ಬೆಂಗಳೂರು: ರಾಷ್ಟ್ರ ಹಾಗೂ ರಾಜ್ಯ ರಾಜಕಾರಣದಲ್ಲಿ ಇದೀಗ ವಾಟ್ಸಾಪ್ ಚಾನಲ್‌ಗಳದ್ದೇ ಸದ್ದು. ಪ್ರಧಾನಿ ನರೇಂದ್ರ ಮೋದಿ, ಸಿಎಂ ಸಿದ್ದರಾಮಯ್ಯ ಅವರು ಈಗಾಗಲೇ ತಮ್ಮ ವಾಟ್ಸಾಪ್ ಚಾನಲ್‌ಗಳನ್ನು ಶುರು ಮಾಡಿದ್ದಾರೆ. ಮಿಲಿಯನ್‌ಗಟ್ಟಲೆ ಫಾಲೋವರ್ಸ್‌ಗಳನ್ನೂ ಹೊಂದಿದ್ದಾರೆ. ಇದೀಗ ರಾಜ್ಯದ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಸಹ ತಮ್ಮದೇ ವಾಟ್ಸಾಪ್ ಚಾನಲ್ ಆರಂಭಿಸಿ, ಸಾರ್ವಜನಿಕರೊಂದಿಗೆ ನಿರಂತರ ಸಂಪರ್ಕದಲ್ಲಿರಲು ಮುಂದಾಗಿದ್ದಾರೆ.
ವಾಟ್ಸಾಪ್ ನೂತನವಾಗಿ ಪರಿಚಯಿಸಿರುವ ಈ ಚಾನೆಲ್ ಫೀಚರ್‌ನಲ್ಲಿ ಸಿಎಂ ಸಿದ್ದರಾಮಯ್ಯ ಕೂಡ ಖಾತೆ ತೆರೆದಿದ್ದಾರೆ. ಈ ಮೂಲಕ ಜನಸಾಮಾನ್ಯರಿಗೆ ಸುಲಭವಾಗಿ ಮಾಹಿತಿ ನೀಡಲು ಮುಂದಾಗಿದ್ದಾರೆ.
ಕೆಲ ದಿನಗಳ ಹಿಂದೆಯಷ್ಟೇ ಪರಿಚಯಿಸಲ್ಪಟ್ಟ ಹೊಸ ಫೀಚರ್ ವಾಟ್ಸಾಪ್ ಚಾನೆಲ್‌ನಲ್ಲಿ ಈಗಾಗಲೇ ದೇಶದ ಹಲವು ರಾಜ್ಯಗಳ ಮುಖ್ಯಮಂತ್ರಿಗಳು ಸಹ ಖಾತೆ ತೆರೆದಿದ್ದು, ಸರ್ಕಾರ ಮತ್ತು ಮುಖ್ಯಮಂತ್ರಿಗಳಿಗೆ ಸಂಬಂಧಿಸಿದ ಮಾಹಿತಿಯನ್ನು ನೇರವಾಗಿ ಜನರ ಮೊಬೈಲ್‌ಗೆ ರವಾನಿಸುವ ಪ್ರಯತ್ನ ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರಂತೆ ಆರ್.ಬಿ.ತಿಮ್ಮಾಪುರ ಅವರೂ ಚಾನೆಲ್ ಆರಂಭಿಸಿ, ತಮ್ಮ ಇಲಾಖೆಗೆ ಸಂಬಂಧಿಸಿದ ಮಾಹಿತಿ ಹಂಚಿಕೊಳ್ಳಲು ಉತ್ಸುಕರಾಗಿದ್ದಾರೆ.
ವಾಟ್ಸಾಪ್ ಚಾನೆಲ್ ಮೂಲಕ ನಿಮ್ಮ ಮೊಬೈಲ್‌ನಲ್ಲೇ ತಿಮ್ಮಾಪುರ ಅವರ ಕಾರ್ಯಗಳ ಕುರಿತು ಮಾಹಿತಿ ಪಡೆಯಲು ಮೊದಲು ನಿಮ್ಮ ವಾಟ್ಸಾಪ್ ಅನ್ನು ಅಪ್ಡೇಟ್ ಮಾಡಿಕೊಂಡು, ವಾಟ್ಸಾಪ್ ಚಾನೆಲ್ ಫೀಚರ್ ಬರುವಂತೆ ಮಾಡಿಕೊಳ್ಳಿ. ಬಳಿಕ https://whatsapp.com/channel/0029Va90uRhHrDZcz1QKLa2h ಈ ಲಿಂಕ್ ಕ್ಲಿಕ್ಕಿಸುವ ಮೂಲಕ ತಿಮ್ಮಾಪುರ ಅವರೊಂದಿಗೆ ಸಂಪರ್ಕದಲ್ಲಿರಬಹುದು. ಅಥವಾ RB Timmapur ಎಂದು ಸರ್ಚ್ ಮಾಡಿ ಚಾನೆಲ್ ಫಾಲೋ ಮಾಡುವ ಮೂಲಕವೂ ಮಾಹಿತಿ ಪಡೆಯಿರಿ.