗ್ಗೆ ೧೦.೧೫ ಕ್ಕೆ ಪಟ್ಟಣದ ಜ್ಞಾನಜ್ಯೋತಿ ಕೈಗಾರಿಕೆ ತರಬೇತಿ ಕೇಂದ್ರದ ಪ್ರಾಂಗಣದಲ್ಲಿ ‘ಬೇಂದ್ರೆ ಶ್ರಾವಣ’ ಸಾಹಿತ್ಯ ಮಾಧ್ಯಮದ ಸಾಮಾಜೀಕರಣ ಎಂಬ ವಿಶೇಷ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದು ಪ್ರತಿಷ್ಠಾನದ ಸಂಸ್ಥಾಪಕ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ತಿಳಿಸಿದ್ದಾರೆ.

ಪುರಾತನ ಕಾಲದಿಂದಲೂ ಆತ್ಮೋನ್ನತಿಗಾಗಿ ಅನೇಕರು ಹವಣಿಸಿದ್ದಾರೆ. ಅವರವರ ಕಾಲ, ದೇಶಕ್ಕನುಗುಣವಾಗಿ ಜೀವನೋದ್ಧಾರದ ಸತ್ ಸಂಪ್ರದಾಯಗಳು ಅನುಕರಣೀಯವಾಗಿವೆ. ಈ ನಿಟ್ಟಿನಲ್ಲಿ ಭಾರತದ ನೆಲದಲ್ಲಿಯೂ ಜನಜೀವನ ವಿಕಾಸಕ್ಕಾಗಿ ಅಧ್ಯಯನ, ಪಾರಾಯಣ, ಪುರಾಣ, ಪ್ರವಚನ, ಶ್ರಾವಣದಂಥ ಆಚರಣೆಗಳು ಭಜನೆ-ಕೀರ್ತನೆಗಳು ಹೇಳುವ-ಕೇಳುವವರನ್ನು ಮೇಳೈಸುತ್ತದೆ ಎಂದು ಅವರು ವಿವರಿಸಿದ್ದಾರೆ.

Contact Your\'s Advertisement; 9902492681

ಸೇಡಂ ಉಪ-ವಿಭಾಗದ ಸಹಾಯಕ ಆಯುಕ್ತ ರಮೇಶ ಕೋಲಾರ ಸಮಾರಂಭ ಉದ್ಘಾಟಿಸಲಿದ್ದು, ಶ್ರೀ ವಿಶ್ವಗಂಗಾ ಶಿಕ್ಷಣ ಸಂಸ್ಥೆ ಅಧ್ಯಕ್ಷ ಶಂಕರ ಬಿರಾದಾರ ಮರಗೋಳ ಅಧ್ಯಕ್ಷತೆ ವಹಿಸಲಿದ್ದಾರೆ. ಸಾಹಿತ್ಯ ಪ್ರೇರಕ ಸಿದ್ದಪ್ಪ ತಳ್ಳಳ್ಳಿ, ಶರಣ ಚಿಂತಕ ಕಲ್ಯಾಣಪ್ಪ ಪಾಟೀಲ ಮಳಖೇಡ, ಎಪಿಎಂಸಿ ಅಧ್ಯಕ್ಷ ಸಿದ್ದು ಬಾನರ್ ವಿಶೇಷ ಆಹ್ವಾನಿತರಾಗಿ ಆಗಮಿಸಲಿದ್ದಾರೆ. ಸಾಹಿತಿ-ಪತ್ರಕರ್ತ ಜಗನ್ನಾಥ ಎಲ್.ತರನಳ್ಳಿ ವಿಶೇಷ ಉಪನ್ಯಾಸ ನೀಡಲಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here