ಕಲಬುರಗಿ: ಸಂವಿಧಾನದ ಅರಿವು ಎಲ್ಲರಿಗೂ ಅಗತ್ಯವಾಗಿದೆ ಪ್ರತಿಯೊಬ್ಬರಿಗೂ ಸಮಾನತೆ ಸೌಹಾರ್ದತೆ, ಭಾತೃತ್ವ ಶಾಂತಿ ನೆಮ್ಮದಿ ದೊರಕಲು ಸಂವಿಧಾನ ನೀಡಿರುವ ಅವಕಾಶಗಳ ಕಾರಣವಾಗಿವೆ ಎಂದು ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕರಾದ ಅಲ್ಲಮ ಪ್ರಭು ಪಾಟೀಲ ಹೇಳಿದರು.
ಶುಕ್ರವಾರದಂದು ನೂತನ ವಿದ್ಯಾಲಯದ ಆಯೋಜಿಸಿದ ಜಿಲ್ಲಾಡಳಿತ, ಜಿಪಂ, ಸಮಾಜ ಕಲ್ಯಾಣ ಇಲಾಖೆ, ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ, ಭಾರತ ಸಂವಿಧಾನ ಪೀಠಿಕೆಯ ಜಾಗತಿಕ ವಾಚನ ಸರ್ವ ಜನರ ಏಕ ಧ್ವನಿ ಸಮಾನತೆಗಾಗಿ ಪ್ರಜಾಪ್ರಭುತ್ವ ಸಂವಿಧಾನ ಪೀಠಿಕೆ ವಾಚನ ಕಾರ್ಯಕ್ರಮವನ್ನು ಸಸಿಗೆ ನೀರೆರೆಯುವ ಮೂಲಕ ಉದ್ಫಾಟಿಸಿ ಮಾತನಾಡಿದರು.
ಡಾ. ಬಿ.ಆರ್. ಅಂಬೇಡ್ಕರ್ ಅವರು ಮೂಢನಂಬಿಕೆ, ಅಸ್ಪೃಶ್ಯತೆಶತೆಯನ್ನು ಹೋಗಲಾಡಿಸಿದ್ದಾರೆ. ಸಂವಿಧಾನ ರಚನೆ ಮಾಡಿ, ಎಲ್ಲರೂ ಸಮಾನರು ಎಂದು ತಿಳಿಸಿಕೊಟ್ಟಿದಾರೆಂದರು.
ಮಕ್ಕಳಿಗೆ ಒಳ್ಳೆಯ ಶಿಕ್ಷಣವನ್ನು ಪಡೆದುಕೊಂಡು ಸಂವಿಧಾನ ಕಾಪಾಡಿಕೊಂಡು ಹೋಗಬೇಕು. ಸಂವಿಧಾನದಿಂದಾಗಿಯೇ ಜನರು ಇಂದು ಹಲವು ಹಂತಗಳಲ್ಲಿ ಅಧಿಕಾರದ ಎಲ್ಲಾ ಕಡೆ ತಮ್ಮ ಪಾತ್ರ ನಿಭಾಯಿಸುವಂತಾಗಿದೆ. ಇದಕ್ಕೆ ಡಾ. ಅಂಬೇಡ್ಕರ್ ಅವರ ಮಹೊನ್ನತ ಚಿಂತನೆಯೇ ಕಾರಣವೆಂದರು.
ಇದಕ್ಕೂ ಮುನ್ನ ಎಲ್ಲಾ ಗಣ್ಯ ವ್ಯಕ್ತಿಗಳು ಡಾ.ಬಿ.ಆರ್. ಅಂಬೇಡ್ಕರ ಇವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಪಿ ಶುಭ ಅವರು ಮಾತನಾಡಿ, ಸಂವಿಧಾನ ಪೀಠಿಕೆ ಪ್ರಜಾಪ್ರಭುತ್ವ ಅನುವುದು ಹೊಸ ಪೀಳಿಗೆ ಅರ್ಥವಾಗಬೇಕೆಂದರು. ಜಿಲ್ಲೆಯಾದ್ಯಂತ ಹೆಸರುಗಳನ್ನು ಆನ್ ಲೈನ್ ಮೂಲಕ 7 ಲಕ್ಷ 36 ಸಾವಿರ ನೋಂದಾಯಿಸಿದ್ದು ತುಂಬ ಸಂತೋಷ ಎಂದರು.
ಮಳಖೇಡ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಸಹ ಶಿಕ್ಷಕ ಲೋಹಿತ ಪೂಜಾರಿ ಸಂವಿಧಾನ ಪೀಠಿಕೆ ಬಗ್ಗೆ ಕಿರು ಪರಿಚಯಸಿದರು. ಪಪೂ ಶಿಕ್ಷಣ ಇಲಾಖೆಯ ಕಾಲೇಜಿನ ಉಪನಿರ್ದೇಶಕರಾದ ಶಿವಶರಣಪ್ಪ ಮೂಳೆಗಾಂವ ಭಾರತ ಸಂವಿಧಾನ ಪ್ರಸ್ತಾವನೆ ಅಧಿಕಾರಿಗಳಿಗೆ ಮಕ್ಕಳಿಗೆ ಓದಿಸಿದರು.
ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಸಕ್ರೆಪ್ಪ ಗೌಡ ಬಿರಾದಾರ ಸ್ವಾಗತಿಸಿದರು. ಕಲಬುರಗಿ ಗ್ರಾಮೀಣ ವಿಧಾನ ಸಭೆಯ ಶಾಸಕರಾದ ಬಸವರಾಜ ಮತ್ತಿಮಡು, ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್, ಜಿಪಂ ಸಿಇಓ ಭಂವರ ಸಿಂಗ್ ಮೀನ್, ಶಾಲಾ ಶಿಕ್ಷಣ ಇಲಾಖೆಯ ಅಪರ ಆಯುಕ್ತರಾದ ಡಾ. ಆಕಾಶ ಎಸ್, ಮಹಾನಗರ ಪಾಲಿಕೆ ಪಾಟೀಲ ಭುವನೇಶ್ ದೇವಿದಾಸ, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಸಹಾಯಕ ಆಯುಕ್ತೆ ಮಮತಾ ಕುಮಾರಿ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಸಾವಿರಾರು ಸರ್ಕಾರಿ ಶಾಲೆ ವಸತಿ ನಿಲಯದ ಮಕ್ಕಳು ಹಾಗೂ ನಗರದ ವಿವಿಧ ಶಾಲಾ ಕಾಲೇಜಿನ ಮಕ್ಕಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.