ಕಲಬುರಗಿ: ಸಿಂದಗೀಯ ಮೂರು ಝಾವದ ಮಠದ ಪೂಜ್ಯ ಶ್ರೀ ರಾಮಚಂದ್ರ ಮಹಾಸ್ವಾಮಿಗಳ ಪಾದಪೂಜೆ ಕಾರ್ಯಕ್ರಮವು ದೇವೇಂದ್ರ ದೇಸಾಯಿ ಕಲ್ಲೂರ ಅವರು ತಮ್ಮ ಮನೆಯಲ್ಲಿ ನೆರವೇರಿಸಿದರು.
ಈ ಸಂದರ್ಭದಲ್ಲಿ ವಿಶ್ವಕರ್ಮ ಸಮಾಜದ ಮುಖಂಡರು ಮಹಿಳೆಯರು ಮತ್ತು ಬಡಾವಣೆಯ ಭಕ್ತರು ಶ್ರೀಗಳ ದರ್ಶನ ಪಡೆದುಕೊಂಡರು.
ಪಾದಪೂಜೆಯ ನಂತರ ಆಶೀರ್ವಚನ ನೀಡಿದ ಪೂಜ್ಯ ರಾಮಚಂದ್ರ ಮಹಾಸ್ವಾಮಿಗಳು ಸದ್ಭಕ್ತರೆಲ್ಲ ಜೀವನ ಸುಖ ಮಯವಾಗಿರಲಿ ಎಂದು ತಮ್ಮ ಆಶೀರ್ವಚನದಲ್ಲಿ ಆಶೀರ್ವದಿಸಿದರು.
ಕಾರ್ಯಕ್ರಮದಲ್ಲಿ ವಿಶ್ವಕರ್ಮ ಸಮಾಜದ ಮುಖಂಡರಾದ ಜಗನ್ನಾಥ ಮಾಸ್ಟರ್ ಪೆÇೀದ್ದಾರ, ಗುರು ಕೌಲಗಿ, ಮಲ್ಲಿಕಾರ್ಜುನ ಬೆಣ್ಣೆಶಿರೂರ, ಲೋಕೇಶ ಶೀಲವಂತ, ನಾಗರಾಜ ವಸ್ತಾರಿ, ರಾಕೇಶ ಮಾಡಿಯಾಳ, ಬಸವರಾಜ ಮಿಣಜಗಿ, ಬಸವರಾಜ ಮಾಡಗಿ, ಮೋನಪ್ಪ ಅಫಜಲಪುರ, ಶ್ರೀನಾಥ ಪಂಚಕಟ್ಟಿ, ಶರಣು ಜೇರಟಗಿ, ಶರಣು ಕಾರಪೆಂಟರ್ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.