ಕಲಬುರಗಿ: ತಮಿಳುನಾಡಿಗೆ ಕಾವೇರಿ ನೀರು ಬಿಡದಂತೆ ರಾಜ್ಯ ಸರಕಾರವನ್ನು ಆಗ್ರಹಿಸಿ ಕರುನಾಡ ವಿಜಯಸೇನೆ ಸಂಘಟನೆ ವತಿಯಿಂದ ನಗರದ ಸರದಾರ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಜಿಲ್ಲಾ ಅಧ್ಯಕ್ಷ ಪೃಥ್ವಿರಾಜ ಎಸ್. ರಾಂಪೂರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳ ಮುಖಾಂತರ ಸಿಎಂ ಅವರಿಗೆ ಮನವಿ ಸಲ್ಲಿಸಲಾಯಿತು.
ತಮಿಳುನಾಡು ಕಾವೇರಿ ನೀರು ಬಿಡದಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿ ಪ್ರತಿಭಟನೆ, ರಾಜ್ಯದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದೆ ನಮ್ಮ ನಾಡಿನಲ್ಲಿ ಇರುವಂತಹ ರೈತರಿಗೆ ಮತ್ತು ನಾಗರೀಕರಿಗೆ ನೀರಿನ ಪ್ರಮಾಣ ಕಡಿಮೆ ಇರುವುದರಿಂದ ಮುಂದಿನ ದಿನಗಳಲ್ಲಿ ನಮ್ಮ ರೈತರಿಗೆ ತೊಂದರೆಯಾಗುತ್ತೆ. ಎಲ್ಲವನ್ನು ಕಾವೇರಿ ನೀರು ತಮಿಳುನಾಡಿಗೆ ಬಿಟ್ಟರೆ ಮುಂದಿನ ದಿನಗಳಲ್ಲಿ ನಮ್ಮ ನಾಡಿನ ರೈತರ ಪಾಡು ಏನಾಗಬೇಕು. ಕರ್ನಾಟಕ ಸರ್ಕಾರ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯ ನವರೇ,? ಸುಪ್ರೀಂ ಕೋರ್ಟ ತಮಿಳುನಾಡಿಗೆ 3 ಸಾವಿರ ಕ್ಯೂಸೆಕ್ಸ್ ನೀರು 15 ದಿನಗಳ ಕಾವೇರಿ ನೀರು ಹರಿಸಲು ಆದೇಶ ಹೊರಡಿಸಿದೆ.
ಮಾನ್ಯ ಮುಖ್ಯಮಂತ್ರಿಗಳೇ ತಮ್ಮ ಬಾಯಿಗೆ ಬೀಗ ಹಾಕಿಕೊಂಡು ಕುಂತಿದ್ದೀರಾ ? ಕನ್ನಡಿಗರ ಹೊರಾಟ ತಮಗೆ ಕೇಳುತ್ತಿಲ್ಲವಾ ? ಕರ್ನಾಟಕ ಸರ್ಕಾರದ ಮಾನ್ಯ ಮುಖ್ಯಮಂತ್ರಿಗಳೇ ರೈತರ ಪರ ನಾವಿದ್ದೇವೆ ಎಂಬುದನ್ನು ಭಾಷಣಗಳಲ್ಲಿ ಬೇಡ, ನಿಜವಾಗಲೂ ತಾವು ರೈತರ ಪರ ಕಾವೇರಿ ಪರ ನಾಡಿನ ಜನತೆಯ ಪರ ತಮಗೆ ಚಿಂತನೆ ಏನಾದರೂ ಇದ್ದರೇ ತಮಿಳುನಾಡಿಗೆ ನಮ್ಮ ಕಾವೇರಿ ನದಿ ನೀರನ್ನು ಹರಿಯುತ್ತಿರುವುದನ್ನು ನಿಲ್ಲಿಸಿ ಸುಪ್ರಿಂ ಕೋಟಶ ಆದೇಶವನ್ನು ಖಂಡಿಸಿ ಕಾವೇರಿ ನದಿಯ ನೀರನ್ನು ನಂಬಿಕೊಂಡು ನಮ್ಮ ನಾಡಿನ ಬೆನ್ನೆಲಬು ಆಗಿರುವಂಥ ರೈತರು ಈಗಾಗಲೇ ನೊಂದು ಬೆಂದು ಹೋಗಿದ್ದಾರೆ.
ಮುಖ್ಯಮಂತ್ರಿಗಳೇ ರೈತರ ಕಣ್ಣಿರನ್ನು ಒರಿಸಿ, ಸುಪ್ರೀಂ ಕೋರ್ಟ ಆದೇಶದ ವಿರುದ್ಧ ದ್ವನಿಯನ್ನು ಎತ್ತಿ ಈಗಾಗಲೇ ಕನ್ನಡಿಗರು ತುಂಬಾ ಹೋರಾಟಗಳನ್ನು ಮಾಡಿ ನೊಂದು ಬೆಂದು ಹೋಗಿದ್ದಾರೆ. ದಯವಿಟ್ಟು ತಾವುಗಳು ಕಾವೇರಿ ನದಿಯ ನೀರನ ಜೊತೆಗೆ ರಾಜಕೀಯ ಮಾಡಬೇಡಿ, ನಾಡಿನ ಪರವಾಗಿ, ರೈತರ ಪರವಾಗಿ ನಿಲಿಸಿ ಇಲ್ಲವಾದರೇ ಅಧಿಕಾರದಿಂದ ತೊಲಗೆ, ಬೇಡವೇ ಬೇಡ ನೀವು ಬೇಡ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ವಿಜಯಕುಮಾರ ತುಮಕೂನ್, ಶಂಕರ ದೊಡ್ಡಮನಿ, ರಾಜೇಂದ್ರ ಟೈಗರ್, ಅಂಬರೀಷ ಛತ್ರಿ ಸರಡಗಿ, ನಾಗರಾಜ ಮೇತ್ರಿ, ರಾಜು, ಲಿಂಗರಾಜ, ಪ್ರಶಾಂತ, ಲಕ್ಷ್ಮೀಕಾಂತ, ರಾಣೋಜಿ, ವಿಶ್ವರಾಧ್ಯ, ವಿಶ್ವನಾಥ, ರಾಜು, ವಿಶಾಲ, ಶರಣು ಸೇರಿದಂತೆ ಹಲವರು ಪಾಲ್ಗೊಂಡರು.