ಕಲಬುರಗಿ: ಪ್ರಜ್ಞಾ ಕಾನೂನು ಸಲಹಾ ಸಮಿತಿ ಮತ್ತು ಶ್ರೀ ಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯ, ಜಂಟಿಯಾಗಿ ಮಹಿಳಾ ದೌರ್ಜನ್ಯ ತಡೆಗಾಗಿ ಜಿಲ್ಲೆಯಾದ್ಯಂತ ಅರಿವಿನ ಆಂದೋಲನ ನಡೆಸಲು ಸಂಪನ್ಮೂಲ ವ್ಯಕ್ತಿಗಳನ್ನು ಸಿದ್ಧಪಡಿಸುವ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು.
ಪ್ರಾಸ್ತಾವಿಕ ಮತ್ತು ಸ್ವಾಗತ ಮಾತುಗಳನ್ನಾಡಿದ ಜನವಾದಿ ಮಹಿಳಾ ಸಂಘಟನೆ ಯ ಅಧ್ಯಕ್ಷರಾದ ಡಾ ಮೀನಾಕ್ಷಿ ಬಾಳಿಯವರು ಕಲಬುರಗಿ ಜಿಲ್ಲೆಯಲ್ಲಿ ಇತ್ತೀಚೆಗೆ ಅಪ್ರಾಪ್ತ ವಯಸ್ಸಿನ ಮಕ್ಕಳ ಮೇಲೆ ಅತ್ಯಾಚಾರ ಹೆಚ್ಚುತ್ತಿರುವುದು ಚಿಂತಾಜನಕವಾಗಿದೆ ಎಂದರು. ಅತ್ಯಾಚಾರ ಗಳು ಜರುಗಿದ ನಂತರ ನಡೆಸುವ ಪ್ರತಿಭಟನೆಕ್ಕಿಂತ ಅವುಗಳು ಘಟಿಸದಂತೆ ಕಾವಲು ಕಾಯುವುದು, ಎಲ್ಲ ಬಗೆಯ ದೌರ್ಜನ್ಯ ಗಳು ನಿರ್ನಾಮವಾಗುವಂತೆ ನೋಡಿಕೊಳ್ಳುವುದೇ ನಮ್ಮ ಗುರಿ. ಅಸಲಿಗೆ ಇಂಥ ಘಟನೆಗಳಿಗೆ ಕಾರಣವಾಗಿರುವ ಲಿಂಗ ಅಸಮಾನತೆಯನ್ನು ಹೋಗಲಾಡಿಸಬೇಕು. ಅದಕ್ಕಾಗಿ ನಾವು ಸಮಾಜದ ಎಲ್ಲ ವಿಭಾಗಗಳಿಗೆ ಲಿಂಗ ಸಂವೇದನಾಶೀಲ ತರಬೇತಿ ನೀಡಬೇಕು. ತರಬೇತಿ ನೀಡುವ ಮಾಸ್ಟರ್ ಗಳನ್ನು ತಯಾರು ಮಾಡಲೆಂದೆ ಈ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಸಸಿಗೆ ನೀರು ಎರೆಯುವ ಮೂಲಕ ಕಾರ್ಯಾಗಾರವನ್ನು ಉದ್ಘಾಟಿಸಿದ ಬೀ ಬೀ ರಜಾ ಮಹಿಳಾ ಪದವಿ ಕಾಲೇಜಿನ ಪ್ರಾಚಾರ್ಯರಾದ ಡಾ ಜೇಬಾ ಪರವೀನ್ ಅವರು ದೇಶದಲ್ಲಿ ಹೆಚ್ಚುತ್ತಿರುವ ಈ ದೌರ್ಜನ್ಯ ಗಳು ನಿಜವಾಗಿಯೂ ನಾಗರೀಕರು ತಲೆ ತಗ್ಗಿಸುವಂತೆ ಆಗಿದೆ. ನಾವು ಯಾವತ್ತೂ ಅರಿವಿನ ಆಂದೋಲನ ಮೂಡಿಸುವಲ್ಲಿ ಸಿದ್ಧರಾಗಿರಬೇಕು. ಪ್ರಜ್ಞಾ ವಂತರಾದ ನಮ್ಮೆಲ್ಲರ ಮೇಲೆ ಜವಾಬ್ದಾರಿ ಇದೆ ಎಂದರು.
ನಂತರ ಅತಿಥಿಗಳಾಗಿದ್ದ. ಡಾ ರಾಜೇಂದ್ರ ಕೊಂಡಾ ಅವರು ದೇಶದಲ್ಲಿ ಸಂಭವಿಸುತ್ತಿರುವ ಅತ್ಯಾಚಾರ,ದೌರ್ಜನ್ಯ ಗಳ ಅಂಕಿ ಸಂಖ್ಯೆ ಗಳನ್ನು ವಿವರಿಸಿದರು. ಪ್ರತಿ ಹತ್ತು ರೇಪ್ ಗಳಲ್ಲಿ 6 ರೇಪ್ ಗಳು ಅಪ್ರಾಪ್ತ ಮಕ್ಕಳ ಮೇಲೆ ಘಟಿಸುತ್ತಿವೆ. ಆದರೆ ನಮ್ಮ ಕಾನೂನು ವಯಸ್ಕರ ಮೇಲಿನ ಅತ್ಯಾಚಾರ ಮತ್ತು ಅಪ್ರಾಪ್ತ ವಯಸ್ಕ ರ ಮೇಲಿನ ಅತ್ಯಾಚಾರ ಗಳ ನಡುವೆ ವ್ಯತ್ಯಾಸ ಮಾಡುವುದಿಲ್ಲ. ಇದನ್ನು ಕುರಿತು ಚರ್ಚೆ ಸುರು ಆಗಬೇಕಿದೆ ಎಂದು ವಿವರಿಸಿದರು.
ಇನ್ನೋರ್ವ ಅತಿಥಿಗಳಾಗಿದ್ದ ನಿವೃತ್ತ ಪ್ರಾಧ್ಯಾಪಕ ರಾದ ಡಾ ಶಕುಂತಲಾ ದುರಗಿಯವರು ಸ್ತ್ರೀಯರು ಇಂದು ಹೊರಗೆ ಬಂದು ದುಡಿಯುವುದು ಅನಿವಾರ್ಯವಾಗಿ ದೆ. ಹೀಗಾಗಿ ಮನೆಯ ಒಳಗೂ ಹೊರಗೂ ರಕ್ಷಣೆ ನೀಡಬೇಕಾದುದು ನಮ್ಮೆಲ್ಲರ ಹೊಣೆ ಎಂದರು. ಅರಿವಿನ ಆಂದೋಲನ ಒಂದೇ ಇದಕ್ಕೆ ಶಾಶ್ವತ ಪರಿಹಾರವಾಗಬಲ್ಲದು ಎಂದರು.
ನಂತರ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ವಾಣಿ ಪೆರಿಯೋಡಿಯವರು ಹತ್ತಾರು ಚಟುವಟಿಕೆಗಳ ಮೂಲಕ,ಹಾಡು, ನೃತ್ಯ, ಮಾತುಕತೆಗಳೊಂದಿಗೆ ವಿಷಯ ಮಂಡಿಸಿದರು. ಅವರು ಮತ್ತೂ ಮುಂದುವರೆದು ನಾವು ಪ್ರಾಥಮಿಕ ಹಂತದ ಮಕ್ಕಳೊಂದಿಗೆ, ಹೈಸ್ಕೂಲ್ ಮಕ್ಕಳು, ಕಾಲೇಜು ಮಕ್ಕಳೊಂದಿಗೆ ಹೇಗೆ ಭಿನ್ನ ಭಿನ್ನವಾಗಿ ಮಾತಾಡಬೇಕು ಎಂಬುದನ್ನು ತುಂಬಾ ಪರಿಣಾಮಕಾರಿ ಯಾಗಿ ವಿವರಿಸಿದರು.
ಇನ್ನೋರ್ವ ಸಂಪನ್ಮೂಲ ವ್ಯಕ್ತಿಗಳಾಗಿದ್ದ ನಾಗೇಂದ್ರಪ್ಪ ಅವರಾದ ಅವರು ನಮ್ಮ ವಿಭಾಗದಲ್ಲಿ 11000 ಶಿಕ್ಷಕರು ಅದರಲ್ಲಿ 6032 ಶಿಕ್ಷಕಿಯರು ಇದ್ದಾರೆ. ಇವರೆಲ್ಲರನ್ನೂ ಹೆಚ್ಚು ಕಡಿಮೆ ಈ ಅಭಿಯಾನದಲ್ಲಿ ಇಳಿಸಿದರೆ ಖಂಡಿತ ಸಕಾರಾತ್ಮಕ ಪರಿಣಾಮ ಬೀರುತ್ತದೆ ಎಂದರು.
ಕೊನೆಗೆ ನೀಲಾ ಕೆ ಅವರು ಅಧ್ಯಕ್ಷೀಯ ಮಾತುಗಳನ್ನಾಡುತ್ತ ಒಟ್ಟು ಅಭಿಯಾನವು ಒಳಗೊಳ್ಳಬೇಕಾದ ಅಂಶಗಳನ್ನು ವಿವರಿಸಿದರು. ಪ್ರಾರಂಭದಲ್ಲಿ ವಿ ಜಿ ಕಾಲೇಜಿನ ಸಂಗೀತ ಉಪನ್ಯಾಸಕಿ ಡಾ ರೇಣುಕಾ ಹಾಗರಗುಂಡಗಿಯವರು ವಿಜ್ಞಾನ ಗೀತೆಯನ್ನು ಹಾಡಿದರು. ಲೈಂಗಿಕ ದೌರ್ಜನ್ಯ ತಡೆ ಸಮಿತಿ ಸಂಚಾಲಕರಾದ ಡಾ ಚಂದ್ರಕಲಾ ಪಾಟೀಲ ಉಪಸ್ಥಿತರಿದ್ದು ಇತಿಹಾಸ ಉಪನ್ಯಾಸಕಾರದ ಶಿವಲೀಲಾ ಧೋತ್ರೆಯವರು ಕಾರ್ಯಕ್ರಮ ನಿರೂಪಿಸಿದರು.
ಕೊನೆಯದಾಗಿ ಆಳಂದ ಸಮುದಾಯ ತಂಡದ ಮುಖಂಡರಾದ ಸಿದ್ಧಾರ್ಥ ಹೊಸೂರೆ ಅವರು ವಂದನಾರ್ಪಣೆ ಮಾಡಿದರು. ಸಮುದಾಯ ಸಂಗಾತಿಗಳ ಕ್ರಾಂತಿಗೀತೆಯೊಂದಿಗೆ ಮುಕ್ತಾಯವಾಯಿತು.