ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಗೆ ಮತ್ತೊಂದು ಗರಿ

0
166

ಕಲಬುರಗಿ: ಭಾರತ ಸರಕಾರದ ರಕ್ಷಣಾ ಮಂತ್ರಾಲಯದಿಂದ ಹೈದ್ರಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಬೀದರನ “ನ್ಯಾಷನಲ್ ಇಂಗ್ಲೀಷ ಮೀಡಿಯಮ್ ಪಬ್ಲಿಕ್ ಶಾಲೆಗೆ” ಸೈನಿಕ್ ಶಾಲೆ ಮಂಜೂರಾಗಿದ್ದು ರಕ್ಷಣಾ ಮಂತ್ರಾಲಯವು ಬಿಡುಗಡೆಗೊಳಿಸಿದ ಪಟ್ಟಿಯಲ್ಲಿ ಭಾರತದಾದ್ಯಂತ ವಿವಿಧ ರಾಜ್ಯಗಳಿಗೆ ಒಟ್ಟು 23 ಸೈನಿಕ ಶಾಲೆಗಳು ಮಂಜೂರಾಗಿದ್ದು ಕರ್ನಾಟಕದಲ್ಲಿ ಹೆಚ್.ಕೆ.ಇ. ಶಿಕ್ಷಣ ಸಂಸ್ಥೆಗೆ ಮಾತ್ರ ಮಂಜೂರಾತಿ ದೊರೆತಿರುವುದು ವಿಶೇಷ ಎಂದು ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ, ಭೀಮಾಶಂಕರ ಸಿ. ಬಿಲಗುಂದಿ ಅವರು ತಮ್ಮ ಸಂತಸ ವ್ಯಕ್ತಪಡಿಸಿದರು.

ಭಾರತ ಸರಕಾರದ ರಕ್ಷಣಾ ಮಂತ್ರಾಲಯದ ಸಹಯೋದೊಂದಿಗೆ ಕಾರ್ಯನಿರ್ವಹಿಸುವ ಈ ಸದರಿ ಶಾಲೆಯ ರೂಪರೇಷೆ ಹಾಗೂ  ನಿಯಮಾವಳಿಗಳು ಸರಕಾರದಿಂದ ಬಂದ ನಂತರ ಮುಂದಿನ ಶೈಕ್ಷಣಿಕ ವರುಷದಿಂದ ಪ್ರವೇಶ ಕಾರ್ಯ ಪ್ರಾರಂಭಿಸಲಾಗುವುದು ಎಂದು ತಿಳಿಸಿದ ಅವರು ಈ ಸಂದರ್ಭದಲ್ಲಿ ಭಾರತ ಸರಕಾರದ ಪ್ರಧಾನಮಂತ್ರಿಗಳಾದ ನರೇಂದ್ರ ಮೂದಿಯವರಿಗೂ ಹಾಗೂ ಕೇಂದ್ರ ಸರಕಾರದ ರಕ್ಷಣಾ ಮಂತ್ರಿಗಳಾದ ರಾಜನಿತ ಸಿಂಗ ಅವರಿಗೆ ತಮ್ಮ ಅಭಿನಂದನೆಗಳನ್ನು ಸಲ್ಲಿಸಿ ಈ ಶಾಲೆ ರಾಷ್ಟ್ರೀಯ ರಕ್ಷಣಾ ಅಕಾಡೆಮಿ, ಭಾರತೀಯ ನೌಕಾ ಅಕಾಡೆಮಿಗೆ ಸೇರಿರುವವರಿಗೆ ನೆರವಾಗಲಿದೆ ಎಂದು ತಿಳಿಸಿದರು.

Contact Your\'s Advertisement; 9902492681

ಕೇಂದ್ರ ರಸಾಯನಿಕ, ರಸಗೊಬ್ಬರ ಮತ್ತು ನವೀಕರಿಸಬಹುದಾದ ಇಂಧನ ಖಾತೆಯ ರಾಜ್ಯ ಸಚಿವರಾದ ಭಗವಂತ ಖೂಬಾ ಅವರ ಪ್ರಯತ್ನ ಹಾಗೂ ಪರಿಶ್ರಮದಿಂದ ಹೆಚ್.ಕೆ.ಇ. ಶಿಕ್ಷಣ ಸಂಸ್ಥೆಯ ಬೀದರ ಶಾಲೆಗೆ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಸೈನಿಕ ಶಾಲೆ ಮಂಜೂರಾಗಿದೆ ಅದಕ್ಕಾಗಿ ತಾವು ಭಗವಂತ ಖೂಬಾ ಅವರಿಗೆ ವ್ಯಯಕ್ತಿಕವಾಗಿ, ಹೆಚ್.ಕೆ.ಇ. ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ಪರವಾಗಿ ಅಲ್ಲದೆ ಕಲ್ಯಾಣ ಕರ್ನಾಟಕದ ಜನತೆಯ ಪರವಾಗಿ ವಿಶೇಷ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ತಿಳಿಸಿದರು, ಅಲ್ಲದೆ ಬೀದರನ ಸೈನಿಕ ಶಾಲೆ ಮಾದರಿ ಶಾಲೆಯನ್ನಾಗಿ ಮಾಡಲು ತಾವು ಕಂಕಣಬದ್ದರಾಗಿದ್ದೇವೆ ಎಂದು ತಿಳಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here