ಕಲಬುರಗಿ; ನಗರದ ಮಾಹಾನಗರ ಪಾಲಿಕೆಯ ಪೌರ ಕಾರ್ಮಿಕರಿಗೆ ಮತ್ತು ಸಫಾಯಿ ಕರ್ಮಚಾರಿಗಳಿಗೆ ಖಾಯಂ ಮಾಡಬೇಕೆಂದು ಕರ್ನಾಟಕ ಜನ ಸೇವಾ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ವಿಜಯಕುಮಾರ ಬಿ. ಚಿಂಚನಸುರಕ್ ಅವರು ಸಿಎಂ ಅವರಿಗೆ ಮನವಿ ಸಲ್ಲಿಸಿದರು.
ಮಹಾನಗರ ಪಾಲಿಕೆಯಲ್ಲಿ ಪೌರ ಕಾರ್ಮಿಕರು ಮತ್ತು ಸಫಾಯಿ ಕರ್ಮಚಾರಿಗಳಿಗೆ ಸುಮಾರು 25ವರ್ಷಗಳಿಂದ ರೂ 300 ವೇತನದಿಂದ ಪ್ರಾರಂಭ ಮಾಡಿದ ಈ ಕೇಲವನ್ನು ಇವರು ಇಲ್ಲಿಯವರೆಗೆ ಚಾಚು ತಪ್ಪದೆ ಮಾಡುತ್ತಾ ಬರುತ್ತಿದ್ದಾರೆ.
ಸದರಿಯವರು ಬೆಳ್ಳಗೆ 4:00ಗಂಟೆಗೆ ಎದ್ದು ಸಾಯಿಂಕಾಲ 4:00ಗಂಟೆಯವರೆಗೆ ಇಡಿ ಕಲಬುರಗಿ ನಗರ ಸ್ವಚ್ಚತೆ ಮಾಡುವಲ್ಲಿ ನಿರತರಾಗಿರುತ್ತಾರೆ. ಆದರೆ ಸುಮಾರು 25ವರ್ಷಗಳು ಕಳೆದರು ಇನ್ನುವರೆಗೆ ಇವರಿಗೆ ಖಾಯಂ ಆಗಿರುವುದಿಲ್ಲ.
ಸದರಿಯವರಿಗೆ ಯಾವುದೇ ರೀತಿಯಾಗಿ ಖಾಯಂ ನೇಮಕಾತಿಯಾಗಿರುವುದಿಲ್ಲ. ಈ ಪೌರ ಕಾರ್ಮಿಕರಿಗೆ ಮತ್ತು ಸಫಾಯಿ ಕರ್ಮಚಾರಿಗಳಿಗೆ ಖಾಯಂ ಮಾಡಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ. ಜಿಲ್ಲಾಧ್ಯಕ್ಷ ಸುರೇಶ ಕಲ್ಲಶೆಟ್ಟಿ, ಕರ್ನಾಟಕ ಸಂಘಟನಾ ಕಾರ್ಯದರ್ಶಿ ಶೇಖರ್ ಸಿಂಗ್, ಜಿಲ್ಲಾ ಕಾರ್ಯದರ್ಶಿ ನಾಡಗೌಡ ಬಿರಾದಾರ ಇದ್ದರು.