ಚಿಂಚೋಳಿ: ಸಾರ್ವಜನಿಕರ ಮನವಿಗೆ ಸ್ಪಂದಿಸದ ಚಿಂಚೋಳಿ ತಾಲೂಕಾಡಳಿತದ ನಡೆ ಖಂಡಿಸಿ ಸೆ. 25ಕ್ಕೆ ಪಟ್ಟಣಕ್ಕೆ ಆಗಮಿಸುವ ಜಿಲ್ಲೆಯ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಘೀರಾವ್ ಹಾಕಲು ತಿರ್ಮಾನಿಸಲಾಗಿದೆ ಎಂದು ಭಾರತೀಯ ಮುಕ್ತಿ ಮೋರ್ಚಾ ಹಾಗೂ ಮೂಲ ನಿವಾಸಿಗಳ ಸಂಘಟನೆಯ ಮುಖಂಡ ಮಾರುತಿ ಗಂಜಗಿರಿ ತಿಳಿಸಿದ್ದಾರೆ.
ಇ ಮೀಡಿಯಾ ಲೈನ್ ಸುದ್ದಿ ವಾಹಿನಿಯೊಂದಿಗೆ ಮಾತನಾಡಿದ ಅವರು ಈ ಬಗ್ಗೆ ತಾಲೂಕ ದಂಡಾಧಿಕಾರಿಗಳಿಗೆ ಮುನ್ಸೂಚನೆ ನೀಡಲಾಗಿದ್ದು, ಮಿರಿಯಾಣ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಲ್ಲೂರ ರೋಡ ಗ್ರಾಮದ ಪರಿಶಿಷ್ಟ ಜಾತಿ ಬಡಾವಣೆಯಲ್ಲಿರುವ ಮಹಿಳಾ ಶೌಚಾಲಯವನ್ನು ಅನಧಿಕೃತ ನೆಲಸಮಗೊಳಿಸಿರುವುದನ್ನು ಖಂಡಿಸಿ ಜು. 17 ರಂದು ನಡೆಸಿದ ಹೋರಾಟದಲ್ಲಿ ಮಹಿಳೆಯರು ಕಣ್ಣಿರು ತೆಗೆದು ನಮಗೆ ಬಹಳ ತೊಂದರೆಯಾಗುತ್ತಿದೆ ಸಾಬರೆ ಶೌಚಾಲಯ ನಿರ್ಮಿಸುವಂತೆ ಮನವಿ ಮಾಡಿಕೊಂಡಾಗ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗಳು ಕೇವಲ ಒಂದೇ ಒಂದು ವಾರದಲ್ಲಿ ಈ ಸಮಸ್ಯೆ ಬಗೆಹರಿಸುತ್ತೇನೆಂದು ಹೇಳಿ ಕೊಟ್ಟ ಮಾತಿಗೆ ತಪ್ಪಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳ/ ಅಭಿವೃದ್ಧಿ ಅಧಿಕಾರಿಗಳ ನಡೆಯನ್ನು ಖಂಡಿಸಿ ಮತ್ತು ಸುಲೇಪೇಟ ಗ್ರಾಮದ ಕಂದಾಯ ನಿರೀಕ್ಷಕರ ಕಾರ್ಯಾಲಯದ ಪಕ್ಕದಲ್ಲಿಯೇ 15-20 ವರ್ಷಗಳಿಂದ 20 ಅಲೆಮಾರಿ ಬುಡಕಟ್ಟು ಜನಾಂಗದ ಕುಟುಂಬಗಳು ಜೀವನ ನಡೆಸುತ್ತಿದ್ದರು ಅವರಿಗೆ ಆಧಾರ್ ಕಾರ್ಡ್ ನೀಡಲು ಹಿಂದೇಟು ಹಾಕುತ್ತಿರುವ ಅಧಿಕಾರಿಗಳ ವರ್ತನೆ ಹಾಗೂ ಕುಂಚಾವರಂ ಗ್ರಾಮ ಪಂಚಾಯಿತಿಯ 2022-2023 ನೇ ಸಾಲಿನಲ್ಲಿ ಡಿಜಿಟಲ್ ಗ್ರಂಥಾಲಯಕ್ಕೆ ಬಂದ ಗಣಕ ಸಾಮಾಗ್ರಿಗಳು ಖಾಸಗಿ ವ್ಯಕ್ತಿಯ ಮನೆಯಲ್ಲಿಟ್ಟುಕೊಂಡು ಸರ್ಕಾರದ ಚರಾಸ್ತಿ ದುರುಪಯೋಗ ಮಾಡಿಕೊಂಡಿರುವುದನ್ನು ಹಾಗೂ ಇನ್ನಿತರ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿ ಉಸ್ತುವಾರಿ ಸಚಿವರಿಗೆ ಘೀರಾವ್ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಐನಾಪುರ ಮೌನೇಶ್ ಗಾರಂಪಳ್ಳಿ, ಸಿದ್ದು ರಂಗನೂರ, ಸುಭಾಷ್ ತಾಡಪಳ್ಳಿ ಮುಂತಾದವರು ಉಪಸ್ಥಿತರಿದ್ದರು