ಚಿತ್ತಾಪುರ: ಮತಕ್ಷೇತ್ರದ ಹದನೂರು, ಮಾಡಬೂಳ ತಾಂಡಾ ಹಾಗೂ ದಂಡೋತಿ ಗ್ರಾಮಗಳಲ್ಲಿ ಕೈಗೆತ್ತಿಕೊಳ್ಳಲಾಗಿರುವ ಹಲವಾರು ಕಾಮಗಾರಿಗಳನ್ನು ಶಾಸಕರಾದ ಶ್ರೀ ಪ್ರಿಯಾಂಕ್ ಖರ್ಗೆ ಇಂದು ಉದ್ಘಾಟಿಸಿದರು.
ಈ ಯೋಜನೆಗಳಲ್ಲಿ, ದಂಡೋತಿ ಗ್ರಾಮದಲ್ಲಿ ಹೈಕ ಪ್ರದೇಶ ಅಭಿವೃದ್ಧಿ ಮಂಡಳಿ ವತಿಯಿಂದ ರೂ 39 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ಆರು ಪ್ರಾಥಮಿಕ ಶಾಲೆ ಕೋಣೆಗಳ ಉದ್ಘಾಟನೆ, ಹದನೂರು ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆಯ ವತಿಯಿಂದ ರೂ 35 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗುವ 4 ಪ್ರಾಥಮಿಕ ಶಾಲಾ ಕೋಣೆಗಳ ಕಾಮಗಾರಿಗೆ ಅಡಿಗಲ್ಲು ಮತ್ತು ಮಾಡಬೂಳ ತಾಂಡಾದಲ್ಲಿ ತಾಂಡಾ ಅಭಿವೃದ್ದಿ ನಿಗಮದ ವತಿಯಿಂದ ರೂ 15 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗುವ ಸಿಸಿ ರಸ್ತೆ ಹಾಗೂ ರೂ 5 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗುವ ಸಾಂಸ್ಕೃತಿಕ ಕೇಂದ್ರಕ್ಕೆ ಅಡಿಗಲ್ಲು ಸೇರಿವೆ.
ದಂಡೋತಿ ದೊಡ್ಡ ಗ್ರಾಮವಾಗಿದ್ದು ಕನ್ನಡ ಮತ್ತು ಉರ್ದು ಮಾಧ್ಯಮ ಶಾಲೆ ನಡೆಸಲಾಗುತ್ತಿದೆ.ಆದರೆ, ಈಗಿರುವ ಕೋಣೆಗಳು ವಿದ್ಯಾರ್ಥಿಗಳ ಜನಸಂಖ್ಯೆಗೆ ಅನುಗುಣವಾಗಿಲ್ಲ ಹಾಗಾಗಿ ಹಳೆಯ ಕಟ್ಟಡಗಳನ್ನು ಕೆಡವಿ ಆ ಜಾಗದಲ್ಲಿ ನೂತನ ಸುಸಜ್ಜಿತಶಾಲೆ ಕೋಣೆಗಳನ್ನು ನಿರ್ಮಿಸಬೇಕಾಗಿದೆ. ಯೋಜನೆಗೆ ಶಾಸಕರ ನಿಧಿಯಿಂದ ರೂ 1 ಕೋಟಿ ಒದಗಿಸುವುದಾಗಿ ಅಧಿಕಾರಿಗಳಿಗೆ ಸೂಚಿಸಿದರು. ನಂತರ ಶಾಸಕರ ನೂತನವಾಗಿ ನಿರ್ಮಿಸಲಾದ ಶಾಲಾ ಕಟ್ಟಡಗಳ ಉದ್ಘಾಟನೆ ನೆರವೇರಿಸಿದರು. ನಂತರ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ವತಿಯಿಂದ ಹೈಕ ಪ್ರದೇಶ ಅಭಿವೃದ್ದಿ ಮಂಡಳಿ ಅನುದಾನದಲ್ಲಿ ರೂ 16 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಎರಡು ಶಾಲಾ ಕೊಣೆಗಳ ಕಾಮಗಾರಿಯನ್ನು ಶಾಸಕರು ವೀಕ್ಷಿಸಿದರು.
ಇದಕ್ಕೂ ಮೊದಲು ಹದನೂರು ಹಾಗೂ ಮಾಡಬೂಳ ತಾಂಡದಲ್ಲಿ ಅಭಿವೃಧ್ದಿ ಕಾಮಾರಿಗಳ ಅಡಿಗಲ್ಲು ನೆರವೇರಿಸಿದರು. ಈ ನಡುವೆ ಶಾಸಕರು ದಂಡೋತಿ ಗ್ರಾಮದ ಉರ್ದು ಮಾಧ್ಯಮ ಶಾಲೆಯ ತರಗತಿಯ ಪಾಠ ಆಲಿಸುತ್ತಿದ್ದ ವಿದ್ಯಾರ್ಥಿಗಳೊಂದಿಗೆ ಮಾತನಾಡಿದರು. ಈ ಸಂದರ್ಭದಲ್ಲಿ ಭೀಮಣ್ಣ ಸಾಲಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೇರಿದಂತೆ ಮತ್ತಿತಿದ್ದರು