- ಸಾಜಿದ್ ಅಲಿ
ಕಲಬುರಗಿ: ನಗರದ ಮಕ್ಕಾ ಕಾಲೋನಿ ಬಡಾವಣೆಯಲ್ಲಿನ ರಜಾ ಎ ಮುಸ್ತಾಫಾ ಜುಮ್ಮಾ ಮಸಜೀದ್ ಯೊಂದರಲ್ಲಿ ಬಳಕೆಯಾಗಿ ಪೋಲಾಗುವನೀರು ಮರು ಬಳಕೆ ಮತ್ತು ಮಳೆ ನೀರು ಸಂರಕ್ಷಣೆಗೆ ಸೂಕ್ತ ಸಂಪರ್ಕ ನಿರ್ಮಿಸುವ ಮೂಲಕ ಮಸಜೀದ್ ಕಮೀಟಿ ಮಹತ್ವದ ಹೆಜ್ಜೆ ಹಾಕಿದೆ.
ಮಸಜೀದ್ ನಾಮಾಜ್ ನಿರ್ವಹಿಸಲು ಬರುವವರು ವಝೂ ಮಾಡಲು ಬಳಕೆಯಾಗುವ ನೀರು ಬಳಕೆಯ ನಂತರ ಪೋಲಾಗುತ್ತಿತ್ತು, ಆದರೆ ಪೋಲಾಗುವನೀರನ್ನು ಸಂಗ್ರಹಿಸಿ ಮತ್ತೊಮ್ಮೆ ನೀರು ಬಳಕಗೆ ಘಟಕ ನಿರ್ಮಿಸಲಾಗಿದ್ದು, ಘಟಕವನ್ನು ಮಹಾನಗರ ಪಾಲಿಕೆಯ ಆಯುಕ್ತ ರಾಹುಲ್ ಪಾಂಡೆ ಅವರು ಇಂದು ಉದ್ಘಾಟಿಸಿ ಮಂಡಳಿಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಪಾಲಿಕೆಯ ಪರಿಸರ ಸಂರಕ್ಷಣಾಧಿಕಾರಿ ಮುನಾಫ್ ಪಟೇಲ್, ಎಸ್.ಡಿ.ಪಿ.ಐ ಜಿಲ್ಲಾ ಘಟಕದ ಅಧ್ಯಕ್ಷ ಮೊಹಮ್ಮದ್ ಮೋಹಸಿನ್, ಮಸಜೀದ್ ಕಮೀಟಿಯ ಅಧ್ಯಕ್ಷ ಸೀರಾಜ್ ಅಹ್ಮದ್, ರಿಯಾಜ್ ಖತೀಬ್, ಪಾಶಾ ಖಾದ್ರಿ ಸೇರಿದಂತೆ ಮಸಜೀದ್ ಮೌಲಾನಾ, ಇಮಾಮ್ ಹಾಗೂ ಬಡಾವಣೆಯ ಜನರು ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪಾಲಿಕೆಯ ಆಯುಕ್ತ ನಗರದ ಪ್ರಾರ್ಥನಾ ಮಂದಿರದಲ್ಲಿ ಈ ರೀತಿ ಹೆಜ್ಜೆ ಸಮಾಜಕ್ಕೆ ಪ್ರೇರಣೆ ಎಂದು ಬಣಿಸಿದರು.
ಮಸಜೀದ್ ನಲ್ಲಿ ಇರುವ ಬೋರಿಂಗ್ ಹತ್ತಿರ ನೀರು ಸೆರೆ ಕೃಡಿಕರಿಸುವ ಒಂದು ಹುಂಡಾ ನಿರ್ಮಿಸಿ ಪೊಲ್ ಆಗುವ ನೀರು ನೆರೆವಾಗಿ ಬೋರಿಂಗ್ ಒಳಗೆ ಪ್ರವೇಶಿಸಿ ಬೋರ್ವೆಲ್ ರಿಚಾರ್ಜ್ ಆಗುವ ರೀತಿ ವ್ಯವಸ್ಥೆ ಮಾಡಲಾಗಿದ್ದು, ಅದೇ ರೀತಿ ಮಳೆ ನೀರು ಮೇಲ್ಛಾವಣಿಯಿಂದ ಮತ್ತೆ ಬಳಕೆಯಾಗು ನಿಟ್ಟಿನಲ್ಲಿ ಪೈಪ್ ಗಳ ಸಂಪರ್ಕ ಕಲ್ಪಸಿ ನೀರು ಪುನರ್ ಬಳಕಾ ಘಟಕ ನಿರ್ಮಿಸಲಾಗಿದೆ. ಮಸಜೀದ್ ಗೆ ಆಗಮಿಸುವ ಜನರು ಮಂಡಳಿಯ ಈ ಹೆಜ್ಜೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.