ಕಲಬುರಗಿ: ಶ್ರಾವಣ ಮಾಸದ ನಿಮಿತ್ತ ಜಯನಗರ ಶಿವಮಂದಿರದಲ್ಲಿ ಜರುಗಿದ ಒಂದು ತಿಂಗಳ ಶಿವ ಧರ್ಮ” ಆಧ್ಯಾತ್ಮಿಕ ಪ್ರವಚನದ ಮಂಗಲೋತ್ಸವ ಹಾಗೂ ಪಲ್ಲಕ್ಕಿ ಮೆರವಣಿಗೆ ಕಾರ್ಯಕ್ರಮವು ಸೆ.16 ರಂದು ಶನಿವಾರ ಬೆಳಿಗ್ಗೆ 11 ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು ಜಯನಗರ ಶಿವಮಂದಿರ ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಲಿಂಗರಾಜ ಸಿರಗಾಪೂರ ತಿಳಿಸಿದರು.
ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಕಳೆದ ತಿಂಗಳ 29 ರಂದು ಪ್ರಾರಂಭವಾಗಿರುವ ಶರಣರ ಧರ್ಮ ಆಧ್ಯಾತ್ಮಿಕ ಪ್ರವಚನ ಯಶಸ್ವಿಯಾಗಿ ಜಯನಗರದ ಶಿವಮಂದಿರದಲ್ಲಿ ಪ್ರತಿ ದಿನ 7 ರಿಂದ 8 ಗಂಟೆವರೆಗೆ ನಡೆದು ನಂತರ ಹೆಸರಾಂತ
ವಿವಿಧ ಕ್ಷೇತ್ರಗಳ ಪರಿಣೀತರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ತಮ್ಮ ಅನುಭವಗಳನ್ನು ಹಂಚಿಕೊಂಡರು.ಸಾಳಹಿತಿಗಳಾದ ಎ.ಕೆ.ರಾಮೇಶ್ವರ,ಡಾ.ಚಿ.ಸಿ.ನಿಂಗಣ್ಣ,ಕಸಾಪ ನಿಕಟಪೂರ್ವ ಜಿಲ್ಲಾಧ್ಯಕ್ಷ ವೀರಭದ್ರ ಸಿಂಪಿ,ಡಾ.ಬಸವರಾಜ ಕುಮ್ನೂರ, ಸಿ.ಎಸ್.ಮಾಲಿಪಾಟೀಲ,ಜಿ.ಜಿ.ವಣಿಕ್ಯಾಳ,ಡಾ.ಆನಂದ ಸಿದ್ದಾಮಣಿ,ಡಾ.,ಪತ್ರಕರ್ತರಾದ ಸುಭಾಷ ಬಣಗಾರ, ಪ್ರಭುಲಿಂಗ ನೀಲೂರೆ, ಹಿರಿಯ ಹೋರಾಟಗಾರರಾದ ಶರಣ ಚಿಂತಕ ಲಕ್ಷ್ಮಣ ದಸ್ತಿ,ಮಾಜಿ ಜಿಡಿಎ ಅಧ್ಯಕ್ಷರಾದ ಶಾಮರಾವ ಪ್ಯಾಟಿ,ಆಹಾರ ಹಾಗೂ ಆರೋಗ್ಯ ತಜ್ಞ ರಮೇಶ ಮಹೀಂದ್ರಕರ್,ಹಾಸ್ಯ ಕಲಾವಿದ ಗುಂಡಣ್ಣ ಡಿಗ್ಗಿ ಹಾಗೂ ಹೀಗೆ ಹಲವಾರು ಗಣ್ಯರು ಭಾಗವಹಿಸಿದ್ದು ವಿನೂತನ ಮಾದರಿಯಾಗಿದೆ.ಶರಣ ಶ್ರೀ ಶಿವಶಂಕರ ಬಿರಾದಾರ ಅವರು ಪ್ರವಚನ ನಡೆಸಿಕೊಟ್ಟರು.ದಿನ ನಿತ್ಯ ಬೆರೆ ಬೆರೆ ಬಡಾವಣೆಗಳ ಭಕ್ತರು, ಸಾರ್ವಜನಿಕರು, ಮಹಿಳೆಯರು ನೂರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು.ಅದರಂತೆ ದಿನಾಲೂ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು ಎಂದರು.
ಮಂಗಲೋತ್ಸವ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಲು ಮುಗಳನಾಗಾಂವ ಕಟ್ಟಿಮನಿ ಸಂಸ್ಥಾನ ಹಿರೇಮಠದ ಪರಮ ಪೂಜ್ಯ ಶ್ರೀ ಅಭಿನವ ಸಿದ್ಧಲಿಂಗ ಶಿವಾಚಾರ್ಯರು ಮತ್ತು ಶ್ರೀನಿವಾಸ ಸರಡಗಿಯ ಹಿರೇಮಠದ ಪೂಜ್ಯ ಷ.ಬ್ರ ಶ್ರೀ ರೇವಣಸಿದ್ಧ ಶಿವಾಚಾರ್ಯರು ಆಗಮಿಸುವರು.ಪ್ರವಚನಕಾರ ಶರಣ ಶ್ರೀ ಶಿವಶಂಕರ ಬಿರಾದಾರ ಅವರು ಉಪಸ್ಥಿತರಿರುವರು.ಮುಖ್ಯ ಅತಿಥಿಗಳಾಗಿ ಸಂಸದ ಡಾ .ಉಮೇಶ ಜಾಧವ,ಶಾಸಕ ಹಾಗೂ ಕೆಕೆಆರ್ ಡಿಬಿ ಅಧ್ಯಕ್ಷ ಡಾ .ಅಜಯ ಸಿಂಗ್, ಶಾಸಕರಾದ ಅಲ್ಲಮಪ್ರಭು ಪಾಟೀಲ್, ಬಸವರಾಜ ಮತ್ತಿಮೂಡ,ಬಿ.ಆರ್ ಪಾಟೀಲ ,ವಿಧಾನ ಪರಿಷತ್ ಸದಸ್ಯರಾದ ಶಶೀಲ್ ನಮೋಶಿ,ಬಿ.ಜಿ.ಪಾಟೀಲ,ತಿಪ್ಪಣಪ್ಪ ಕಮಕನೂರ,ಮಾಜಿ ಕೆಕೆಆರ್ ಡಿ ಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ, ಅತಿಥಿಗಳಾಗಿ ಮಾಜಿ ವಿಧಾನ ಪರಿಷತ್ ಸದಸ್ಯ ಅಮರನಾಥ ಪಾಟೀಲ, ಮಹಾನಗರ ಪಾಲಿಕೆ ಸದಸ್ಯ ವೀರಣ್ಣ ಹೊನ್ನಳ್ಳಿ, ಹಿರಿಯ ಹೋರಾಟಗಾರ ಲಕ್ಷ್ಮಣ ದಸ್ತಿ,ಮಾಜಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಸುಭಾಷ ರಾಠೋಡ, ಉದ್ಯಮಿ, ಯುವ ಮುಖಂಡ ಸಂತೋಷ ಬಿಲಗುಂದಿ ಆಗಮಿಸಲಿದ್ದಾರೆ.ಕಾರ್ಯಕ್ರಮದ ಅಧ್ಯಕ್ಷತೆ ಟ್ರಸ್ಟ್ ಅಧ್ಯಕ್ಷ ಲಿಂಗರಾಜ ಸಿರಗಾಪೂರ ವಹಿಸುವರು.
ಟ್ರಸ್ಟಿನ ಎಲ್ಲಾ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿರುವರು.ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಪತ್ರಕರ್ತರಾದ ಶ್ರೀನಿವಾಸ ಸಿರನೂರಕರ, ಬಾಬುರಾವ್ ಯಡ್ರಾಮಿ,ಶೇಷಮೂರ್ತಿ ಅವಧಾನಿ, ಪ್ರಭುಲಿಂಗ ನಿಲೂರೆ, ಸೂರ್ಯಕಾಂತ ಜಮಾದಾರ,ಚಿಂಕರಾದ ಡಾ.ಬಸವರಾಜ ಕುಮ್ನೂರ, ಸಂಗೀತಾ ಕಟ್ಟಿ,ಪತ್ರಿಕಾ ಛಾಯಾಗ್ರಾಹಕರಾದ ಅರುಣ ಕುಲಕರ್ಣಿ , ರಾಜಕುಮಾರ ಉದನೂರ,ಶರಣು ಬೆಣ್ಣೂರು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಗುತ್ತದೆ. ಶ್ರಾವಣ ಮಾಸದ ಅಂಗವಾಗಿ ಟ್ರಸ್ಟ್ ವತಿಯಿಂದ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಗುವುದು.ವಿವಿಧ ಸಿ.ಎಸ್.ಮಾಲಿಪಾಟೀಲ ಹಾಗೂ ಕಿರಣ ಪಾಟೀಲ ಅವರಿಂದ ಭಕ್ತಿ ಹಾಗೂ ಭಾವಗೀತೆಗಳ ಸಂಗೀತ ಕಾರ್ಯಕ್ರಮ ನಡೆಯುವುದು.
ಅಂದು ಜಯನಗರ ಸೇರಿದಂತೆ ಬೆರೆ ಬೆರೆ ಬಡಾವಣೆಯ ಹಿರಿಯರು, ಮಹಿಳೆಯರು, ಹಾಗೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದ್ದಾರೆ.
ಪತ್ರಿಕಾ ಗೋಷ್ಠಿಯಲ್ಲಿ ಟ್ರಸ್ಟ್ ಉಪಾಧ್ಯಕ್ಷ ವಿರೇಶ ದಂಡೋತಿ, ಪ್ರಧಾನ ಕಾರ್ಯದರ್ಶಿ ಸೂರ್ಯಕಾಂತ ಕೆ.ಬಿ, ಸಂಘಟನಾ ಕಾರ್ಯದರ್ಶಿ ಬಂಡಪ್ಪ ಕೇಸೂರ, ಸಹ ಕಾರ್ಯದರ್ಶಿ ಸಿದ್ಧಲಿಂಗ ಗುಬ್ಬಿ, ಸದಸ್ಯರಾದ ಬಸವರಾಜ ಖೂಬಾ ಉಪಸ್ಥಿತರಿದ್ದರು.