ಶಹಾಬಾದ: ಕರ್ನಾಟಕ ರಾಜ್ಯ ಬಂದಗೆ ಕರವೇ ಕಾರ್ಯಕರ್ತರು ಬೆಂಬಲ ನೀಡಿ ಕಾವೇರಿ ನೀರು ತಮಿಳುನಾಡಿಗೆ ನೀರು ಬಿಡದಂತೆ ಕರ್ನಾಟಕ ರಕ್ಷಣಾ ವೇದಿಕೆ(ನಾರಾಯಣಗೌಡ ಬಣ) ಕಾರ್ಯಕರ್ತರು ತಹಸೀಲ್ ಕಚೇರಿಯ ಮುಂಭಾಗದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ ಗುರುರಾಜ ಸಂಗಾವಿ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಕರವೇ ತಾಲೂಕಾಧ್ಯಕ್ಷ ಯಲ್ಲಾಲಿಂಗ ಹಯ್ಯಾಳಕರ್ ಮಾತನಾಡಿ, ಕರ್ನಾಟಕದಲ್ಲಿ ಮಳೆ ಕಡಿಮೆಯಾಗಿದ್ದು ಅದ್ದರಿಂದ ಕುಡಿಯಲು ನೀಲಿನ ಸಮಸ್ಯೆಯು ಬಹಳ ಅಭಾವ ಇರುತ್ತದೆ. ಕರ್ನಾಟಕದಲ್ಲಿ ಬೆಂಗಳೂರು, ಮೈಸೂರು, ಮಂಡ್ಯ ಇನ್ನು ಹಲವಾರು ನಗರವಾಸಿಗರಿಗೆ ಕುಡಿಯಲು ನೀರಿನ ಸಮಸ್ಯೆ ಸಂಭವಿಸುತ್ತದೆ. ಅಲ್ಲದೆ ರೈತರು ಇದೇ ಜಲಾಶಯದ ನೀರನ್ನು ಅವಲಂಬಿಸಿ ಸಾವಿರಾರು ಜನರು ಜೀವನ ನಡೆಸುತ್ತಿದ್ದಾರೆ. ಆದ್ದರಿಂದ ನಿರಂತರವಾಗಿ ತಮಿಳುನಾಡಿಗೆ ನೀರು ಬೀಡುತ್ತಾ ಹೋದರೆ ನಮಗೆ ಕುಡಿಯಲು ನೀರಿನ ಸಮಸ್ಯೆ ತುಂಬಾ ಉಂಟಾಗುತ್ತದೆ. ಆದ್ದರಿಂದ ತಕ್ಷಣವೇ ರಾಜ್ಯ ಸರಕಾರ ಹಾಗೂ ಲೋಕಸಭಾ ಸದಸ್ಯರು ತಕ್ಷಣ ತಮಿಳುನಾಡಿಗೆ ನೀರು ಹರಿಸುವದನ್ನು ನಿಲ್ಲಿಸಬೇಕು.ಇಲ್ಲವಾದಲ್ಲಿ ನಮ್ಮ ಸಂಘಟನೆಯ ಹೋರಾಟ ಮುಂದುವರಿಯುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ನಗರ ಅಧ್ಯಕ್ಷ ಸಂತೋಷ ಇಟಗಿ, ತಾಲೂಕ ಗೌರವಾಧ್ಯಕ್ಷ ರಾಮು ಭೂತಪೂರ, ಉಪಾಧ್ಯಕ್ಷ ಮಹೇಶ ಕಾಂಬಳೆ, ಪ್ರಧಾನ ಕಾರ್ಯದರ್ಶಿ ಮಹೇಶ್ ಹಲಕರ್ಟಿ, ಸುರೇಶ್ ಹೈಯ್ಯಳಕರ್,ಕಾರ್ಯದರ್ಶಿಗಳಾದ ಸಿದ್ದು ತರನಳ್ಳಿ, ಸಾಗರ ಬಂದುಕ್, ವಿಶಾಲ ಮಸ್ಕಿ,ಪ್ರಭು ಚವ್ಹಾಣ, ಶರಣ ಕುಮಾರ, ಸದಾಶಿವ ಕಾಚಾಪೂರ, ಶಿವಕುಮಾರ ದೊರೆ, ಮಾಂತೇಶ,ಯಲ್ಲಾಲಿಂಗ ಸೇರಿದಂತೆ ಅನೇಕರು ಇದ್ದರು.