ಉಚಿತ ಆರೋಗ್ಯ ತಪಾಸಣಾ ಶಿಬಿರ

0
88

ಕಲಬುರಗಿ: ನಗರದ ಆಳಂದ ರಸ್ತೆಯಲ್ಲಿರುವ ಕಾರ್ಮಿಕರ ಭವಿಷ್ಯ ನಿಧಿ ಪ್ರಾದೇಶಿಕ ಕಛೇರಿಯ ಎಲ್ಲಾ ನೌಕರರಿಗೆ ಕಿವಿ, ಮೂಗು ಮತ್ತು ಗಂಟಲು ಹಾಗೂ ಸಾಮಾನ್ಯ ಆರೋಗ್ಯ ತಪಾಸಣಾ ಶಿಬಿರವನ್ನು ಮನೂರ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ವತಿಯಿಂದ ಆಯೋಜಿಸಲಾಯಿತು.

ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದ ಡಾ. ದಿನೇಶ್ ವಾಲ್ಸೆ ರೋಗಗಳು ಬರುವ ಮನ್ನ ಎಚ್ಚರ ವಹಿಸಿದರೆ ಆಸ್ಪತ್ರೆ ‌ಮತ್ತು ಮಾತ್ರೆಗಳಿಂದ ದೂರವಿರಬಹುದು ಎಂದರು. ಈ ಸಂದರ್ಭದಲ್ಲಿ ಡಾ. ಮುಸ್ತಾಕ್ ಸೌಧಾಗರ‌ ಹಾಗೂ ಆಸ್ಪತ್ರೆಯ ಸಿಬ್ಬಂದಿಗಳು ಹಾಜರಿದ್ದರು.

Contact Your\'s Advertisement; 9902492681

ಶಿಬಿರದಲ್ಲಿ ಕ್ಷೇತ್ರಿಯ ಆಯುಕ್ತ ರವಿ ಯಾದವ, ಭವಿಷ್ಯ ನಿಧಿ ನೌಕರರ ಮನೋರಂಜನ ಸಂಘದ ಕಾರ್ಯದರ್ಶಿ ಬಸವರಾಜ ಹೆಳವರ, ಶಿವರಾಜ, ಜಿ.ಎಂ ಅಪ್ಸರ್, ವಿಠ್ಠಲ, ಮಾರು ಅಖೀಲ್, ಮದನ್ ಕುಲಕರ್ಣಿ, ಕಲ್ಪನಾ ಮಧಬಾವಿ, ಪ್ರಶಾಂತ ಇಂಗಳೇಶ್ವರ, ಕೇಶವರಾವ್, ಅರುಣಕುಮಾರ, ಶಿವಶರಣಪ್ಪ‌ ಶಿವಕೇರಿ ಹಾಗೂ ಇನ್ನಿತರ ಸಿಬ್ಬಂದಿಗಳು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here