ಶಹಾಬಾದ: ನಗರದ ಪ್ರಜ್ಞಾ ನವೋದಯ ಕೋಚಿಂಗ್ ಸೆಂಟರ್‍ನ ವಿದ್ಯಾರ್ಥಿಗಳಿಂದ ಶಿಕ್ಷಕರ ದಿನಾಚರಣೆ ಆಚರಿಸಲಾಯಿತು.
ಮುಖ್ಯ ಅತಿಥಿಗಳಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶರಣಬಸಪ್ಪ ಕೋಬಾಳ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಕರನ್ನು ಗೌರವಿಸಬೇಕು. ಅವರ ಮಾರ್ಗದರ್ಶನದಲ್ಲಿ ನಡೆದರೆ ಜೀವನದಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯ ಎಂದರು. ವಿದ್ಯಾರ್ಥಿಗಳಲ್ಲಿ ಶಿಸ್ತು ಮುಖ್ಯ ಎಂದು ಕಿವಿಮಾತು ಹೇಳಿದರು.
ತರಬೇತಿ ಕೇಂದ್ರದ ಅಧ್ಯಕ್ಷರಾದ ಪಿಎಸ್ ಮೇತ್ರಿ ಮಾತನಾಡಿ, ಶಿಕ್ಷಕರು ತ್ಯಾಗಮಯ ಜೀವನ ನಡೆಸಿದಾಗ ಮಾತ್ರ ಮಕ್ಕಳು ಶ್ರೇಷ್ಠ ವ್ಯಕ್ತಿಗಳಾಗುತ್ತಾರೆ.ಅಂಥಹ ಶ್ರೇಷ್ಠ ಗುಣಗಳನ್ನು ಡಾ.ರಾಧಾಕೃಷ್ಣನ್ ಅವರು ಶಿಕ್ಷಕರಲ್ಲಿ ಕಂಡಿದ್ದರು.ಅದಕ್ಕಾಗಿ ನನ್ನ ದಿನಾಚರಣೆಯನ್ನು ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸಿ ಎನ್ನುವ ಮೂಲಕ ಶಿಕ್ಷಕ ವೃತ್ತಿಗೆ ಬಹು ದೊಡ್ಡ ಗೌರವ ತಂದು ಕೊಟ್ಟರು ಎಂದು ಹೇಳಿದರು.
ಶಿಕ್ಷಕಿ ಸುರೇಖಾ ಮೇತ್ರಿ ಮಾತನಾಡಿ, ವಿದ್ಯಾರ್ಥಿಗಳು ಓದು- ಬರಹ ಜೊತೆಗೆ ಉತ್ತಮ ಮೌಲ್ಯಗಳು, ಅಳವಡಿಸಿಕೊಂಡು ಮುಂದೆ ಸಾಗಬೇಕು.ಅಲ್ಲದೇ ಕಲಿಸಿದ ಶಿಕ್ಷಕರ ಮುಂದೆ ವಿದ್ಯಾರ್ಥಿಗಳು ಎತ್ತರಕ್ಕೆ ಬೆಳೆದಾಗ ಮಾತ್ರ ಶಿಕ್ಷಕರಿಗೆ ಎಲ್ಲಿಲ್ಲದ ಸಂತೋಷ ಭಾವ ಹಾಗೂ ಸಾರ್ಥಕ ಭಾವನೆ ಮೂಡುತ್ತದೆ.ಆದ್ದರಿಂದ ಮಕ್ಕಳು ಹೆಚ್ಚಿನ ಅಭ್ಯಾಸ ಮಾಡಿ ಉತ್ತಮ ಪ್ರಜೆಗಳಾಗಿ ಎಂದರು.
ಈ ಸಂದರ್ಭದಲ್ಲಿ ಕೋಚಿಂಗ್ ಸೆಂಟರ್‍ನ ವಿದ್ಯಾರ್ಥಿಗಳು ಇದ್ದರು.