ಕಲಬುರಗಿ ಜನತಾ ದರ್ಶನ ಪ್ರತಿಫಲ: ವಿದ್ಯಾಲಯಕ್ಕೆ ಬಂತೂ ಬಸ್

0
128

ಕಲಬುರಗಿ; ಸೋಮವಾರ ಚಿಂಚೋಳಿಯಲ್ಲಿ ಜರುಗಿದ ಜನತಾ ದರ್ಶನದಲ್ಲಿ ಚಿಂಚೋಳಿಯ ಪೋಲಪಲ್ಲಿ ಆದರ್ಶ ವಿದ್ಯಾಲಯದ ಮಕ್ಕಳು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಚಿಂಚೋಳಿ ಪಟ್ಟಣದಿಂದ ತಮ್ಮ ಶಾಲೆಗೆ ಬಸ್ ಓಡಿಸಬೇಕೆಂಬ ಮನವಿಗೆ ತಕ್ಷಣ ಸ್ಪಂದಿಸದ ಸಚಿವರು ಬಸ್ ಓಡಿಸುವಂತೆ ಸ್ಥಳದಲ್ಲಿದ್ದ ಕೆ.ಕೆ.ಅರ್.ಟಿ.ಸಿ. ಎಂ.ಡಿ ಎಂ.ರಾಚಪ್ಪ ಅವರಿಗೆ ನಿರ್ದೇಶನ ನೀಡಿದರು.

ಅದರಂತೆ ಮಂಗಳವಾರ ಬೆಳಿಗ್ಗೆಯ ಕೆ.ಕೆ.ಆರ್.ಟಿ.ಸಿ. ಬಸ್ ಚಿಂಚೋಳಿ ಪಟ್ಟಣದಿಂದ ಪೋಲಕಪಲ್ಲಿ ಆದರ್ಶ ವಿದ್ಯಾಲಯ ಕಾರ್ಯಾಚರಣೆ ಆರಂಭಿಸಿದೆ. ಶಾಲೆಗೆ ಬಂದ ಬಸ್ ಕಂಡು ಮಕ್ಕಳು ಖುಷ್ ಆಗಿದ್ದಾರೆ.

Contact Your\'s Advertisement; 9902492681

ಈ ಹಿಂದೆ ಬಸ್ ಮುಖ್ಯ ರಸ್ತೆ ಮೂಲಕ ಹಾದುಹೋಗುತ್ತಿತ್ತು. ಶಾಲೆ ಮುಖ್ಯ ರಸ್ತೆಯಿಂದ ಅಂದಾಜು ಒಂದು ಕಿ.ಮೀ. ದೂರ ಇರುವುದರಿಂದ ಮಕ್ಕಳಿಗೆ ತೊಂದರೆಯಾಗಿತ್ತು.

ಪ್ರತಿ ದಿನ ಈ ಬಸ್ ಚಿಂಚೋಳಿ ಪಟ್ಟಣದಿಂದ ಬೆಳಿಗ್ಗೆ 9 ಗಂಟೆಗೆ ಆದರ್ಶ ವಿದ್ಯಾಲಯಕ್ಕೆ ಹೊರಡಲಿದೆ. ಅದೇ ರೀತಿ ಸಂಜೆ 4.15 ಗಂಟೆಗೆ ಶಾಲೆಯಿಂದ ಮಕ್ಕಳನ್ನು ತರಲು ಬಸ್ ಸಂಚರಿಸಲಿದೆ ಎಂದು ಚಿಂಚೋಳಿ ಡಿಪೋ ಮ್ಯಾನೇಜರ್ ಅಶೋಕ ಪಾಟೀಲ ಮಾಹಿತಿ ನೀಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here