ಸುರಪುರ: ಪ್ರತಿಯೊಬ್ಬ ಮಗುವಿನಲ್ಲು ಕಲಾ ಕೌಶಲ್ಯವಿರುತ್ತದೆ.ಮಕ್ಕಳಲ್ಲಿರುವ ಪ್ರತಿಭೆ ಪ್ರದರ್ಶನಕ್ಕೆ ಪ್ರತಿಭಾ ಕಾರಂಜಿ ಪೂರಕವಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಅಮರೇಶ ಕುಂಬಾರ ಮಾತನಾಡಿದರು.
ಜಿಲ್ಲಾ ಪಂಚಾಯತಿ ಯಾದಗಿರಿ,ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಕ್ಷೇತ್ರ ಸಮನ್ವಯಾಧಿಕಾರಿಗಳ ಕಚೇರಿ ಸುರಪುರ ಸಹಭಾಗಿತ್ವದಲ್ಲಿ ತಾಲ್ಲೂಕಿನ ಮಾಚಗುಂಡಾಳ ಸರಕಾರಿ ಪ್ರಾಥಮಿಕ ಶಾಲೆ ಆವರಣದಲ್ಲಿ ಹಮ್ಮಿಕೊಂಡಿದ್ದ ದೇವರಗೋನಾಲ ಕ್ಲಷ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ,ವಿದ್ಯಾರ್ಥಿಗಳಲ್ಲಿ ಜಾನಪದ ಸಂಸ್ಕೃತಿಯನ್ನು ಬೆಳೆಸುವ ಅವಶ್ಯವಿದೆ.ಇದರಿಂದ ಮಕ್ಕಳಲ್ಲಿ ಹೆಚ್ಚಿನ ಕಲಾಸಕ್ತಿ ಮೂಡಿಸಲು ಸಾಧ್ಯ ಮತ್ತು ನಮ್ಮ ಜನಪದ ಸಂಸ್ಕೃತಿಯನ್ನು ಉಳಿಸಿ ಬೆಳೆಸಿದಂತಾಗಲಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾಚಗುಂಡಾಳ ಶಾಲೆ ಪ್ರಧಾನ ಗುರು ಶರಣು ಜಾಧವ ಮಾತನಾಡಿ,ಸರಕಾರ ಮಕ್ಕಳಿಗೆ ಕೇವಲ ಪಾಠಕ್ಕೆ ಮಾತ್ರ ಆದ್ಯತೆ ನೀಡದೆ ಅವರಲ್ಲಿನ ಪ್ರತಿಭೆ ಮುಡಿಸಲು ಮತ್ತು ಅದನ್ನು ಪ್ರದರ್ಶಿಸಲು ಅನುಕೂಲವಾಗಿ ಪ್ರತಿಭಾ ಕಾರಂಜಿ ಕಾರ್ಯಕ್ರಮ ನಡೆಸುವ ಮೂಲಕ ಮಕ್ಕಳಲ್ಲಿ ಕಲೆ,ಸಾಹಿತ್ಯ ಮತ್ತು ಸಂಸ್ಕೃತಿಯನ್ನು ತಿಳಿಯುವ ಹಾಗು ಬೆಳೆಸುವ ಆಸಕ್ತಿಯನ್ನು ಮೂಡಿಸಿದಂತಾಗುತ್ತದೆ ಎಂದರು.
ಕಾರ್ಯಕ್ರಮದ ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಅಕ್ಷರ ದಾಸೋಹ ನಿರ್ದೇಶಕ ಮೌನೇಶ ಕಂಬಾರ,ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಹಳ್ಳೆಪ್ಪ ಕಾಂಜಾಂಜಿ,ಬಿಆರ್‌ಪಿ ಖಾದರ್ ಪಟೇಲ್,ಶಂಕರ ಬಡಗ,ಸೋಮರಡ್ಡಿ ಮಂಗಿಹಾಳ,ಶರಣು ಗೋನಾಲ,ಶಿವಕುಮಾರ ಎಪಿಎಫ್, ಶರಣಬಸವ ಗಚ್ಚಿನಮನೆ,ಮರೆಪ್ಪ ನಾಯಕ,ಸುರೇಶ ಶಿರೂರಮಠ್,ಶರಣಗೌಡ ಪಾಟೀಲ,ಮೌನೇಶ ಕಳಸದ,ಪ್ರಕಾಶ ಬಾದ್ಯಾಪುರ,ಶ್ರೀಶೈಲ ಯಂಕಂಚಿ,ಮಲ್ಲು ಬಾದ್ಯಾಪುರ ಇದ್ದರು.
ದೇವರಗೋನಾಲ,ಬಾದ್ಯಾಪುರ,ಮಾಚಗುಂಡಾಳ,ಸಿದ್ದಾಪುರ,ಚಿಗರಿಹಾಳ ಸೇರಿದಂತೆ ಅನೇಕ ಶಾಲಾ ಮಕ್ಕಳಿಂದ ಹಾಡು,ನೃತ್ಯ ಮತ್ತಿತರೆ ಕಲಾ ಪ್ರತಿಭೆ ಪ್ರದರ್ಶನ ನಡೆಯಿತು.