ಬಸವತತ್ವ ಜಗತ್ತಿಗೆ ದಾರಿದೀಪ

0
18

ಭಾಲ್ಕಿ; ಪಟ್ಟಣದ ಹಿರೇಮಠ ಸಂಸ್ಥಾನದಲ್ಲಿ ವಿಶ್ವಗುರು ಬಸವಣ್ಣನವರ ಮೂರ್ತಿ ಅನಾವರಣ ಮಾಡಲಾಯಿತು. ಈ ಸಮಾರಂಭದ ದಿವ್ಯಸಾನಿಧ್ಯ ವಹಿಸಿ, ವಿಶ್ವಗುರು ಬಸವಣ್ಣನವರು ಜಗತ್ತಿಗೆ ದಾರಿದೀಪವಾಗಿದ್ದಾರೆ. ಬಸವಣ್ಣನವರ ಸಂದೇಶ ಇಂದು ಮುಂದು ಎಂದೆಂದಿಗೂ ಪ್ರಸ್ತುತವಾಗಿದೆ. ಇಂದು ವಿಶ್ವ ಹೃದಯ ದಿನ. ನಮ್ಮ ಶರೀರದ ಯಾವ ಅವಯವಗಳು ಕಳೆದುಕೊಂಡರೆ ನಾವು ಬದುಕಬಹುದು. ಆದರೆ ಹೃದಯ ಕಳೆದುಕೊಂಡ ನಂತರ ಬದುಕಲಿಕ್ಕೆ ಸಾಧ್ಯವಿಲ್ಲ. ಅದೇರೀತಿಯಾಗಿ ಭಾರತೀಯ ಸಂಸ್ಕøತಿಯ ಹೃದಯವೆಂದರೆ, ಬಸವಣ್ಣನವರು.

ಅವರನ್ನು ಮರೆತು ಭಾರತೀಯ ಸಂಸ್ಕøತಿ ಪರಂಪರೆ ಮುನ್ನಡೆಸಲು ಸಾಧ್ಯವಿಲ್ಲ. ಅದಕ್ಕಾಗಿ ನಾವೆಲ್ಲರೂ ಬಸವತತ್ವವನ್ನು ನಿಜಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಪೂಜ್ಯ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಆರ್ಶೀವಚನ ನೀಡಿದರು. ಮನಗುಂಡಿಯ ಪೂಜ್ಯ ಶ್ರೀ ಬಸವಾನಂದ ಸ್ವಾಮಿಗಳವರಿಂದ ವಿಶ್ವಗುರು ಬಸವಣ್ಣನವರ ಮೂರ್ತಿ ಅನಾವರಣ ಮಾಡಲಾಯಿತು. ಪೂಜ್ಯ ಶ್ರೀ ಗುರುಬಸವ ಪಟ್ಟದ್ದೇವರು, ಪೂಜ್ಯ ಶ್ರೀ ಮಹಾಲಿಂಗ ಸ್ವಾಮಿಗಳು, ಪೂಜ್ಯ ಶ್ರೀ ಬಸವಲಿಂಗ ಸ್ವಾಮಿಗಳು, ಪೂಜ್ಯ ಶ್ರೀ ಬಸವಾನಂದ ಸ್ವಾಮಿಗಳು ಸಮ್ಮುಖ ವಹಿಸಿದ್ದರು.

Contact Your\'s Advertisement; 9902492681

ಶರಣೆ ಶುಭಾಂಗಿ ಚನ್ನಬಸವಣ್ಣ ಬಳತೆ ದಂಪತಿಗಳಿಂದ ಬಸವಣ್ಣನವರ ಮೂರ್ತಿಗೆ ಪೂಜೆಯನ್ನು ನೆರವೇರಿಸಲಾಯಿತು. ಶ್ರೀಮಠದ ವಿದ್ಯಾರ್ಥಿಗಳು ಹಾಗೂ ಅಕ್ಕಬಳಗದ ತಾಯಂದಿರು ಅವರಿಂದ ವಚನಾಭಿಷೇಕ ನಡೆಯಿತು. ಯಲ್ಲನಗೌಡ ಬಾಗಲಕೋಟ ಮತ್ತು ರಾಜು ಜುಬರೆ ಅವರಿಂದ ವಚನ ಸಂಗೀತ ನೆರವೇರಿತು. ನವಲಿಂಗ ಪಾಟೀಲ ನಿರೂಪಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here