ಕಲಬುರಗಿ: ರಾಧೆ-ಕೃಷ್ಣರ ವೇಷ ಧರಿಸಿದ ಮಕ್ಕಳು ಪುಟ್ಟ ಹೆಜ್ಜೆಗಳನ್ನು ಇಟ್ಟುಕೊಂಡು ಬರುತ್ತಿದ್ದರೆ ಸಾಕ್ಷಾತ ಕೃಷ್ಣನೆ ಕಂಡಂತಿತ್ತು, ಇನ್ನೊಂದೆಡೆ ಮಕ್ಕಳು ಹಾಡುಗಳಿಗೆ ಹೆಜ್ಜೆ ಹಾಕುತ್ತಿರುವುದನ್ನು ಪೋಷಕರು-ಶಿಕ್ಷಕರು ಕಣ್ತುಂಬಿಕೊಳ್ಳುತ್ತಿದ್ದರೆ ಮಕ್ಕಳ ಸಂಭ್ರಮಕ್ಕೆ ಪಾರವೇ ಇರಲಿಲ್ಲ. ಇಂತಹ ಅಪರೂಪದ ನಂದಗೋಕುಲ ಸೃಷ್ಠಿಯಾಗಿದ್ದು ನಗರದ ಕಾಯಕ ಫೌಂಡೇಷನ್ ಫೌಂಡೇಷನ್ ಕಾಲೇಜಿನ ಆವರಣದಲ್ಲಿ.
ನಗರದ ರಿಂಗ್ ರೋಡ್‌ನ ಧರಿಯಾಪುರ-ಕೋಟನೂರ ಜಿಡಿಎ ಬಡಾವಣೆಯಲ್ಲಿರುವ ಕಾಯಕ ಫೌಂಡೇಷನ್ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಹೈಸ್ಕೂಲ್‌ನ ಪ್ರಾಥಮಿಕ ಶಾಲೆಯ ಮಕ್ಕಳಿಗಾಗಿ ಕೆಸರಟಗಿ ರಸ್ತೆಯಲ್ಲಿರುವ ಕಾಯಕ ಫೌಂಡೇಷನ್ ವಿಜ್ಞಾನ ಮತ್ತು ವಾಣಿಜ್ಯ ವಸತಿ ಪಿಯು ಕಾಲೇಜಿನ ಸಭಾಂಗಣದಲ್ಲಿ ಶನಿವಾರ ಶ್ರೀಕೃಷ್ಣ ಗೋಕುಲಾಷ್ಠಮಿ ನಿಮಿತ್ತವಾಗಿ ಹಮ್ಮಿಕೊಂಡಿದ್ದ ರಾಧೆ-ಕೃಷ್ಣ ವೇಷ ಧರಿಸಿ ಮಕ್ಕಳ ಸ್ಪರ್ಧೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಸಂಭ್ರಮದಿಂದ ನಡೆಯುವ ಮೂಲಕ ಮುದ ನೀಡಿತು.
ಕಲಿಕೆಯ ಜತೆಗೆ ಮಕ್ಕಳಿಗೆ ರಾಮಾಯಣ, ಮಹಾಭಾರತ ಕುರಿತು ತಿಳಿಸಿ ದೇಶದ ಸಂಸ್ಕೃತಿ ಮತ್ತು ಸಂಪ್ರದಾಯ ಕಲಿಸಿಕೊಡುವುದು ಮುಖ್ಯವಾಗಿರುವುದರಿಂದ ಶ್ರೀಕೃಷ್ಣ ಮತ್ತು ರಾಧೆಯ ವೇಷ ಧರಿಸಿ ಮಕ್ಕಳಿಗೆ ಅವರ ಆದರ್ಶ ತಿಳಿಸಿಕೊಡುವುದರ ಜತೆಗೆ ಬಣ್ಣದ ಕಲ್ಪನೆ ಮೂಡುತ್ತದೆ. ಚಿಕ್ಕನಿಂದಲೇ ವೇದಿಕೆಯ ಭಯ ಹೋಗಿ ನಾಯಕತ್ವ ಗುಣ ಬೆಳೆಯಲು ಇಂತಹ ಕಾರ್ಯಕ್ರಮ ಸಹಕಾರಿಯಾಗುತ್ತದೆ. ಈ ನಿಟ್ಟಿನಲ್ಲಿ ಶಾಲಾ-ಕಾಲೇಜಿನಲ್ಲಿ ಮಾದರಿಯಾಗಿರುವ ಕಾರ್ಯಕ್ರಮಗಳು ನಡೆಯುತ್ತವೆ. – ಶಿವರಾಜ ಟಿ.ಪಾಟೀಲ್
ಶ್ರೀಕೃಷ್ಣ ಜನ್ಮಾಷ್ಠಮಿ ಕಾರ್ಯಕ್ರಮವನ್ನು ಕಾಯಕ ಫೌಂಡೇಷನ್ ಏಜುಕೇಷನ್ ಟ್ರಸ್ಟ್ ಸಂಸ್ಥಾಪಕ ಶಿವರಾಜ ಟಿ.ಪಾಟೀಲ್ ಮತ್ತು ಅಧ್ಯಕ್ಷರಾದ ಸಪ್ನಾರೆಡ್ಡಿ ಶಿವರಾಜ ಪಾಟೀಲ್ ಅವರು ಮಕ್ಕಳೊಂದಿಗೆ ಜ್ಯೋತಿ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಸಪ್ನಾರಡ್ಡಿ ಪಾಟೀಲ್ ಮಾತನಾಡಿ ಮಕ್ಕಳಿಗೆ ನಮ್ಮ ದೇಶದ ಸಂಸ್ಕೃತಿ ಮತ್ತು ಪರಂಪರೆಯನ್ನು ಪರಿಚಯಿಸುವುದುರ ಜತೆಗೆ ಅಲ್ಲಿರುವ ಪ್ರತಿಭೆಯನ್ನು ಪ್ರದರ್ಶನ ಮಾಡಲು ವೇದಿಕೆ ಕಲ್ಪಿಸುವ ಉzಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಪೋಷಕರ ಸಹಕಾರ ಮತ್ತು ಶಿಕ್ಷಕರ ಶ್ರಮದಿಂದಾಗಿ ಯಶಸ್ವಿಯಾಗಿದೆ ಎಂದರು.
ಕಾಯಕ ಪ್ರಾಥಮಿಕ ಶಾಲೆಯ ಪ್ರಾಚಾರ್ಯರಾದ ವೈಶಾಲಿ ಗೋತಗಿ, ಕಾಲೇಜಿನ ಪ್ರಾಚಾರ್ಯ ಗುರುಬಸಯ್ಯ ಸಾಲಿಮಠ, ಹೈಸ್ಕೂಲ್ ಪ್ರಾಚಾರ್ಯರಾದ ಗೋವಿಂದ ಕುಲಕರ್ಣಿ,ಆಡಳಿತಾಧಿಕಾರಿಗಳಾದ ಮಹಾಂತೇಶ ಪಾಟೀಲ್,ಚಂದ್ರಶೇಖರ ಶಂಕನೋರ, ಶಿಕ್ಷಕರಾದ ರೇಣುಕಾ ಎಸ್.ಪೂಜಾರಿ, ರೇವಣಸಿದ್ದ ಬಾವಿ, ಆಶಿಸ್‌ಸಿಂಗ್, ಪ್ರವೀಣಕುಮಾರ, ಗೋಪಾಲ ಬಿ, ಮಹ್ಮದ ಅಜರ್, ಬಸವರಾಜ, ಕೇಶವಲು ಸ್ವಾಮಿ, ಸುನಂದಾ, ಕಾವ್ಯಾ, ಗೌರಿ,ಭಾಗ್ಯಶ್ರೀ, ಶ್ರಿದೇವಿ, ಅನಿತಾ, ಭಾರತಿ, ಸುವರ್ಣ, ಪೂರ್ಣಿಮಾ,ವಿದ್ಯಾವತಿ, ಬಸವರಾಜ, ಮೌನೇಶ, ಕಾನೂನು ಸಲಹೆಗಾರರಾದ ಬಸವರಾಜ ಬಿರಾದಾರ ಸೊನ್ನ, ಶಿಕ್ಷಕಿಯರಾದ ಕುಲಸುಮ್ ಮತ್ತು ಕಾವ್ಯಾ ಸ್ವಾಗತಿಸಿ, ಕಾರ್ಯಕ್ರಮ ನಿರೂಪಣೆ ಮಾಡಿದರು.
ವಿದ್ಯಾರ್ಥಿನಿ ಭಾರ್ಗವಿ, ವೈಷ್ಣವಿ, ಪ್ರೇರಣಾ ಹಾಗೂ ತಂಡದವರು ಪ್ರಾರ್ಥಿಸಿದರು. ಎಲ್‌ಕೆಜಿ ಮತ್ತು ಯುಕೆಜಿ ಹಾಗೂ ೧ನೇ ತರಗತಿ ವಿದ್ಯಾರ್ಥಿಗಳಿಂದ ಸಮಯದ ಮಹತ್ವ, ಕೃಷ್ಣ ಬಲರಾಮ ನಾಟಕ ಪ್ರದರ್ಶನ ಮಾಡಲಾಯಿತು.ನಂದಗೋಕುಲ ಹಾಡುಗಳಿಗೆ ನೃತ್ಯ ಮಾಡುವ ಮೂಲಕ ಮಕ್ಕಳ ನೋಡುಗರ ಕಣ್ಮನ ಸೆಳೆದರು.